ಎಚ್ಚರಾ! 154 ದಿನ ಬಿಟ್ಟು ಬಿಡದೆ ಕಾಡಿದ ಕೊರೊನಾಕ್ಕೆ ಬಡಪಾಯಿ ಬಲಿ.. ಏನಾಗಿತ್ತು?

| Updated By: ಪೃಥ್ವಿಶಂಕರ

Updated on: Nov 12, 2020 | 12:15 PM

ಯಾರಿಗೆ ಬೇಕಪ್ಪಾ ಕೊರೊನಾ ಸಹವಾಸ. ಪಾಸಿಟಿವ್ ಬಂತು ಅಂದ್ರೆ 15-20 ದಿನ ಇದ್ದಲ್ಲೇ ಇರ್ಬೇಕು, ಯಾರ ಹತ್ತಿರವೂ ಹೋಗಂಗಿಲ್ಲ, ಸುತ್ತಾಡಂಗಿಲ್ಲ, ಮನೆಯೇ ಜೈಲಿನಂತಾಗುತ್ತೆ ಅಂತ ನಾವು, ನೀವು ಗೊಣಗ್ತಾ ಇದ್ರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 154 ದಿನಗಳ ಕಾಲ ಕೊರೊನಾದಿಂದ ಬಳಲಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ ದಾರುಣ ಘಟನೆ ನಡೆದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮೆಸಾಚ್ಯುಸೆಟ್ಸ್ ರಾಜ್ಯದ ಬಾಸ್ಟನ್​ನಲ್ಲಿ 45 ವರ್ಷದ ವ್ಯಕ್ತಿಯೊಬ್ಬನಲ್ಲಿ ಕೋವಿಡ್ 19 ವೈರಾಣು ಪತ್ತೆಯಾದಾಗ ಚಿಕಿತ್ಸೆಗೆಂದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. […]

ಎಚ್ಚರಾ! 154 ದಿನ ಬಿಟ್ಟು ಬಿಡದೆ ಕಾಡಿದ ಕೊರೊನಾಕ್ಕೆ ಬಡಪಾಯಿ ಬಲಿ.. ಏನಾಗಿತ್ತು?
Follow us on

ಯಾರಿಗೆ ಬೇಕಪ್ಪಾ ಕೊರೊನಾ ಸಹವಾಸ. ಪಾಸಿಟಿವ್ ಬಂತು ಅಂದ್ರೆ 15-20 ದಿನ ಇದ್ದಲ್ಲೇ ಇರ್ಬೇಕು, ಯಾರ ಹತ್ತಿರವೂ ಹೋಗಂಗಿಲ್ಲ, ಸುತ್ತಾಡಂಗಿಲ್ಲ, ಮನೆಯೇ ಜೈಲಿನಂತಾಗುತ್ತೆ ಅಂತ ನಾವು, ನೀವು ಗೊಣಗ್ತಾ ಇದ್ರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 154 ದಿನಗಳ ಕಾಲ ಕೊರೊನಾದಿಂದ ಬಳಲಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಉಸಿರು ಚೆಲ್ಲಿದ ದಾರುಣ ಘಟನೆ ನಡೆದಿದೆ.

ಅಮೆರಿಕ ಸಂಯುಕ್ತ ಸಂಸ್ಥಾನದ ಮೆಸಾಚ್ಯುಸೆಟ್ಸ್ ರಾಜ್ಯದ ಬಾಸ್ಟನ್​ನಲ್ಲಿ 45 ವರ್ಷದ ವ್ಯಕ್ತಿಯೊಬ್ಬನಲ್ಲಿ ಕೋವಿಡ್ 19 ವೈರಾಣು ಪತ್ತೆಯಾದಾಗ ಚಿಕಿತ್ಸೆಗೆಂದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆತನ ದೇಹದಲ್ಲಿ ವಿಚಿತ್ರ ಕಾಯಿಲೆಯೊಂದು ಇದ್ದ ಪರಿಣಾಮ ಆತನಿಗೆ ಯಾವುದೇ ಚಿಕಿತ್ಸೆ ನೀಡಿದರೂ ಕೋವಿಡ್ ಮತ್ತೊಂದು ರೂಪದಲ್ಲಿ ಬಂದು ಆತನನ್ನು ಕಾಡಲಾರಂಭಿಸಿದೆ. ಆ ವ್ಯಕ್ತಿಯ ದೇಹದಲ್ಲಿನ ರೋಗ ನಿರೋಧಕ ಕಣಗಳು ಆತನನ್ನು ರಕ್ಷಿಸುವ ಬದಲು ಆತನ ವಿರುದ್ಧವೇ ಹೋರಾಡಲು ಶುರು ಮಾಡಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ.

ಅಷ್ಟಾದರೂ ಪ್ರಯತ್ನ ಬಿಡದ ವೈದ್ಯರು ಆತನನ್ನು ಉಳಿಸಿಕೊಳ್ಳಲೇಬೇಕೆಂಬ ಪಣತೊಟ್ಟು ನಿರಂತರ ಚಿಕಿತ್ಸೆ ನೀಡಿದ ಫಲವಾಗಿ ಕ್ರಮೇಣ ಕೋವಿಡ್ ಲಕ್ಷಣಗಳು ಕಡಿಮೆಯಾಗಿ ಅಂತೂ ಇಂತೂ ಬಚಾವಾದೆ ಅಂತ ಆತ ನಿಟ್ಟುಸಿರು ಬಿಟ್ಟಿದ್ದಾನೆ. ಆದರೆ, ದುರಾದೃಷ್ಟವೆಂಬಂತೆ ನೆಗೆಟಿವ್ ರಿಪೋರ್ಟ್ ಕೈ ಸೇರುವ ಮುನ್ನವೇ ಆತನಲ್ಲಿ ಕೊರೊನಾ ಮತ್ತೆ ಪತ್ತೆಯಾಗಿದೆ. ತಕ್ಷಣ ಎಚ್ಚೆತ್ತ ವೈದ್ಯರು ಮತ್ತೆ ಚಿಕಿತ್ಸೆ ಆರಂಭಿಸಿದ ಕೆಲವೇ ದಿನಗಳಲ್ಲಿ ಕೊರೊನಾ ಲಕ್ಷಣಗಳು ಕಡಿಮೆಯಾಗಿದೆ. ಇನ್ನೇನು ಆತನನ್ನು ಹೋಮ್ ಐಸೋಲೇಶನ್ ಮಾಡುವುದೆಂದು ತೀರ್ಮಾನಿಸಿ ಮನೆಗೆ ಕಳುಹಿಸಲು ಸನ್ನದ್ಧರಾಗಿದ್ದಾಗಲೇ ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಎಂಬಂತೆ ಕೊರೊನಾ ಮೂರನೇ ಬಾರಿಗೆ ಅಟಕಾಯಿಸಿಕೊಂಡಿದೆ.

ಕೊನೆಗೆ ಕೊಟ್ಟ ಮೆಡಿಸಿನ್​ಗಳೇ ಆತನಿಗೆ ತಿರುಗುಬಾಣವಾದ ಪರಿಣಾಮ ಪಾಸಿಟಿವ್ ಆಗಿ ಕಾಣಿಸಿಕೊಂಡ ಬರೋಬ್ಬರಿ 154 ದಿನಗಳ ನಂತರ ವ್ಯಕ್ತಿ ಅಸುನೀಗಿದ್ದಾನೆ. ಕೊರೊನಾ ಬರೋದಿದ್ರೆ ಹೇಗೂ ಬರುತ್ತೆ. ಮಾಸ್ಕ್, ಸ್ಯಾನಿಟೈಸರ್ ಎಲ್ಲಾ ಸುಮ್ಮನೆ ಯಾಕೆ ಎಂದು ಮೈಮರೆತು ಓಡಾಡುವವರು ಈ ವ್ಯಕ್ತಿಯ ಪರಿಸ್ಥಿತಿಯನ್ನು ಒಮ್ಮೆ ಯೋಚಿಸಿದರೂ ಸಾಕು. ನಾವು ಏಕೆ ಜಾಗ್ರತೆಯಿಂದ ಇರಬೇಕು ಎನ್ನುವುದು ಅರ್ಥವಾಗುತ್ತದೆ.

Published On - 12:05 pm, Thu, 12 November 20