ಕೊರೊನಾ ನಿಧಿಯಲ್ಲೂ ವಂಚನೆಯಾ? ಭಾರತೀಯ ಮೂಲದ ಅಮೆರಿಕ ಉದ್ಯಮಿ ಅರೆಸ್ಟ್

ಕೊರೊನಾ ನಿಧಿಯಲ್ಲೂ ವಂಚನೆಯಾ? ಭಾರತೀಯ ಮೂಲದ ಅಮೆರಿಕ ಉದ್ಯಮಿ ಅರೆಸ್ಟ್

ವಾಷಿಂಗ್ಟನ್: ಕೊರೊನಾ ಸಂಕಷ್ಟದಲ್ಲಿ ಇಡೀ ಜಗತ್ತು ಮುಳುಗಿದ್ರೆ ಅದೇ ಕೊರೊನಾ ಹೆಸರನ್ನು ಬಳಸಿಕೊಂಡು ಕೆಲ ಪಾಪಿಗಳು ದುಡ್ಡು ಮಾಡುತ್ತಿದ್ದಾರೆ. ಕೋವಿಡ್ ರಿಲೀಫ್ ಫಂಡ್‌ನಲ್ಲಿ 5.5 ಮಿಲಿಯನ್ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿಯನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದಾರೆ. ಅಮೆರಿಕದ ಅಧಿಕಾರಿಗಳು ಸಿಯಾಟಲ್ ಮೂಲದ ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನ ಮಾಜಿ ಕಾರ್ಯನಿರ್ವಾಹಕ, ಮುಕುಂದ್ ಮೋಹನ್​ನನ್ನ ಬಂಧಿಸಿದ್ದಾರೆ. ಪೇ ಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (PPP) ದಾಖಲೆಗಳನ್ನು ನಕಲಿ ಮಾಡಿ ಮುಕುಂದ್ ವಂಚಿಸಿದ್ದಾರೆ ಮತ್ತು ಕೋವಿಡ್ […]

Ayesha Banu

| Edited By:

Jul 28, 2020 | 12:36 AM

ವಾಷಿಂಗ್ಟನ್: ಕೊರೊನಾ ಸಂಕಷ್ಟದಲ್ಲಿ ಇಡೀ ಜಗತ್ತು ಮುಳುಗಿದ್ರೆ ಅದೇ ಕೊರೊನಾ ಹೆಸರನ್ನು ಬಳಸಿಕೊಂಡು ಕೆಲ ಪಾಪಿಗಳು ದುಡ್ಡು ಮಾಡುತ್ತಿದ್ದಾರೆ. ಕೋವಿಡ್ ರಿಲೀಫ್ ಫಂಡ್‌ನಲ್ಲಿ 5.5 ಮಿಲಿಯನ್ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕದ ಉದ್ಯಮಿಯನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದಾರೆ.

ಅಮೆರಿಕದ ಅಧಿಕಾರಿಗಳು ಸಿಯಾಟಲ್ ಮೂಲದ ಅಮೆಜಾನ್ ಮತ್ತು ಮೈಕ್ರೋಸಾಫ್ಟ್‌ನ ಮಾಜಿ ಕಾರ್ಯನಿರ್ವಾಹಕ, ಮುಕುಂದ್ ಮೋಹನ್​ನನ್ನ ಬಂಧಿಸಿದ್ದಾರೆ. ಪೇ ಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (PPP) ದಾಖಲೆಗಳನ್ನು ನಕಲಿ ಮಾಡಿ ಮುಕುಂದ್ ವಂಚಿಸಿದ್ದಾರೆ ಮತ್ತು ಕೋವಿಡ್ -19 ಪರಿಹಾರ ನಿಧಿಯಲ್ಲಿ 5.5 ಮಿಲಿಯನ್‌ಗಿಂತ ಹೆಚ್ಚಿನ ಹಣವನ್ನು ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.

ಅವರು ಹೊಂದಿರುವ 6 ಕಂಪನಿಗಳಿಗೆ PPE ಅಪ್ಲಿಕೇಶನ್​ಗಳ ಮೂಲಕ ನಕಲಿ ಫೆಡರಲ್ ತೆರಿಗೆ ಸಲ್ಲಿಕೆ ಮಾಡಿದ್ದಾರೆ. ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ನಂತರ ಅವರು ಬಹಳಷ್ಟು ಹಣವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ತಮ್ಮ ರಾಬಿನ್‌ಹುಡ್ ಬ್ರೋಕರೇಜ್ ಖಾತೆಗೂ ವರ್ಗಾಯಿಸಿಕೊಂಡಿದ್ದಾರೆ ಎಂದು ಯುಎಸ್ ಅಟಾರ್ನಿ ತಮ್ಮ ದೋಷಾರೋಪ ಪಟ್ಟಿಯಲ್ಲಿ  ಆರೋಪಿಸಿದ್ದಾರೆ ಎಂದು ಸಿಯಾಟಲ್ ಟೈಮ್ಸ್ ವರದಿ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada