ಗೆಳತಿಯನ್ನು 10 ನಿಮಿಷಗಳ ಕಾಲ ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡ ಗೆಳೆಯ

|

Updated on: Aug 30, 2023 | 11:12 AM

ಚೀನಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿರುವ ವಿಚಾರ ತಿಳಿದುಬಂದಿದೆ. ಚೀನಾದ ವ್ಯಕ್ತಿ ತನ್ನ ಗೆಳತಿಯನ್ನು ಚುಂಬಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ವರದಿ ಪ್ರಕಾರ ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ಬಳಿಕ ವ್ಯಕ್ತಿ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಆಗಸ್ಟ್​ 22ರಂದು ಈ ಘಟನೆ ನಡೆದಿದೆ, ಮುತ್ತಿಟ್ಟ ಬಳಿಕ ಯುವಕನಿಗೆ ಕಿವಿನೋವು ಕಾಣಿಸಿಕೊಂಡಿದೆ, ಕ್ರಮೇಣವಾಗಿ ಶ್ರವಣ ಶಕ್ತಿ ನಷ್ಟವಾಗಿದೆ.

ಗೆಳತಿಯನ್ನು 10 ನಿಮಿಷಗಳ ಕಾಲ ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡ ಗೆಳೆಯ
ಜೋಡಿಗಳು
Follow us on

ಚೀನಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿರುವ ವಿಚಾರ ತಿಳಿದುಬಂದಿದೆ. ಚೀನಾದ ವ್ಯಕ್ತಿ ತನ್ನ ಗೆಳತಿಯನ್ನು ಚುಂಬಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ನ ವರದಿ ಪ್ರಕಾರ ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ಬಳಿಕ ವ್ಯಕ್ತಿ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಆಗಸ್ಟ್​ 22ರಂದು ಈ ಘಟನೆ ನಡೆದಿದೆ, ಮುತ್ತಿಟ್ಟ ಬಳಿಕ ಯುವಕನಿಗೆ ಕಿವಿನೋವು ಕಾಣಿಸಿಕೊಂಡಿದೆ, ಕ್ರಮೇಣವಾಗಿ ಶ್ರವಣ ಶಕ್ತಿ ನಷ್ಟವಾಗಿದೆ.

ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಕಿವಿಯೊಳಗೆ ರಂಧ್ರವಿದೆ ಎಂದು ವೈದ್ಯರು ಹೇಳಿದ್ದಾರೆ. ಇಬ್ಬರು ಚೀನಾದ ಪೂರ್ವ ಜೆಜಿಯಾಂಗ್ ಪ್ರಾಂತ್ಯದ ವೆಸ್ಟ್ ಲೇಕ್‌ಗೆ ಭೇಟಿ ನೀಡಿದ್ದರು, ಅಲ್ಲಿ ಘಟನೆ ನಡೆದಿದೆ. ಹೆಚ್ಚು ಉತ್ಸಾಹದಿಂದ ಚುಂಬಿಸುವುದರಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ವೇಗವಾಗಿ ಚುಂಬಿಸುವುದರಿಂದ ದೇಹದಲ್ಲಿ ನಡುಕ ಉಂಟಾಗುತ್ತದೆ, ಇದರಿಂದಾಗಿ ಕಿವಿ ಹಿಗ್ಗುತ್ತದೆ. ಚೀನಾ ಯುವಕನಿಗೆ ವೈದ್ಯರು ಸಂಪೂರ್ಣ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕು ಎಂದು ಹೇಳಿದ್ದಾರೆ.

ವರದಿ ಪ್ರಕಾರ, ಸುಮಾರು 10 ನಿಮಿಷಗಳ ಕಾಲ ಚುಂಬಿಸಿದ್ದಾರೆ. ಈ ವೇಳೆ ಯುವಕನ ಕಿವಿಯಲ್ಲಿ ವಿಚಿತ್ರ ಶಬ್ದದೊಂದಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ನಂತರ ಕ್ರಮೇಣ ಕಿವಿ ಕೇಳಿಸುತ್ತಲೇ ಇರಲಿಲ್ಲ.

ಮತ್ತಷ್ಟು ಓದಿ: Hearing Loss: ನಿಮ್ಮ ಅತಿಯಾದ ಹೆಡ್‌ಫೋನ್‌ ಬಳಕೆಯು ಶ್ರವಣ ದೋಷಕ್ಕೆ ಕಾರಣವಾಗಬಹುದು ಎಚ್ಚರ

ಈ ಹಿಂದೆ 2008 ರಲ್ಲಿ, ದಕ್ಷಿಣ ಚೀನಾದಲ್ಲಿ ಯುವತಿಯೊಬ್ಬಳಿಗೆ ಇದೇ ರೀತಿ ಆಗಿತ್ತು. ಚುಂಬಿಸಿದ ನಂತರ ಶ್ರವಣ ಶಕ್ತಿ ಕಳೆದುಕೊಂಡಿದ್ದಳು, ವರದಿಗಳ ಪ್ರಕಾರ, ಕಳೆದ ತಿಂಗಳು ದಕ್ಷಿಣ ಚೀನಾದಲ್ಲಿ ಸಂಗಾತಿ ಮನೆಯಲ್ಲಿ ಟಿವಿ ನೋಡುತ್ತಿರುವಾಗ ತಮ್ಮ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:38 am, Wed, 30 August 23