Cambodia Hotel Fire: ಕಾಂಬೋಡಿಯಾ ಹೋಟೆಲ್ ಕ್ಯಾಸಿನೊದಲ್ಲಿ ಭಾರೀ ಬೆಂಕಿ, 10 ಸಾವು, 30 ಮಂದಿಗೆ ಗಾಯ

ಕಾಂಬೋಡಿಯಾದಲ್ಲಿ ಪೊಯಿಪೆಟ್‌ನ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

Cambodia Hotel Fire: ಕಾಂಬೋಡಿಯಾ ಹೋಟೆಲ್ ಕ್ಯಾಸಿನೊದಲ್ಲಿ ಭಾರೀ ಬೆಂಕಿ, 10 ಸಾವು, 30 ಮಂದಿಗೆ ಗಾಯ
Massive fire breaks out at Cambodia hotel casino, 10 dead, 30 injured
Updated By: ಅಕ್ಷಯ್​ ಪಲ್ಲಮಜಲು​​

Updated on: Dec 29, 2022 | 10:44 AM

ಕಾಂಬೋಡಿಯ: ಕಾಂಬೋಡಿಯಾದಲ್ಲಿ ಪೊಯಿಪೆಟ್‌ನ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬೆಂಕಿಯು ಹಲವು ಗಂಟೆಗಳ ಕಾಲ ಹೊತ್ತಿಕೊಂಡಿದೆ. ಥಾಯ್ಲೆಂಡ್‌ನ ಗಡಿಯಲ್ಲಿರುವ ಕಾಂಬೋಡಿಯಾ ಹೋಟೆಲ್ ಕ್ಯಾಸಿನೊದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ, 30 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ದಿ ಮಿರರ್‌ನ ವರದಿಯ ಪ್ರಕಾರ, ಬೆಂಕಿ ಹೆಚ್ಚಾಗುತ್ತಿದ್ದಂತೆ ಕಟ್ಟಡದಲ್ಲಿದ್ದ ಕೆಲವು ಜನರು ನೆಲದ ಮೇಲೆ ಹಲವಾರು ಮಹಡಿಗಳ ಕಿಟಕಿಗಳಿಂದ ಜಿಗಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಟ್ಟಡದಿಂದ ಜನರು ಜಿಗಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ದೃಶ್ಯದಲ್ಲಿ ಹೋಟೆಲ್ ಸುಟ್ಟು ಕರಕಲಾದ ತೋರಿಸಿದೆ.

ಇದನ್ನು ಓದಿ:ಕಾಂಬೋಡಿಯಾದ ಮೀನುಗಾರರ ಬಲೆಗೆ ಬಿದ್ದ ವಿಶ್ವದ ಅತ್ಯಂತ ದೊಡ್ಡ ಮೀನು, ಫೋಟೋ ವೈರಲ್​​

ವರದಿಯ ಪ್ರಕಾರ, ಬೆಂಕಿಯು ಮಧ್ಯರಾತ್ರಿ (5 pm GMT – 10:30 pm IST) ಸುಮಾರಿಗೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಬೆಂಕಿ ಪರಿಣಾಮ ಕಟ್ಟಡದ ಕೆಲವು ಭಾಗಗಳು ಕುಸಿತ ಕಂಡಿದೆ ಎಂದು ವರದಿಯಾಗಿದೆ. ನಂತರ ಸ್ಥಳದ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು 70 ಪ್ರತಿಶತದಷ್ಟು ಬೆಂಕಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಸಿಲುಕಿಕೊಂಡಿದ್ದ ಜನರನ್ನು ಬೆಳಗಿನ ಜಾವದವರೆಗೆ 53 ರಕ್ಷಿಸಲಾಗಿದೆ ಎಂದು ಮಿರರ್ ವರದಿ ಮಾಡಿದೆ. ಈ ಕಾರ್ಯಚರಣೆಯಲ್ಲಿ ನಾಗರಿಕರು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕ್ಯಾಸಿನೊ ಸಿಬ್ಬಂದಿ ಕಟ್ಟಡದ ಅಂಚುಗಳ ಮೇಲೆ ನಡೆದುಕೊಂಡು ಹೋಗಿ ಪರಾರಿಯಾಗಿದ್ದಾರೆ ಮತ್ತು ಹೊರಗೆ ಜಮಾಯಿಸಿದ ಜನರ ಗುಂಪು ಅವರನ್ನು ಕೆಳಗಿಳಿಸಲು ಸಹಾಯ ಮಾಡಿದೆ ಎಂದು ಮಿರರ್ ವರದಿ ಮಾಡಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 am, Thu, 29 December 22