ಚೀನಾದಲ್ಲಿ ಕೊವಿಡ್: ಶಾಂಘೈ ನಗರ ಲಾಕ್​ಡೌನ್, ಪ್ರಾಣಿಗಳನ್ನೂ ಮನೆಯಿಂದ ಹೊರಗೆ ಬಿಡುವಂತಿಲ್ಲ

ಕೊವಿಡ್ ತಪಾಸಣೆ ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಜನರು ಮನೆಗಳಿಂದ ಹೊರಬರುವಂತಿಲ್ಲ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ.

ಚೀನಾದಲ್ಲಿ ಕೊವಿಡ್: ಶಾಂಘೈ ನಗರ ಲಾಕ್​ಡೌನ್, ಪ್ರಾಣಿಗಳನ್ನೂ ಮನೆಯಿಂದ ಹೊರಗೆ ಬಿಡುವಂತಿಲ್ಲ
ಚೀನಾದಲ್ಲಿ ಕೊರೊನಾ ಸೋಂಕು ಮತ್ತೆ ವ್ಯಾಪಿಸುತ್ತಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 29, 2022 | 3:34 PM

ಬೀಚಿಂಗ್: ಚೀನಾದ ಹಲವು ನಗರಗಳಲ್ಲಿ ಕೊರೊನಾ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಶಾಂಘೈನಗರದ ಪೂರ್ವಭಾಗದಲ್ಲಿ ಕೊವಿಡ್ ಪ್ರಕರಣಗಳು ನಿರಂತರವಾಗಿ ವರದಿಯಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಮಾಡಲು ಸರ್ಕಾರ ಆದೇಶಿಸಿದೆ. ನಾಯಿಗಳನ್ನು ಓಡಾಡಿಸಲೂ ಮನೆಗಳಿಂದ ಜನರು ಹೊರಗೆ ಬರಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಚೀನಾದಲ್ಲಿ ಮಂಗಳವಾರ 4,477 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಶಾಂಘೈ ಷೇರು ವಿನಿಮಯ ಕೇಂದ್ರ ಸೇರಿದಂತೆ ಹಲವು ಪ್ರಮುಖ ಹಣಕಾಸು ಸಂಸ್ಥೆಗಳಿರುವ ಪುಡೊಂಗ್ ಜಿಲ್ಲೆಯಲ್ಲಿ ನಿರ್ಬಂಧದ ಆದೇಶ ಜಾರಿ ವಿಚಾರದಲ್ಲಿ ಅಲ್ಲಿನ ಆಡಳಿತ ಹೆಚ್ಚು ಗಮನ ಹರಿಸುತ್ತಿದೆ. ಕೊವಿಡ್ ತಪಾಸಣೆ ಹೊರತುಪಡಿಸಿದರೆ ಬೇರೆ ಯಾವುದಕ್ಕೂ ಜನರು ಮನೆಗಳಿಂದ ಹೊರಬರುವಂತಿಲ್ಲ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ.

ತಮ್ಮ ಮನೆಗಳ ಆವರಣದಲ್ಲಿಯೂ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಜನವಸತಿ ಪ್ರದೇಶಗಳಲ್ಲಿರುವ ಪಾರ್ಕಿಂಗ್ ಲಾಟ್, ಗ್ಯಾರೇಜ್​ಗಳು ಮತ್ತು ವಾಕಿಂಗ್ ಪಾತ್​ಗಳಲ್ಲಿಯೂ ಸಂಚಾರ ಸಲ್ಲದು ಎಂದು ಸರ್ಕಾರ ಸೂಚಿಸಿದೆ. ಚೀನಾದ ಆರ್ಥಿಕ ನಾಡಿಮಿಡಿತ ಎನಿಸಿಕೊಂಡಿರುವ ಶಾಂಘೈ ನಗರದ 2.5 ಕೋಟಿ ಜನರ ಸಂಚಾರವನ್ನು ಎರಡು ಹಂತಗಳಲ್ಲಿ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ನಾಲ್ಕು ದಿನಗಳ ಅವಧಿಗೆ ನಗರದ ಅರ್ಧದಷ್ಟು ಭಾಗವನ್ನು ಲಾಕ್​ಡೌನ್ ಆದೇಶದ ಮೂಲಕ ನಿರ್ಬಂಧಿಸಲಾಗಿದೆ. ಈ ಪ್ರದೇಶದಲ್ಲಿ ನಿರ್ಬಂಧ ತೆರವಾದ ನಂತರ ಉಳಿದರ್ಧ ಭಾಗದಲ್ಲಿ ನಿರ್ಬಂಧ ಆದೇಶ ಜಾರಿಯಾಗಲಿದೆ. ಎಲ್ಲ ನಗರವಾಸಿಗಳನ್ನು ಕೊವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಕೊವಿಡ್ ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದರೂ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ.

ಈ ಹಿಂದೆ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾಗ ಜನರಿಗೆ ಮನೆಗಳ ಕಾಂಪೌಂಡ್ ಅಂಚಿನವರೆಗೆ ಓಡಾಡಲು ಅವಕಾಶವಿತ್ತು. ತಮ್ಮ ಕಟ್ಟಡಗಳಲ್ಲಿ ಸೋಂಕು ಕಾಣಿಸಕೊಳ್ಳದಿದ್ದರೆ, ಅಂಥವರಿಗೆ ಬೀದಿಗಳಲ್ಲಿ ಸಂಚರಿಸಲೂ ಅವಕಾಶವಿತ್ತು. ಆದರೆ ಇಂದಿನಿಂದ (ಮಾರ್ಚ್ 29) ಜಾರಿಯಾಗಿರುವ ಹೊಸ ನಿಯಮಗಳ ಪ್ರಕಾರ ಜನರು ಮನೆಗಳಿಂದ ಹೊರಗೆ ಬರಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಚೀನಾದಲ್ಲಿ ಪ್ರಸ್ತುತ 6,886 ಸೋಂಕು ಪ್ರಕರಣಗಳು ವರದಿಯಾಗಿದ್ದು. ತೀವ್ರ ಸೋಂಕು ಇರುವ ರೋಗಿಗಳಿಗೆ ಪಾಕ್ಸ್​ಲೊವಿಡ್ ಮಾತ್ರೆಗಳ ಮೂಲಕ ಚಿಕಿತ್ಸೆ ಕೊಡಲಾಗುತ್ತಿದೆ. 21,000 ಫೈಜರ್ ಲಸಿಕೆಗಳನ್ನು ಚೀನಾ ಆಮದು ಮಾಡಿಕೊಂಡಿದೆ. ಚೀನಾದ ರಾಷ್ಟ್ರೀಯ ಸರ್ಕಾರದೊಂದಿಗೆ ಶಾಂಘೈನ ಸ್ಥಳೀಯ ಆಡಳಿತವೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದೆ.

‘ಕೊರೊನಾ ಲಾಕ್​ಡೌನ್​ನಿಂದಾಗಿ ಸ್ಥಳೀಯ ವ್ಯಾಪಾರ ವಹಿವಾಟು ಸಹ ಹಿನ್ನಡೆ ಅನುಭವಿಸುತ್ತಿದೆ. ಜನರ ನೆರವಿಗೆ ಬಂದಿರುವ ಸರ್ಕಾರವು ತೆರಿಗೆ ವಿನಾಯ್ತಿ, ಬಾಡಿಗೆ ಕಟ್ಟಲು ಹೆಚ್ಚಿನ ಸಮಯಾವಕಾಶ ಅಥವಾ ವಿನಾಯ್ತಿ ಮತ್ತು ವಿಶೇಷ ಸಾಲ ಯೋಜನೆಗಳನ್ನು ಘೋಷಿಸಿದೆ. ಚೀನಾದ ಚಿಲ್ಲರೆ ವ್ಯಾಪಾರಿಗಳು ಮತ್ತು ಹೊಟೆಲ್ ಉದ್ಯಮಕ್ಕೆ ಲಾಕ್​ಡೌನ್ ಆದೇಶದಿಂದ ಹೆಚ್ಚಿನ ಸಮಸ್ಯೆಯಾಗಿದೆ ಎಂದು ಶಾಂಘೈನ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಾರಿ ಚೀನಾದಲ್ಲಿ ಒಮಿಕ್ರಾನ್​ನ ರೂಪಾಂತರಿಯಿಂದ ಸೋಂಕು ಹರಡುತ್ತಿದ್ದು, ಅತ್ಯಂತ ವೇಗವಾಗಿ ಸಮುದಾಯದಲ್ಲಿ ವ್ಯಾಪಿಸುತ್ತಿದೆ.

ಕೊರೊನಾ ಇಡೀ ಜಗತ್ತನ್ನು ವ್ಯಾಪಿಸಿದ್ದಾಗಲೂ ಚೀನಾ ಸರ್ಕಾರ ಶಾಂಘೈ ಬಂದರು ಮುಚ್ಚಿರಲಿಲ್ಲ. ಅದು ಎಂದಿನಂತೆ ಸಹಜವಾಗಿ ಕೆಲಸ ಮಾಡುತ್ತಿತ್ತು. ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಕಡಿಮೆ ದುಷ್ಪರಿಣಾಮ ಬೀರುವ ಮತ್ತು ಜನರ ಆರೋಗ್ಯ ಕಾಪಾಡುವ ರೀತಿಯಲ್ಲಿ ನಿರ್ಬಂಧ ಆದೇಶಗಳನ್ನು ಜಾರಿಗೊಳಿಸಬೇಕೆಂದು ಅಧ್ಯಕ್ಷ ಷಿ-ಜಿನ್​ಪಿಂಗ್ ನೀಡಿರುವ ಸಲಹೆಯನ್ನು ಪಾಲಿಸುವುದು ಚೀನಾದ ಅಧಿಕಾರಿಗಳಿಗೆ ಕಷ್ಟವಾಗುತ್ತಿದೆ. ಚೀನಾದ ರಾಜಧಾನಿ ಬೀಜಿಂಗ್​ನ ಸುತ್ತಮುತ್ತಲ ಹಲವು ನಗರಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಹಲವು ವಾರಗಳಿಂದ ಲಾಂಗ್​ಫಾಂಗ್ ಮತ್ತು ತಂಗ್​ಶಾನ್ ನಗರಗಳನ್ನು ಲಾಕ್​ಡೌನ್ ಮಾಡಲಾಗಿದೆ. ಶಾಂಘೈನಲ್ಲಿ ಲಾಕ್​ಡೌನ್ ಆದೇಶ ಜಾರಿಗೊಳಿಸಿದ ನಂತರ ಚೀನಾದ 6.2 ಕೋಟಿ ಜನರು ನಿರ್ಬಂಧಗಳ ಅಡಿಯಲ್ಲಿ ದಿನದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್