ಮೆಕ್ಸಿಕೊ: ಕ್ಷಣ ಕ್ಷಣಕ್ಕೂ ವಿಷ ಉಣಿಸುತ್ತಿರುವ ಕೊರೊನಾ ದಾಳಿಗೆ ಇಡೀ ವಿಶ್ವವೇ ವಿಲವಿಲನೆ ಒದ್ದಾಡ್ತಿದೆ. ಕೊರೊನಾ ಕ್ರಿಮಿಯು ದಿನೇ ದಿನೆ ಸಾವಿರಾರು ಜನರ ದೇಹ ಹೊಕ್ಕುತ್ತಿದೆ. ಎಲ್ಲೆಲ್ಲೂ ಕೊರೊನಾದ್ದೇ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಮೆಕ್ಸಿಕೋ ಸಿಟಿಯಲ್ಲಿ ಕೊರೊನಾ ವೈರಸ್ ಹೋಲುವಂತಹ ಆಲಿಕಲ್ಲು ಮಳೆಯಾಗಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಅಬುಧಾಬಿ ಸೇರಿದಂತೆ ಅನೇಕ ಕಡೆ ಇಂತಹ ಕೊರೊನಾ ಆಲಿಕಲ್ಲು ಮಳೆಯಾಗಿದೆ!
ಮೆಕ್ಸಿಕೊದ ನ್ಯೂಯೆವೊ ಲಿಯಾನ್ ರಾಜ್ಯದ ಮುನ್ಸಿಪಲ್ ಮಾಂಟೆಮೊರೆಲೋಸ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಕೊರೊನಾ ವೈರಸ್ ಆಕಾರದ ಆಲಿಕಲ್ಲುಗಳು ಮೆಕ್ಸಿಕೊ ನಗರದ ಜನರನ್ನು ತೀವ್ರ ಆಘಾತಕ್ಕೆ ದೂಡಿದೆ. ಕೊರೊನಾ ಆಕಾರದ ಆಲಿಕಲ್ಲುಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಲಿಕಲ್ಲು ಮಳೆಗಳಲ್ಲಿ ಇದು ಸಾಮಾನ್ಯ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಮೆಕ್ಸಿಕೊದಲ್ಲಿ ಒಟ್ಟು 54,346 ಕೊರೊನಾ ಪ್ರಕರಣಗಳಿದ್ದು, ಒಂದೇ ದಿನದಲ್ಲಿ 2,713 ಹೊಸ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಇಂತಹ ಸಮಯದಲ್ಲಿ ಕೊರೊನಾ ಆಕಾರದ ಆಲಿಕಲ್ಲುಗಳು ಜನರನ್ನು ಹೆಚ್ಚು ಆತಂಕಕ್ಕೆ ದೂಡಿವೆ.
Published On - 9:14 am, Sat, 23 May 20