ಕೊನೆಯ ಸಿಖ್‌ ಮಹಾರಾಜನ ಮೊಮ್ಮಗ, ಕ್ವಿನ್‌ ವಿಕ್ಟೋರಿಯಾಳ ಗಾಡ್‌ಸನ್‌ನ ಲಂಡನ್‌ ಮನೆ 150ಕೋಟಿಗೆ ಮಾರಾಟ

ಲಂಡನ್‌: ಲಾಹೋರ್‌ನ ಕೊನೆಯ ಸಿಖ್‌ ಮಹಾರಾಜ ದುಲೀಪ್‌ ಸಿಂಗ್‌ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಸಿಂಗ್‌ ಅವರ ಲಂಡನ್‌ನ ಮನೆ 150 ಕೋಟಿಗೆ ಮಾರಾಟವಾಗಿದೆ. ಹೌದು ಅವಿಭಜಿತ ಭಾರತದಲ್ಲಿ ಲಾಹೋರ್‌ನ ಸಿಖ್‌ ರಾಜಮನೆತನದ ಕೊನೆಯ ರಾಜನಾಗಿದ್ದ ಮಹಾರಾಜ ದುಲೀಪ್‌ ಸಿಂಗ್‌ ದೇಶದಿಂದ ಗಡಿಪಾರಾಗಿದ್ದಾಗ ಲಂಡನ್‌ನಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ಸಿಂಗ್‌ ಲಂಡನ್‌ನಲ್ಲಿ ನೆಲೆಸಿದ್ದ ಲಿಟಲ್‌‌ ಬೋಲ್ಟನ್ಸ್‌ ಮನೆ ಈಗ ಮಾರಾಟವಾಗಿದೆ. ಐದು ಬೆಡ್‌ರೂಮ್‌ಗಳ ಈ ಐಸಾರಾಮಿ ಮನೆಯಲ್ಲಿ ಸರ್‌ […]

ಕೊನೆಯ ಸಿಖ್‌ ಮಹಾರಾಜನ ಮೊಮ್ಮಗ, ಕ್ವಿನ್‌ ವಿಕ್ಟೋರಿಯಾಳ ಗಾಡ್‌ಸನ್‌ನ ಲಂಡನ್‌ ಮನೆ 150ಕೋಟಿಗೆ ಮಾರಾಟ
Follow us
Guru
|

Updated on:Aug 24, 2020 | 7:11 PM

ಲಂಡನ್‌: ಲಾಹೋರ್‌ನ ಕೊನೆಯ ಸಿಖ್‌ ಮಹಾರಾಜ ದುಲೀಪ್‌ ಸಿಂಗ್‌ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಸಿಂಗ್‌ ಅವರ ಲಂಡನ್‌ನ ಮನೆ 150 ಕೋಟಿಗೆ ಮಾರಾಟವಾಗಿದೆ.

ಹೌದು ಅವಿಭಜಿತ ಭಾರತದಲ್ಲಿ ಲಾಹೋರ್‌ನ ಸಿಖ್‌ ರಾಜಮನೆತನದ ಕೊನೆಯ ರಾಜನಾಗಿದ್ದ ಮಹಾರಾಜ ದುಲೀಪ್‌ ಸಿಂಗ್‌ ದೇಶದಿಂದ ಗಡಿಪಾರಾಗಿದ್ದಾಗ ಲಂಡನ್‌ನಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ಸಿಂಗ್‌ ಲಂಡನ್‌ನಲ್ಲಿ ನೆಲೆಸಿದ್ದ ಲಿಟಲ್‌‌ ಬೋಲ್ಟನ್ಸ್‌ ಮನೆ ಈಗ ಮಾರಾಟವಾಗಿದೆ.

ಐದು ಬೆಡ್‌ರೂಮ್‌ಗಳ ಈ ಐಸಾರಾಮಿ ಮನೆಯಲ್ಲಿ ಸರ್‌ ದುಲೀಪ್‌ ಸಿಂಗ್‌ ನಂತರ ಅವರ ಮಗ ವಿಕ್ಟರ್‌ ತಮ್ಮ ಬ್ರಿಟಿಷ್‌‌‌ ಪತ್ನಿ ಌನ್‌ ಕೋವೆಂಟ್ರಿ ಜತೆ ಇಲ್ಲಿಯೇ ನೆಲೆಸಿದ್ದರು. ಆದರೆ ಕಾಲಾನಂತರ ಅತಿಯಾದ ವೈಭವದ ಜೀವನ ನಡೆಸಿದ್ದ ಪ್ರಿನ್ಸ್‌ ದಿವಾಳಿಯಾಗಿದ್ದರು. ಆದ್ರೆ ಈಸ್ಟ್‌ ಇಂಡಿಯಾ ಕಂಪನಿಯಿಂದ ಬಳುವಳಿಯಾಗಿ ಬಂದಿದ್ದ ಈ ಮನೆಯನ್ನು ಹಾಗೇಯೇ ಉಳಿಸಿಕೊಳ್ಳಲಾಗಿತ್ತು.

2010ರಲ್ಲಿ ಈ ಮನೆಯನ್ನು ಸಾಂಪ್ರದಾಯಿಕ ಶೈಲಿಯಿಂದ ಆಧುನಿಕ ಜೀವನ ಶೈಲಿಗೆ ಮಾರ್ಪಡಿಸಲಾಗಿತ್ತು. ಆಗಿನಿಂದ ಒಬ್ಬ ಶ್ರೀಮಂತ ವ್ಯಕ್ತಿಯ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಅತ್ಯಾಧುನಿಕ ಶೈಲಿಯ ರೀತಿಯಲ್ಲಿ ಪರಿಸ್ಕರಿಸಿದ್ದ ಈ ಮನೆ ಈಗ 15,.5 ಮಿಲಿಯನ್‌ ಪೌಂಡ್ಸ್‌‌ ಅಂದ್ರೆ ಸುಮಾರು 150 ಕೋಟಿ ರೂ.ಗಳಿಗೆ ಮಾರಾಟವಾಗಿದೆ.

ಅಂದ ಹಾಗೇ ಈ ಮನೆಯಲ್ಲಿ ವಾಸವಾಗಿದ್ದ ಪ್ರಿನ್ಸ್‌ ವಿಕ್ಟರ್‌ ಇಂಗ್ಲೆಂಡ್‌ನ ಮಹಾರಾಣಿಯ ವಂಶಸ್ಥೆ ಌನ್‌ ಕೋವೆಂಟ್ರಿಯನ್ನು ಮದುವೆಯಾಗಿದ್ದ. ಆ ಕಾಲದಲ್ಲಿ ನಡೆದ ಕೆಲವೇ ಕೆಲ ಅಂತರ್‌ ವರ್ಣೀಯರ ನಡುವೆ ನಡೆದ ಮದುವೆ ಇದಾಗಿತ್ತು. ಇದಕ್ಕೆ ಕೆಲ ಬ್ರಿಟನ್‌ನ ಬಿಳಿಯ ವರ್ಣವಾದದ ಕೆಲ ಸೋಶಿಯಲೈಟ್ಸ್‌ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಬ್ರಿಟನ್ನಿನ ಆಗಿನ ಯುವರಾಜನಾಗಿದ್ರ ಎಡ್ವರ್ಡ್‌ನ ಬೆಂಬಲ ಇದ್ದುದರಿಂದ ಉಳಿದವರು ಸುಮ್ಮನಾಗಿದ್ದರು.

Published On - 7:08 pm, Mon, 24 August 20

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?