ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ಅಮ್ಮ; ಇದು ಕರುಳುಹಿಂಡುವ ದೃಶ್ಯ ಎಂದ ನೆಟ್ಟಿಗರು

ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡಿದ್ದು,ಇದು ಸಂಘರ್ಷದ ಕಠೋರ ವಾಸ್ತವತೆಯನ್ನು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ . "ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಉಕ್ರೇನಿಯನ್ ತಾಯಂದಿರು ತಮ್ಮ ಮಕ್ಕಳ ಮೇಲೆ ಕುಟುಂಬದ ಸಂಪರ್ಕಗಳನ್ನು ಬರೆಯುತ್ತಿದ್ದಾರೆ

ಮಗುವಿನ ಬೆನ್ನ ಮೇಲೆ ಮನೆಯ ವಿಳಾಸ ಬರೆದ ಉಕ್ರೇನಿಯನ್ ಅಮ್ಮ; ಇದು ಕರುಳುಹಿಂಡುವ ದೃಶ್ಯ ಎಂದ ನೆಟ್ಟಿಗರು
ಬೆನ್ನ ಮೇಲೆ ಮನೆಯ ವಿಳಾಸ ಬರೆದಿರುವುದುImage Credit source: Instagram
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 05, 2022 | 4:05 PM

ಮುನ್ನುಗುತ್ತಿರುವ  ರಷ್ಯಾದ (Russia) ಪಡೆಗಳಿಂದ ತಾವು ಕೊಲ್ಲಲ್ಪಡುತ್ತೇವೆ ಎಂದು ಭಯಪಡುವ ಉಕ್ರೇನಿಯನ್ (Ukraine) ಕುಟುಂಬಗಳು ತಮ್ಮ ಮಕ್ಕಳ ದೇಹಗಳ ಮೇಲೆ ಕುಟುಂಬದ ವಿವರಗಳನ್ನು ಬರೆಯಲು ಪ್ರಾರಂಭಿಸಿದ್ದಾರೆ. ಈ ಆಘಾತಕಾರಿ ಬೆಳವಣಿಗೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಮಕ್ಕಳ ಫೋಟೋಗಳನ್ನು ಅನೇಕ ಪತ್ರಕರ್ತರು ಟ್ವೀಟ್ ಮಾಡಿದ್ದು,ಇದು ಸಂಘರ್ಷದ ಕಠೋರ ವಾಸ್ತವತೆಯನ್ನು ಎತ್ತಿ ತೋರಿಸುತ್ತಿದೆ ಎಂದಿದ್ದಾರೆ . “ಬದುಕುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಉಕ್ರೇನಿಯನ್ ತಾಯಂದಿರು ತಮ್ಮ ಮಕ್ಕಳ ಮೇಲೆ ಕುಟುಂಬದ ಸಂಪರ್ಕಗಳನ್ನು ಬರೆಯುತ್ತಿದ್ದಾರೆ. ಇತ್ತ ಯುರೋಪ್ ಇನ್ನೂ ಅನಿಲದ ಬಗ್ಗೆ ಚರ್ಚಿಸುತ್ತಿದೆ” ಎಂದು ಸ್ವತಂತ್ರ ಪತ್ರಕರ್ತೆ ಅನಸ್ತಾಸಿಯಾ ಲ್ಯಾಪಾಟಿನಾ (Anastasiia Lapatina) ಟ್ವಿಟರ್‌ನಲ್ಲಿ ಬರೆದು ಅಂತಹ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದು ಚಿಕ್ಕ ಉಕ್ರೇನಿಯನ್ ಹುಡುಗಿಯ ಬೆನ್ನ ಮೇಲೆ ಹೆಸರು ದೂರವಾಣಿ ಸಂಖ್ಯೆಯನ್ನು ಆಕೆಯ ತಾಯಿ ಬರೆದಿರುವುದನ್ನು ತೋರಿಸುತ್ತದೆ. ಮೂರು ದಿನಗಳ ಹಿಂದೆ ಈ ಫೋಟೋವನ್ನು ಬಾಲಕಿಯ ತಾಯಿ ಸಶಾ ಮಕೋವಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಸ್ಥಳೀಯ ಭಾಷೆಯಲ್ಲಿದೆ. ಇದನ್ನು ಗೂಗಲ್​​ನಲ್ಲಿ ಅನುವಾದಿಸಿದಾಗ ಮಹಿಳೆ  ಮಗಳು ವೆರಾಳ ಬೆನ್ನ ಮೇಲೆ “ಏನಾದರೂ ಸಂಭವಿಸಿದಲ್ಲಿ, ಯಾರಾದರೂ ಬದುಳಿದವಳು ಎಂದು ಆಕೆಯನ್ನು ಸ್ವಾಗತಿಸಿ ಎಂದು ಬರೆದಿದ್ದಾರೆ. ಮತ್ತೊಂದು ಫೋಟೋದಲ್ಲಿ,ಕುಟುಂಬವು ಸುರಕ್ಷಿತವಾಗಿದೆ. ಆದರೆ ಅದೇ ವಿವರಗಳನ್ನು ಬರೆದಿರುವ ಕಾಗದದ ತುಂಡನ್ನು ಎಸೆಯಲು ಆಕೆಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಎಂದು ಮಕೋವಿ ಹೇಳಿದ್ದಾರೆ.

ಮಗುವಿನ ಫೋಟೊಗೆ ಪ್ರತಿಕ್ರಿಯಿಸಿದ ಟ್ವಿಟರ್ ಬಳಕೆದಾರರೊಬ್ಬರು “ಹೃದಯ ವಿದ್ರಾವಕ. ಇದನ್ನು ಹೇಳಲು ಯಾವುದೇ ಪದಗಳಿಲ್ಲ ಎಂದಿದ್ದಾರೆ.

ಉಕ್ರೇನ್‌ನಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ನಡೆಯುತ್ತಿರುವ ಯುದ್ಧದಿಂದ ಭಯಾನಕ ದೃಶ್ಯಗಳು ಹೊರಹೊಮ್ಮಿವೆ. ಕಳೆದ ವಾರ ಓಡಿಹೋಗಲು ಪ್ರಯತ್ನಿಸುತ್ತಿರುವಾಗ ರಷ್ಯಾದ ಪಡೆಗಳು ಮಕ್ಕಳನ್ನು “ಮಾನವ ಗುರಾಣಿಗಳಾಗಿ” ಬಳಸುತ್ತಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿತ್ತು.

ಚೆರ್ನಿಹಿವ್‌ನಿಂದ ಅನತಿ ದೂರದಲ್ಲಿರುವ ನೋವಿ ಬೈಕಿವ್ ಗ್ರಾಮದ ಟ್ಯಾಂಕ್‌ಗಳ ಮುಂದೆ ಮಕ್ಕಳನ್ನು ತುಂಬಿದ ಬಸ್‌ಗಳನ್ನು ಇರಿಸಲಾಗುತ್ತಿದೆ ಎಂದು ವರದಿ ಹೇಳಿದೆ. ನಂತರ, ಉಕ್ರೇನಿಯನ್ ರಾಜಧಾನಿ ಕೈವ್‌ನ ಹೊರಗಿನ ಬುಕಾದಲ್ಲಿ ಸಾಮೂಹಿಕ ಸಮಾಧಿ ಮತ್ತು ಕಟ್ಟಿಹಾಕಿದ ದೇಹಗಳ ಅವಶೇಷಳು ಕಂಡು ಬಂದಿವೆ. ಇದು ಜಾಗತಿಕ ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಯುದ್ಧ ಅಪರಾಧಗಳ ಆರೋಪ ಮಾಡಿದರು. “ಬುಕಾದಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ, ಅವರು ಯುದ್ಧ ಅಪರಾಧಿ” ಎಂದು ಬೈಡನ್ ಸೋಮವಾರ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆದಾಗ್ಯೂ, ಬುಕಾ ಸೇರಿದಂತೆ ನಾಗರಿಕರ ಹತ್ಯೆಗೆ ಸಂಬಂಧಿಸಿದ ಯಾವುದೇ ಆರೋಪಗಳನ್ನು ಕ್ರೆಮ್ಲಿನ್ ಸ್ಪಷ್ಟವಾಗಿ ನಿರಾಕರಿಸಿದೆ, ಅಲ್ಲಿ ರಷ್ಯಾವನ್ನು ಕಳಂಕಗೊಳಿಸಲು ಉಕ್ರೇನ್ ಸಮಾಧಿಗಳು ಮತ್ತು ಶವಗಳನ್ನು ಪ್ರದರ್ಶಿಸಿದೆ ಎಂದು ಹೇಳಿದೆ. ಏತನ್ಮಧ್ಯೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೋಮವಾರ ಬುಕಾ ಹತ್ಯೆಗಳನ್ನು “ನರಮೇಧ” ಎಂದು ಕರೆದರು.

ಇದನ್ನೂ ಓದಿ: ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?