ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ರಿಗೆ ಮದುವೆ ಪ್ರಪೋಸಲ್; ಶ್ರೀಮಂತ ವ್ಯಕ್ತಿಯ ಜ್ಞಾನ, ಸೌಂದರ್ಯಕ್ಕೆ ಮಾರುಹೋದ ನಟಿ !
ಅಂದಹಾಗೆ ಈ ಟ್ವೀಟ್ನ್ನು ಶಾಮ್ಸ್ ನವೆಂಬರ್ 6ರಂದು ಮಾಡಿದ್ದರು. ಅದಾದ ಬಳಿಕ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿದೆ. ಅದನ್ನು ನೋಡಿ ಶಾಮ್ಸ್ ತಮ್ಮ ಟ್ವೀಟ್ಗೆ ಸ್ಪಷ್ಟನೆ ನೀಡಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ತಮ್ಮ ಪತ್ನಿ ಮೆಲಿಂದಾ ಗೇಟ್ಸ್ರಿಂದ ದೂರವಾಗಿದ್ದಾರೆ. ಇವರಿಬ್ಬರಿಗೂ ಈ ವರ್ಷದ ಪ್ರಾರಂಭದಲ್ಲೇ ಡಿವೋರ್ಸ್ ಆಗಿದೆ. ಹೀಗೆ ಪತ್ನಿಯಿಂದ ದೂರವಾದ ಬಿಲ್ ಗೇಟ್ಸ್ರಿಗೆ ಈಗೊಂದು ಮದುವೆ ಪ್ರಪೋಸಲ್ ಬಂದಿದೆ. ಕುವೈತ್ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್ ಗೇಟ್ಸ್ರನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಸ್ಲಾಮಿಯವರಿಗೆ ಇನ್ನೂ 41ವರ್ಷ. ಅವರೀಗ 66ವರ್ಷದ, ಪತ್ನಿಯಿಂದ ದೂರವಾಗಿರುವ ಬಿಲ್ ಗೇಟ್ಸ್ರನ್ನು ವರಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಲ್ಗೇಟ್ಸ್, ಜಗತ್ತಿಗೆ ಮುಂದಿನ ದಿನಗಳಲ್ಲಿ ಕಾಡಬಹುದಾದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದರು. ಅದನ್ನು ಪ್ರಕಟಿಸಿದ್ದ ಅಂತಾರಾಷ್ಟ್ರೀಯ ಮಾಧ್ಯಮದ ಸ್ಕ್ರೀನ್ಶಾಟ್ ಶೇರ್ ಮಾಡಿಕೊಂಡಿರುವ ಟ್ವಿಟರ್ ಬಳಕೆದಾರರೊಬ್ಬರು, ಮುಂಬರುವ ದಿನಗಳಲ್ಲಿ ಸಿಡುಬಿನಂಥ ಸಾಂಕ್ರಾಮಿಕ ವೈರಸ್ಗಳ ಮೂಲಕ ಉಗ್ರರು ದಾಳಿ ನಡೆಸಬಹುದು. ಅಂಥ ದಾಳಿಗಳು ನಡೆದಾಗ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಹಣ ಮೀಸಲಿಡಬೇಕು ಮತ್ತು ಮುಂದಿನ ಸಾಂಕ್ರಾಮಿಕಗಳಿಗೆ ನಾವು ಸಿದ್ಧ ಎಂಬ ಪುಸ್ತಕವನ್ನು ಇನ್ನು ಐದು ವರ್ಷಗಳಲ್ಲಿ ಹೊರತರಲಾಗುವುದು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಆ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿರುವ ಗಾಯಕಿ ಶಾಮ್ಸ್ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ವ್ಯಕ್ತಿ (ಬಿಲ್ ಗೇಟ್ಸ್) ತುಂಬ ಸುಂದರವಾಗಿದ್ದಾರೆ. ಎಲೆಕ್ಟ್ರಾನಿಕ್ ಯುಗದ ಪ್ರವಾದಿಯಾಗಿದ್ದಾರೆ. ಮುಂದೇನಾಗಬಹುದು ಎಂದು ಅವರು ಭವಿಷ್ಯವಾಣಿ ಹೇಳುತ್ತಿರುವುದು ನನಗೆ ತುಂಬ ಇಷ್ಟವಾಯಿತು. ನಾನು ಅವರನ್ನು ಮದುವೆಯಾಗಲು ಸಿದ್ಧವಿದ್ದೇನೆ ಮತ್ತು ಈ ಮೂಲಕ ಅದನ್ನು ಹೇಳುತ್ತಿದ್ದೇನೆ. ನನ್ನ ಪ್ರಪೋಸಲ್ನ್ನು ಅವರು ಒಪ್ಪಿಕೊಳ್ಳುವ ಬಗ್ಗೆ ನಿಮಗೇನು ಅನ್ನಿಸುತ್ತದೆ ಎಂದು ಹೇಳಿದ್ದಾರೆ.
جميل هذا الانسان نبي العصر الالكتروني عاجبني تنبؤاته ومعرفته بلي جاي انا اعرض عليه الزواج تتوقعون يوافق؟؟؟ https://t.co/H2WLlHtQeQ
— #شمس ☀️ (@shamsofficial) November 5, 2021
ಶಾಮ್ಸ್ ಟ್ವೀಟ್ ಮಾಡುತ್ತಿದ್ದಂತೆ ಅದನ್ನು ಅರೇಬಿಕ್ ಸ್ಥಳೀಯ ಮಾಧ್ಯಮಗಳು ಬ್ರೇಕಿಂಗ್ ಸುದ್ದಿಯೆಂದು ಬಿಂಬಿಸಿವೆ. ಅವರು ಅದನ್ನು ಗಂಭೀರವಾಗಿ ಪರಿಗಣಿಸಿ, ವಿವಿಧ ಆಯಾಮಗಳಲ್ಲಿ ಸುದ್ದಿ ಮಾಡಿವೆ. ಅದರ ಹೊರತಾಗಿ ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ನಟಿಯ ಟ್ವೀಟ್ ವಿಪರೀತ ವೈರಲ್ ಆಗಿದೆ. ಕೆಲವರಂತೂ ಸಿಕ್ಕಾಪಟೆ ಅಪಹಾಸ್ಯ ಮಾಡಿದ್ದಾರೆ.
ಅಂದಹಾಗೆ ಈ ಟ್ವೀಟ್ನ್ನು ಶಾಮ್ಸ್ ನವೆಂಬರ್ 6ರಂದು ಮಾಡಿದ್ದರು. ಅದಾದ ಬಳಿಕ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿದೆ. ಅದನ್ನು ನೋಡಿ ಶಾಮ್ಸ್ ತಮ್ಮ ಟ್ವೀಟ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗೇ, ಕೆಲವರಿಗೆ ಇದೊಂದು ಜೋಕ್ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳಿವಳಿಕೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಮಾಧ್ಯಮಗಳೂ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದು ತೀರ ವಿಚಿತ್ರ ಎನ್ನಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮನೆ, ಉದ್ಯೋಗ ಕೊಟ್ಟಿದ್ದ ಸಹಾಯಕ ಪ್ರಾಧ್ಯಾಪಕನ ಪತ್ನಿಯನ್ನೇ ಕೊಲೆ ಮಾಡಿದ ಕಾರು ಚಾಲಕ !