ಪಂಜಾಬಿ ಗಾಯಕ ಸಿಧು ಮೂಸೆವಾಲಾ(Sidhu Moosewala) ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್ ಗೋಲ್ಡಿ ಬ್ರಾರ್ (Goldy Brar), ಕೆನಡಾದ 25 ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾರೆ. ಇಂಟರ್ ಪೋಲ್ ಒಟ್ಟಾವಾದ ಫ್ಯುಜಿಟಿವ್ ಅಪ್ರೆಹೆನ್ಶನ್ ಸಪೋರ್ಟ್ ಟೀಮ್ (FAST) ಪರಾರಿಯಾಗಿರುವ ಸತಿಂದರ್ ಜಿತ್ ಸಿಂಗ್ ಗೋಲ್ಡಿ ಬ್ರಾರ್ ಅನ್ನು ಮೇ 01, 2023 ರಂದು BOLO ಕಾರ್ಯಕ್ರಮದಡಿಯಲ್ಲಿ 25 ಮೋಸ್ಟ್ ವಾಂಟೆಡ್ ಪ್ಯುಜಿಟಿವ್‌ಗಳ ಪಟ್ಟಿಯಲ್ಲಿ ಸೇರಿಸಿದೆ ಎಂದು ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಮಂಗಳವಾರ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.
ಮೂಸೆವಾಲಾ ಹತ್ಯೆಯಲ್ಲಿ ಬ್ರಾರ್ ಪಾತ್ರ ಬಗ್ಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ತನಿಖೆ ನಡೆಸುತ್ತಿದೆ.ಭಾರತದಲ್ಲಿ ಮಾಡಿದ ಅಪರಾಧಗಳು ಬಹಳ ಗಂಭೀರವಾಗಿದೆ ಮತ್ತು ಕೆನಡಾದ ಪೊಲೀಸರು ಇದರ ತನಿಖೆ ನಡೆಸುತ್ತಾರೆ ಎಂದು ಅದು ಹೇಳಿದೆ.
ಆದಾಗ್ಯೂ, ಕೆನಡಾದ ಪೊಲೀಸರು ಯಾವುದೇ ಕ್ರಿಮಿನಲ್ ಅಪರಾಧಗಳಿಗೆ ಬ್ರಾರ್ ವಿರುದ್ಧ ಇನ್ನೂ ಆರೋಪ ಮಾಡಿಲ್ಲ.
कनाडा पुलिस ने मोस्ट वांटेड अपराधियों की लिस्ट जारी की
मोस्ट वांटेड की लिस्ट में गोल्डी बराड़ का भी नाम शामिल#CanadaPolice | #GoldyBrar | @nidhileo pic.twitter.com/ZiIfT85dab— TV9 Bharatvarsh (@TV9Bharatvarsh) May 2, 2023
ಕೆನಡಾದಲ್ಲಿದ್ದಾರೆ ಎಂದು ನಂಬಲಾದ ಬ್ರಾರ್, ರಜತ್ ಕುಮಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಗುರ್ಲಾಲ್ ಸಿಂಗ್ ಮತ್ತು ಮೂಸೆವಾಲಾ ಹತ್ಯೆಗೆ ಯೋಜನೆ ರೂಪಿಸಿದ ಆರೋಪ ಹೊತ್ತಿದ್ದಾರೆ.
ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜಹಾವರ್ಕೆ ಗ್ರಾಮದಲ್ಲಿ ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಬ್ರಾರ್ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಅಕ್ರಮ ಬಂದೂಕುಗಳ ಪೂರೈಕೆ ಮತ್ತು ಇಂಟರ್‌ಪೋಲ್ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಜೂನ್ 2022 ರಲ್ಲಿ, ಭಾರತವು ಬ್ರಾರ್‌ಗಾಗಿ ಇಂಟರ್‌ಪೋಲ್ ರೆಡ್ ನೋಟಿಸ್ ಪಡೆದಿದೆ.
ಇದನ್ನೂ ಓದಿ: Sharad Pawar: ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ
ಪಂಜಾಬ್‌ನ ಶ್ರೀ ಮುಕ್ತಸರ್ ಸಾಹಿಬ್ ಮೂಲದ ಬ್ರಾರ್, ಡೇರಾ ಸಚ್ಚಾ ಸೌದಾ ಅನುಯಾಯಿ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ. ಎಎಸ್‌ಐ ಶಂಶೇರ್ ಸಿಂಗ್ ಅವರ ಪುತ್ರ ಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ತೆರಳಿದ್ದರು. ತಾನು ಡಾಕ್ಟರ್ ಎಂದು ಹೇಳಿಕೊಂಡಿದ್ದ ಬ್ರಾರ್ ಫೇಸ್‌ಬುಕ್‌ನಲ್ಲಿ ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದರು.
ವರದಿಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಜೈಲಿಗೆ ಹೋದ ನಂತರ ಬ್ರಾರ್ ಬಿಷ್ಣೋಯ್ ಗ್ಯಾಂಗ್ ನೇತೃತ್ವ ವಹಿಸಿಕೊಂಡರು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ