ಅಂಚೆ ಪೆಟ್ಟಿಗೆಯಲ್ಲಿ ಸಿಕ್ಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನ್ನಡಕ 2.55 ಕೋಟಿಗೆ ಮಾರಾಟ!
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಳಸುತ್ತಿದ್ದ ಬಂಗಾರ ಲೇಪಿತ ಕನ್ನಡಕವೊಂದು ಬರೋಬ್ಬರಿ 2.55 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇಂಗ್ಲೆಂಡ್ ರಾಜಧಾನಿ ಲಂಡನ್ನ ಪ್ರತಿಷ್ಠಿತ ಈಸ್ಟ್ ಬ್ರಿಸ್ಟಲ್ ಹರಾಜು ಸಂಸ್ಥೆ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಗಾಂಧೀಜಿಯವರ ಕನ್ನಡಕವು 2 ಲಕ್ಷ 60 ಸಾವಿರ ಪೌಂಡ್ಗಳಿಗೆ ಮಾರಾಟವಾಗಿದೆ. ಈಸ್ಟ್ ಬ್ರಿಸ್ಟಲ್ ಹರಾಜು ಸಂಸ್ಥೆಗೆ ಈ ಕನ್ನಡಕ ಸಿಕ್ಕಿದೇ ಒಂದು ಅಚ್ಚರಿಯ ಸಂಗತಿ. ಕಳೆದ ನಾಲ್ಕು ವಾರಗಳ ಹಿಂದೆ ಯಾರೋ ಮಹಾಶಯರು ಈ ಕನ್ನಡಕವನ್ನು ಸಂಸ್ಥೆಯ ಅಂಚೆಪೆಟ್ಟಿಗೆಯಲ್ಲಿ ಇಟ್ಟು ಹೋಗಿದ್ದರಂತೆ. ಈ ಅಪರಿಚಿತ […]
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಳಸುತ್ತಿದ್ದ ಬಂಗಾರ ಲೇಪಿತ ಕನ್ನಡಕವೊಂದು ಬರೋಬ್ಬರಿ 2.55 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಇಂಗ್ಲೆಂಡ್ ರಾಜಧಾನಿ ಲಂಡನ್ನ ಪ್ರತಿಷ್ಠಿತ ಈಸ್ಟ್ ಬ್ರಿಸ್ಟಲ್ ಹರಾಜು ಸಂಸ್ಥೆ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಗಾಂಧೀಜಿಯವರ ಕನ್ನಡಕವು 2 ಲಕ್ಷ 60 ಸಾವಿರ ಪೌಂಡ್ಗಳಿಗೆ ಮಾರಾಟವಾಗಿದೆ.
ಈಸ್ಟ್ ಬ್ರಿಸ್ಟಲ್ ಹರಾಜು ಸಂಸ್ಥೆಗೆ ಈ ಕನ್ನಡಕ ಸಿಕ್ಕಿದೇ ಒಂದು ಅಚ್ಚರಿಯ ಸಂಗತಿ. ಕಳೆದ ನಾಲ್ಕು ವಾರಗಳ ಹಿಂದೆ ಯಾರೋ ಮಹಾಶಯರು ಈ ಕನ್ನಡಕವನ್ನು ಸಂಸ್ಥೆಯ ಅಂಚೆಪೆಟ್ಟಿಗೆಯಲ್ಲಿ ಇಟ್ಟು ಹೋಗಿದ್ದರಂತೆ. ಈ ಅಪರಿಚಿತ ಮಹಾನುಭಾವನ ದೊಡ್ಡಪ್ಪ 1920ರ ದಶಕದಲ್ಲಿ ಸೌಥ್ ಆಫ್ರಿಕಾದ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗಾಂಧೀಜಿ ತಮ್ಮ ಕನ್ನಡಕವನ್ನು ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದರಂತೆ.
ತಮಗೆ ಸಹಾಯ ಮಾಡುತ್ತಿದ್ದವರಿಗೆ ಅಥವಾ ತಮ್ಮಿಂದ ನೆರವು ಬಯಸುತ್ತಿದ್ದವರಿಗೆ ಸದಾ ಸ್ಪಂದಿಸುತ್ತಿದ್ದ ಗಾಂಧೀಜಿ ತಮ್ಮ ದೈನಂದಿನಲ್ಲಿ ಬಳಸುತ್ತಿದ್ದ ಹಲವು ಸಾಧನಗಳನ್ನು ಮರುಯೋಚಿಸದೆ ನೀಡಿಬಿಡುತ್ತಿದ್ದರಂತೆ. ಅಂದು ನೆನಪಿನ ಕಾಣಿಕೆಯಾಗಿ ನೀಡಿದ್ದ ಕನ್ನಡಕವು ಇಂದು 2.55 ಕೋಟಿ ರೂಪಾಯಿಗೆ ಮಾರಾಟವಾಗಿರುವುದು ನಿಜಕ್ಕೂ ಅಚ್ಚರಿಯೇ ಸರಿ. ಅಂದ ಹಾಗೆ, ಹರಾಜು ಸಂಸ್ಥೆಯ ಪ್ರಕಾರ ಕನ್ನಡಕವು ಎಷ್ಟು ಮೊತ್ತಕ್ಕೆ ಮಾರಾಟವಾಗಬಹುದು ಎಂದು ಅಂದಾಜಿಸಿದ್ದರು ಗೊತ್ತಾ? ಕೇವಲ 15 ಸಾವಿರ ಪೌಂಡ್ಸ್ (15 ಲಕ್ಷ ರೂ.)
https://www.facebook.com/EastBristolAuctions/photos/a.371683686217493/3484033578315806/