ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್​​ಡೌನ್​​

| Updated By: Lakshmi Hegde

Updated on: Oct 28, 2021 | 3:32 PM

ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ 30ರಂದ ನವೆಂಬರ್​ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಘೋಷಣೆ ಮಾಡಿದ್ದಾರೆ.

ಚೀನಾ ಆಯ್ತು ಈಗ ರಷ್ಯಾ: ಮಿತಿಮೀರಿದ ಕೊರೊನಾ ಸೋಂಕು, ಮಾಸ್ಕೋದಲ್ಲಿ 11 ದಿನ ಲಾಕ್​​ಡೌನ್​​
ಮಾಸ್ಕೋದಲ್ಲಿ ಮತ್ತೆ ಲಾಕ್​ಡೌನ್​
Follow us on

ಮಾಸ್ಕೋ:  ಚೀನಾದಲ್ಲಿ ಕೊರೊನಾ (Coronavirus) ಹೆಚ್ಚಳವುಂಟಾಗಿ ಎರಡ್ಮೂರು ನಗರಗಳು ಸಂಪೂರ್ಣ ಲಾಕ್​​ಡೌನ್​ ಆಗಿರುವ ಬೆನ್ನಲ್ಲೇ ರಷ್ಯಾದಲ್ಲೂ ಕೂಡ ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.  ಈ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋದಲ್ಲಿ 11 ದಿನಗಳ ಕಾಲ ಲಾಕ್​ಡೌನ್ (Lockdown)​ ಘೋಷಿಸಲಾಗಿದ್ದು, ಇಂದು ಅಂಗಡಿಗಳು, ಶಾಲೆಗಳು, ರೆಸ್ಟೋರೆಂಟ್​​ಗಳೆಲ್ಲ ಬಂದ್​ ಆಗಿವೆ.  ಅಗತ್ಯವಲ್ಲದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಅಂದರೆ, ರೆಸ್ಟೋರೆಂಟ್​ಗಳು, ಚಿಲ್ಲರೆ ವ್ಯಾಪಾರ ಅಂಗಡಿಗಳು, ಮನರಂಜನಾ ಸ್ಥಳಗಳು, ಶಾಲೆಗಳು ನವೆಂಬರ್​ 7ರವರೆಗೆ ಮುಚ್ಚಿರುತ್ತವೆ ಎಂದು ಸ್ಥಳೀಯ ಸರ್ಕಾರ ಘೋಷಿಸಿದೆ.  ಇನ್ನು ಆಹಾರ ಮತ್ತು ಔಷಧ ಪೂರೈಕೆಗಳಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದೂ ಹೇಳಲಾಗಿದೆ.  

ರಷ್ಯಾದಲ್ಲಿ ಮತ್ತೀಗ ಕೊರೊನಾ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ವಿಧಿಸಲಾಗಿದೆ.  ಒಟ್ಟಾರೆ ಕೊರೊನಾದಿಂದ ಅತ್ಯಂತ ಹೆಚ್ಚು ಹಾನಿಗೆ ಒಳಗಾದ ರಾಷ್ಟ್ರಗಳಲ್ಲಿ ರಷ್ಯಾ ಕೂಡ ಒಂದು. ಅಲ್ಲಿ ಇದುವರೆಗೆ ಸುಮಾರು 2,30,000 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.  ರಷ್ಯಾದಲ್ಲಿ ಕೊರೊನಾ ಲಸಿಕೆಯನ್ನೂ ಕೂಡ ನೀಡಲಾಗುತ್ತಿದೆ. ರಷ್ಯಾದಲ್ಲಿ ತಯಾರಾದ ಸ್ಪುಟ್ನಿಕ್​ ವಿ ಕೊರೊನಾ ಲಸಿಕೆಯನ್ನೇ ಜನರಿಗೆ ಕೊಡಲು ಪ್ರಯತ್ನಿಸಲಾಗುತ್ತಿದೆ. ಆದರೆ ರಷ್ಯಾದ ಜನರು ಕೊವಿಡ್​ 19 ಲಸಿಕೆ ಹಾಕಿಸಿಕೊಳ್ಳಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.  ಇಂದಿನವರೆಗೆ ರಷ್ಯಾದಲ್ಲಿ ಕೇವಲ ಶೇ.32ರಷ್ಟು ಜನರಿಗೆ ಮಾತ್ರ ಕೊವಿಡ್​ 19 ಲಸಿಕೆ ನೀಡಿ ಮುಗಿದಿದೆ. ಈ ಬಗ್ಗೆ ರಷ್ಯಾ ಸರ್ಕಾರದ ವೆಬ್​​ಸೈಟ್​​ನಲ್ಲಿಯೇ ದಾಖಲಾಗಿದೆ.

ಇನ್ನು ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ 30ರಂದ ನವೆಂಬರ್​ 7ರವರೆಗೆ ವೇತನ ಸಹಿತ ಸರ್ಕಾರಿ ರಜೆಯನ್ನು ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಘೋಷಣೆ ಮಾಡಿದ್ದಾರೆ. ಮಾಸ್ಕೋ ನಗರದಲ್ಲಿ ಇಂದು ಮುಂಜಾನೆಯಿಂದಲೇ ಲಾಕ್​ಡೌನ್​ ಪರಿಣಾಮ ಕಾಣಿಸಿದೆ. ವಾಹನ ಸಂಚಾರ ಕಡಿಮೆ ಇತ್ತು. ಜನರ ಓಡಾಟವೂ ವಿರಳವಾಗಿತ್ತು. ಆದರೆ ಮೆಟ್ರೋ ಬಳಿ ಮಾತ್ರ ಎಂದಿನಂತೆ ಜನಜಂಗುಳಿಯಿತ್ತು. ಅದರಲ್ಲೂ ಹಲವರು ಮಾಸ್ಕ್​ ಧರಿಸದೆ ಓಡಾಡುತ್ತಿದ್ದರು.  ಅಕ್ಟೋಬರ್ 30ರಿಂದ ವೇತನ ಸಹಿತ ರಜೆ ಘೋಷಣೆಯಾಗಿದ್ದರಿಂದ ಅಲ್ಲಿನ ಜನರು ಇಂದಿನಿಂದಲೇ ಪ್ರವಾಸಿ ತಾಣಗಳು, ಮತ್ತಿತರ ಕಡೆ ಕುಟುಂಬ ಸಮೇತ ಹೊರಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.  ನಿನ್ನೆ ಒಂದೇ ದಿನ ರಷ್ಯಾದಲ್ಲಿ ಕೊವಿಡ್​ 19 ನಿಂದ 1,123 ಮಂದಿ ಮೃತಪಟ್ಟಿದ್ದು ವರದಿಯಾಗಿದೆ.

ಇದನ್ನೂ ಓದಿ: ಜಾನ್ವಿ ಕಪೂರ್​ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ

T20 World Cup 2021: ಟೂರ್ನಿಯಿಂದ ಹೊರಬೀಳುವ ಭಯ! ಕೊಹ್ಲಿ ತಲೆನೋವು ಹೆಚ್ಚಿಸಿವೆ ತಂಡದ ಈ 4 ಸಮಸ್ಯೆಗಳು