ಹಾಡಹಗಲೇ ಹೆಂಡ್ತಿಗೆ ಚಾಕು ಇರಿದು ಕೊಲೆಗೈದ, Dubai ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?

| Updated By:

Updated on: Jul 27, 2020 | 9:36 PM

ಪತ್ನಿಯ ಶೀಲ ಶಂಕಿಸಿ ಆಕೆಯನ್ನ ಕೊಲೆಗೈದ ಪತಿ ಮಹಾಶಯನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಪ್ರಕರಣ ಮಧ್ಯಪ್ರಾಚ್ಯದ ದುಬೈ ನಗರದಲ್ಲಿ ಬೆಳಕಿಗೆ ಬಂದಿದೆ. 44 ವರ್ಷದ ಕೇರಳ ಮೂಲದ ಉಘೇಶ್ ಜೀವಾವಧಿ ಶಿಕ್ಷೆ ಪಡೆದ ಪತಿರಾಯ. ಕಳೆದ ಸೆಪ್ಟಂಬರ್​ನಲ್ಲಿ ತನ್ನ ಪತ್ನಿ, 40 ವರ್ಷದ ವಿದ್ಯಾಚಂದ್ರನ್​ ಪತಿ ಉಘೇಶ್​, ವಿದ್ಯಾರ ಆಫೀಸ್​ ಪಾರ್ಕಿಂಗ್​ ಏರಿಯಾದಲ್ಲಿ ಹಾಡಹಗಲೇ ಚಾಕು ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದರು. ಇನ್ನು ಆರೋಪಿಯ ಬೆನ್ನುಹತ್ತಿದ್ದ ಪೊಲೀಸರು ಉಘೇಶ್​ನನ್ನ ಅಂದೇ […]

ಹಾಡಹಗಲೇ ಹೆಂಡ್ತಿಗೆ ಚಾಕು ಇರಿದು ಕೊಲೆಗೈದ,  Dubai ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಪತ್ನಿಯ ಶೀಲ ಶಂಕಿಸಿ ಆಕೆಯನ್ನ ಕೊಲೆಗೈದ ಪತಿ ಮಹಾಶಯನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಪ್ರಕರಣ ಮಧ್ಯಪ್ರಾಚ್ಯದ ದುಬೈ ನಗರದಲ್ಲಿ ಬೆಳಕಿಗೆ ಬಂದಿದೆ. 44 ವರ್ಷದ ಕೇರಳ ಮೂಲದ ಉಘೇಶ್ ಜೀವಾವಧಿ ಶಿಕ್ಷೆ ಪಡೆದ ಪತಿರಾಯ.

ಕಳೆದ ಸೆಪ್ಟಂಬರ್​ನಲ್ಲಿ ತನ್ನ ಪತ್ನಿ, 40 ವರ್ಷದ ವಿದ್ಯಾಚಂದ್ರನ್​ ಪತಿ ಉಘೇಶ್​, ವಿದ್ಯಾರ ಆಫೀಸ್​ ಪಾರ್ಕಿಂಗ್​ ಏರಿಯಾದಲ್ಲಿ ಹಾಡಹಗಲೇ ಚಾಕು ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದರು. ಇನ್ನು ಆರೋಪಿಯ ಬೆನ್ನುಹತ್ತಿದ್ದ ಪೊಲೀಸರು ಉಘೇಶ್​ನನ್ನ ಅಂದೇ ಬಂಧಿಸಿದ್ದರು.

ಪತ್ನಿಯ ಶೀಲದ ಮೇಲೆ ಪತಿರಾಯನ ಶಂಕೆ
ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದ ವಿದ್ಯಾ, ಕೆಲವು ವರ್ಷಗಳಿಂದ ಉದ್ಯೋಗಕ್ಕಾಗಿ ದುಬೈನಲ್ಲಿ ನೆಲೆಸಿದ್ದರಂತೆ. ಬಹಳ ಕಷ್ಟಪಟ್ಟು ಹಣ ಕೂಡಿಟ್ಟು ಮನೆಗೆ ಕಳಿಸುತ್ತಿದ್ದರಂತೆ. ಆದರೆ, ಉಘೇಶ್​ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಕಿರುಕುಳ ನೀಡುತ್ತಿದ್ದ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. ವಿದ್ಯಾ ಮತ್ತೊಂದು ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಗುಮಾನಿ ಸಹ ಅವನಿಗೆ ಇತ್ತಂತೆ.

ಅನೈತಿಕ ಗುಮಾನಿ, ಸಾಯಿಸಲೆಂದೇ ದುಬೈಗೆ ಹೋಗಿದ್ದ​!
ಆದರೆ, ಆರೋಪಿ ನೀಡಿರುವ ಹೇಳಿಕೆ ಪ್ರಕಾರ ವಿದ್ಯಾಳ ಅನೈತಿಕ ಸಂಬಂಧದ ಬಗ್ಗೆ ಆಕೆಯ ಕಚೇರಿಯ ಮ್ಯಾನೇಜರ್​ ತನಗೆ ಮೆಸೇಜ್​ ಕಳಿಸಿದ್ದ. ಹಾಗಾಗಿ, ಇದರ ಬಗ್ಗೆ ವಿಚಾರಿಸಲು ಆ ದೇಶದ ವೀಸಾ ಪಡೆದು ದುಬೈಗೆ ಬಂದಿದ್ದೆ. ವಿದ್ಯಾಳ ಮ್ಯಾನೇಜರ್​ನೊಟ್ಟಿಗೆ ಇದರ ಬಗ್ಗೆ ಮಾತಡುವಾಗ ಅವಳು ಅಲ್ಲಿಗೆ ಬಂದಿದ್ದಳು. ಆಗ ವಿಚಾರ ತಿಳಿದು ಆಕೆಗೆ ಸಿಟ್ಟು ಬಂದು ನನ್ನೊಂದಿಗೆ ಜಗಳ ತೆಗೆದಿದ್ದಳು. ಈ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಉಘೇಶ್​ ಅವಳಿಗೆ ಚಾಕು ಇರಿದು ಪರಾರಿಯಾಗಿದ್ದ.

ಇದೀಗ, ಉಘೇಶ್​ಗೆ ಅಲ್ಲಿನ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿರೋದು ವಿದ್ಯಾಳ ಕುಟುಂಬಕ್ಕೆ ನೆಮ್ಮದಿ ತಂದಿದೆ. ಉಘೇಶ್​ ತನ್ನ 25 ವರ್ಷ ಕಾಲಾವಧಿಯ ಜೀವಾವಧಿ ಶಿಕ್ಷೆ ಮುಗಿಸಿದ ನಂತರ ಆತನನ್ನು ಭಾರತಕ್ಕೆ ಕಳುಹಿಸಬೇಕು ಎಂದು ದುಬೈ ಕೋರ್ಟ್​ ಆದೇಶ ನೀಡಿದೆ.

Published On - 11:05 am, Mon, 27 July 20