ಡೈವೋರ್ಸ್​: ದುಬೈ ದೊರೆ ತನ್ನ 6ನೇ ಪತ್ನಿಗೆ 5555 ಕೋಟಿ ರೂ ಜೀವನಾಂಶ ನೀಡಲು ಸೂಚಿಸಿದ ಲಂಡನ್​ ಕೋರ್ಟ್​! ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ

| Updated By: ಸಾಧು ಶ್ರೀನಾಥ್​

Updated on: Dec 22, 2021 | 1:03 PM

ದುಬೈ ಶೇಕ್ ಬಾಬು (Sheikh Mohammed bin Rashid Al Maktoum) ತಮ್ಮ ವಿಚ್ಛೇದಿತ ಪತ್ನಿ ಹಯಾ (Princess Haya Bint Al Hussein) ಮತ್ತು ಇಬ್ಬರು ಮಕ್ಕಳಿಗೆ ಜೀವನಾಂಶವಾಗಿ ಅಬ್ಬಬ್ಬಾ ಅನ್ನುವಷ್ಟು 5,555 ಕೋಟಿ ರೂಪಾಯಿ (734 ಮಿಲಿಯನ್​ ಅಮೆರಿಕನ್ ಡಾಲರ್) ನೀಡುವಂತೆ ಲಂಡನ್​ ಕುಟುಂಬ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.

ಡೈವೋರ್ಸ್​: ದುಬೈ ದೊರೆ ತನ್ನ 6ನೇ ಪತ್ನಿಗೆ 5555 ಕೋಟಿ ರೂ ಜೀವನಾಂಶ ನೀಡಲು ಸೂಚಿಸಿದ ಲಂಡನ್​ ಕೋರ್ಟ್​! ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ
ಡೈವೋರ್ಸ್​: ದುಬೈ ದೊರೆ ತನ್ನ 6ನೇ ಪತ್ನಿಗೆ 5555 ಕೋಟಿ ರೂ ಜೀವನಾಂಶ ನೀಡಲು ಸೂಚಿಸಿದ ಲಂಡನ್​ ಕೋರ್ಟ್​! ಇಲ್ಲಿದೆ ಇಂಟರೆಸ್ಟಿಂಗ್​ ಕಹಾನಿ
Follow us on

ಲಂಡನ್: ದುಬೈನ ರೋಚಕ ಕತೆಯೊಂದು ಲಂಡನ್​ನಲ್ಲಿ ಕೊನೆಗೊಳ್ಳುವಂತಾಗಿದೆ. ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳು ಅಂದರೇನೆ ಅದೊಂದು ಮಾಯಾಲೋಕ. ಅಲ್ಲಿನ ಷೇಕ್​ಗಳು, ದೊರೆಗಳ ಐಷಾರಾಮಿ, ವಿಲಾಸಿಜೀವನಕ್ಕೆ ಎಣೆಯುಂಟೆ? ಬಂಗಾರದಂತಹ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆಯಲ್ಲಿ ವೈಭೋಗದ ಜೀವನ ಕಾಣುತ್ತಿರುವ ದುಬೈ ದೊರೆಗಳ ಬದುಕು ವಿಲಾಸದ್ದು. ಹೀಗಿರುವಾಗ 72 ವರ್ಷ ವಯಸ್ಸಿನ ದುಬೈ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಕ್ ಮಹಮ್ಮದ್ ಬಿನ್ ರಶೀದ್ ಅಲ್​ ಮುಕ್ತುಮ್ ತನ್ನ 6ನೆಯ ಪತ್ನಿಗೆ (ಹೌದು ಆರನೆಯ ಪತ್ನಿಯೇ) ವಿಚ್ಛೇದನ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಆದರೆ ಈ ವಿಚ್ಛೇದನಕ್ಕೆ (Divorce) ಅವರು ಎಷ್ಟು ಖರ್ಚು ಮಾಡಿದರು ಎಂಬುದೇ ಸದ್ಯದ ಕುತೂಹಲ.

ದುಬೈ ಶೇಕ್ ಬಾಬು (Sheikh Mohammed bin Rashid Al Maktoum) ತಮ್ಮ ವಿಚ್ಛೇದಿತ ಪತ್ನಿ ಹಯಾ (Princess Haya Bint Al Hussein) ಮತ್ತು ಇಬ್ಬರು ಮಕ್ಕಳಿಗೆ ಜೀವನಾಂಶವಾಗಿ ಅಬ್ಬಬ್ಬಾ ಅನ್ನುವಷ್ಟು 5,555 ಕೋಟಿ ರೂಪಾಯಿ (734 ಮಿಲಿಯನ್​ ಅಮೆರಿಕನ್ ಡಾಲರ್) ನೀಡುವಂತೆ ಲಂಡನ್​ ಕುಟುಂಬ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ. ಅದೂ 3 ತಿಂಗಳ ಒಳಗೆ ಸೆಟ್ಲ್​​ ಮಾಡಬೇಕಂತೆ! ಇದು ಲಂಡನ್​ ಕುಟುಂಬ ನ್ಯಾಯಾಲಯ (U.K. family court) ವಿಧಿಸಿರುವ ಗರಿಷ್ಠ ಮೊತ್ತದ ಜೀವನಾಂಶ ಶಿಕ್ಷೆಯಾಗಿದೆ.

ರಾಜಕುಮಾರಿ ಹಯಾ

ಅಷ್ಟಕ್ಕೂ ಈ 72 ವರ್ಷ ವಯಸ್ಸಿನ ದುಬೈ ಬಾಬು ತನ್ನ ಆರನೆಯ ಪತ್ನಿಗೆ ವಿಚ್ಛೇದನ ಕೊಟ್ಟಿದ್ದು ಯಾಕಪ್ಪಾ ಎಂಬುದೂ ಇಂಟರೆಸ್ಟಿಂಗ್​ ಆಗಿದೆ. ರಾಜಕುಮಾರಿ ಹಯಾ ತನ್ನ ಪತಿಯಾದ ದುಬೈ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಕ್​ನ ಬಾಡಿಗಾರ್ಡ್​ ಜೊತೆ ಸಂಬಂಧ ಹೊಂದಿದ್ದರು. ಅದು ಜಗತ್ತಿಗೆ ಗೊತ್ತಾಗುತ್ತಿದ್ದಂತೆ ದುಬೈ ಶೇಕ್ ಬಾಬು ಕೆರಳಿ ಕೆಂಡವಾದರು. ಮುಂದೆ ದುಬೈನಲ್ಲಿ ರಾಜಕುಮಾರಿ ಹಯಾ ಬದುಕು ನಡೆಸುವುದು ದುಸ್ತರವಾಯಿತು. ಜೀವಭಯದ ಕಾರಣ 2019ರಲ್ಲಿ ಬ್ರಿಟನ್​ಗೆ ಓಡಿ ಬಂದಿದ್ದರು. ಅದಾದಮೇಲೆ ಶೇಖ್​ ಮಹಮ್ಮದ್ ತಮ್ಮ ಪತ್ನಿ ಹಯಾಗೆ ಅನಿವಾರ್ಯವಾಗಿ ವಿಚ್ಛೇದನ ನೀಡಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ, ನೋಯ್ಡಾದಲ್ಲಿ ಗಂಭೀರ

Published On - 10:46 am, Wed, 22 December 21