ಸರ್ಕಾರೀ ಕೆಲಸದ ಮೇಲೆ ಜಮೀರ್ ಕಚೇರಿಗೆ ಹೋಗಿದ್ದೆನೇ ಹೊರತು ಅವರ ಮನೆಗಲ್ಲ: ಬಸನಗೌಡ ಯತ್ನಾಳ್

ಸರ್ಕಾರೀ ಕೆಲಸದ ಮೇಲೆ ಜಮೀರ್ ಕಚೇರಿಗೆ ಹೋಗಿದ್ದೆನೇ ಹೊರತು ಅವರ ಮನೆಗಲ್ಲ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 17, 2024 | 7:41 PM

ಸರ್ಕಾರಿ ಕೆಲಸದ ನಿಮಿತ್ತ ಜಮೀರ್ ಅವರ ಕಚೇರಿಗೆ ಹೋಗಿದ್ದೆನೇ ಹೊರತು ಬಿರಿಯಾನಿ ತಿನ್ನಲಲ್ಲ ಎಂದು ಹೇಳಿದ ಯತ್ನಾಳ್, ತಮ್ಮ ಕ್ಷೇತ್ರದಲ್ಲಿ 1285 ಮನೆಗಳು ಡಿಲೀಟ್ ಆಗಿದ್ದು ಅವುಗಳನ್ನು ಪುನಃ ಪಟ್ಟಿಗೆ ಸೇರಿಸಬೇಕೆಂದು ಪತ್ರ ಕೊಟ್ಟಿದ್ದೇನೆ ಮತ್ತು ವಸತಿ ಯೋಜನೆ ಅಡಿ 1493 ಮನೆಗಳು ರೆಡಿಯಾದರೂ ಇನ್ನೂ 2,500 ಮನೆಗಳ ಅವಶ್ಯಕತೆಯಿದೆ ಅಂತ ಹೇಳಲು ಹೋಗಿದ್ದೆ ಎಂದರು.

ಬೆಳಗಾವಿ: ನಗರದ ಸುವರ್ಣ ಸೌಧ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಯತ್ನಾಳ್, ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ರನ್ನು ಭೇಟಿಯಾಗಿದ್ದು ವೈಯಕ್ತಿಕ ಕಾರಣಗಳಿಗಾಗಿ ಅಲ್ಲ, ಅಲ್ಪಸಂಖ್ಯಾತರ ಯೋಜನೆಗಳ ಅಡಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ಶೇಕಡ 80 ರಷ್ಟು ಮುಸಲ್ಮಾನರಿಗೆ, ಶೇಕಡ 10 ಕ್ರಿಶ್ಚಿಯನ್ನರಿಗೆ ಮತ್ತು ಉಳಿದ ಶೇಕಡ 10 ಜೈನ, ಬೌದ್ಧ ಮತ್ತು ಪಾರ್ಸಿಗಳಿಗೆ ಮೀಸಲಿಡಬೇಕೆಂದು ಇಲಾಖೆಯು ಸುತ್ತೋಲೆ ಹೊರಡಿಸಿದೆ, ಇದು ಸರಿಯಲ್ಲ, ಕೆಲವು ಭಾಗಗಳಲ್ಲಿ ಕ್ರಿಶ್ಚಿಯನ್ನರು ಜಾಸ್ತಿಯಿದ್ದರೆ, ಬೇರೆ ಕಡೆ ಜೈನರು ಜಾಸ್ತಿ ಇದ್ದಾರೆ, ಹಾಗಾಗಿ ಹಂಚಿಕೆಯಲ್ಲಿ ತಾರತಮ್ಯ ಮಾಡದೆ ಅನುದಾನವನ್ನು ವಿಧಾನಸಭಾವಾರು ಪರ್ಸೆಂಟೇಜ್ ಆಧಾರದಲ್ಲಿ ಮೀಸಲಿಡಬೇಕೆಂದು ಚರ್ಚಿಸಲು ಹೋಗಿದ್ದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶೋಕಾಸ್ ನೋಟೀಸ್ ನಂತರ ಮೆತ್ತಗಾದ ಯತ್ನಾಳ್, ವಕ್ಫ್ ಹೋರಾಟ ಬಿಜೆಪಿ ಬ್ಯಾನರ್ ಅಡಿ ಮುಂದುವರಿಸಲು ನಿರ್ಧಾರ