ಪ್ರಯಾಣಿಕರಿದ್ದ ಪಾಕ್​ ವಿಮಾನವನ್ನು ಸೀಜ್​ ಮಾಡಿದ ಮಲೇಷ್ಯಾ ಸರ್ಕಾರ, ಯಾಕೆ?

|

Updated on: Jan 16, 2021 | 4:33 PM

ಬೋಯಿಂಗ್​-777 ಸೇರಿ ಎರಡು ವಿಮಾನವನ್ನು ಪಿಐಎ ಮಲೇಷಿಯಾದಿಂದ ಗುತ್ತಿಗೆ ಪಡೆದಿತ್ತು. ಆದರೆ, ಗುತ್ತಿಗೆ ಹಣ ಪಾವತಿಸದೇ ಪಾಕಿಸ್ತಾನ ಸತಾಯಿಸುತ್ತಲೇ ಬಂದಿತ್ತು. ಈಗ ಸ್ಥಳೀಯ ಕೋರ್ಟ್​ ವಿಮಾನ ವಶಕ್ಕೆ ಪಡೆಯುವಂತೆ ಆದೇಶಿಸಿತ್ತು.

ಪ್ರಯಾಣಿಕರಿದ್ದ ಪಾಕ್​ ವಿಮಾನವನ್ನು ಸೀಜ್​ ಮಾಡಿದ ಮಲೇಷ್ಯಾ ಸರ್ಕಾರ, ಯಾಕೆ?
ಸಾಂದರ್ಭಿಕ ಚಿತ್ರ
Follow us on

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿ ತಲುಪುತ್ತಿದೆ. ಈ ಮೊದಲು ಚೀನಾಗೆ ಕತ್ತೆಗಳನ್ನು ಮಾರಿ ಪಾಕಿಸ್ತಾನ ದುಡ್ಡು ಸಂಪಾದಿಸಿದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈಗ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗಿದೆ. ಗುತ್ತಿಗೆ ಹಣ ಪಾವತಿ ಮಾಡದ ಪಾಕಿಸ್ತಾನ ಇಂಟರ್​ನ್ಯಾಷನಲ್​ ಏರ್​​ಲೈನ್ಸನ್​​ (ಪಿಐಎ) ವಿಮಾನ ಒಂದನ್ನು ಮಲೇಷ್ಯಾ ಅಧಿಕಾರಿಗಳು ಸೀಜ್​ ಮಾಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ಇರುವಾಗಲೇ ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ಅಂದ ಹಾಗೆ, ಬೋಯಿಂಗ್​-777 ಸೇರಿ ಎರಡು ವಿಮಾನಗಳನ್ನು ಪಿಐಎ ಮಲೇಷ್ಯಾದಿಂದ ಗುತ್ತಿಗೆ ಪಡೆದಿತ್ತು. ಆದರೆ, ಗುತ್ತಿಗೆ ಹಣ ಪಾವತಿಸದೇ ಪಾಕಿಸ್ತಾನ ಸತಾಯಿಸುತ್ತಲೇ ಬಂದಿತ್ತು. ಈಗ ಸ್ಥಳೀಯ ಕೋರ್ಟ್​ ವಿಮಾನ ವಶಕ್ಕೆ ಪಡೆಯುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಬೋಯಿಂಗ್​-777 ವಿಮಾನವನ್ನು ಕೌಲಾಲಂಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಇನ್ನು, ವಿಮಾನವನ್ನು ವಶಕ್ಕೆ ಪಡೆಯುವಾಗ ಪ್ರಯಾಣಿಕರು ವಿಮಾನದಲ್ಲಿ ಉಪಸ್ಥಿತರಿದ್ದರು. ಏರ್​ಲೈನ್ಸ್​ನ ಸಿಬ್ಬಂದಿ ಕೂಡ ಇದ್ದರು. ಈಗ ಮಲೇಷ್ಯಾ ಸರ್ಕಾರ ಇವರ ಪ್ರಯಾಣಕ್ಕೆ ಬೇರೆ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ.

ಇನ್ನು, ಘಟನೆ ಕುರಿತು ಪಾಕಿಸ್ತಾನ್​ ಇಂಟರ್​ನ್ಯಾಷನಲ್​ ಏರ್​ಲೈನ್​ ಆಕ್ರೋಶ ಹೊರಹಾಕಿದೆ. ಬಾಕಿ ಮೊತ್ತ ಹಿಂದಿರುಗಿಸುವ ಪ್ರಕರಣದ ವಿಚಾರಣೆ ಇಂಗ್ಲೆಂಡ್​ ಕೋರ್ಟ್​​ನಲ್ಲಿ ನಡೆಯುತ್ತಿದೆ. ಹೀಗಿರುವಾಗಲೇ, ಮಲೇಷ್ಯಾ ಸರ್ಕಾರ ಒಮ್ಮುಖವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದೆ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ