AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ತಂದಿಟ್ಟ ಸಂಕಷ್ಟ: ಬಯಲಲ್ಲೇ ಆಸ್ಪತ್ರೆ ನಿರ್ಮಾಣ!

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ಕಷ್ಟವಾಗ್ತಿದೆ. ಹೀಗಾಗಿ, ರಷ್ಯಾ ಸೇನಾ ಪಡೆಯು ಬ್ಯೂನಾಕ್ಸ್​ನಲ್ಲಿ ಬಯಲು ಆಸ್ಪತ್ರೆಗಳನ್ನ ಮಾಡ್ತಿದ್ದಾರೆ. ಶೆಡ್​ಗಳಂತೆ ಆಸ್ಪತ್ರೆಗಳನ್ನ ನಿರ್ಮಿಸಿ, ವೈದ್ಯಕೀಯ ಉಪಕರಣಗಳನ್ನ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಷ್ಯಾದಲ್ಲಿ ಈವರೆಗೂ 3 ಲಕ್ಷ 30 ಸಾವಿರ ಕೊರೊನಾ ಸೋಂಕಿತರಿದ್ದಾರೆ. ಬೊಲ್ಸಾನಾರೋ ಮೇಲೆ ಒತ್ತಡ: ಬ್ರೆಜಿಲ್​ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದ್ರೂ, ಅಧ್ಯಕ್ಷ ಬೊಲ್ಸಾನಾರೋರಿಂದ ವೈರಸ್ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅವರು ಕೇವಲ ತಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಲು […]

ಕೊರೊನಾ ತಂದಿಟ್ಟ ಸಂಕಷ್ಟ: ಬಯಲಲ್ಲೇ ಆಸ್ಪತ್ರೆ ನಿರ್ಮಾಣ!
ಸಾಧು ಶ್ರೀನಾಥ್​
| Edited By: |

Updated on: May 23, 2020 | 2:23 PM

Share

ರಷ್ಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದೇ ಕಷ್ಟವಾಗ್ತಿದೆ. ಹೀಗಾಗಿ, ರಷ್ಯಾ ಸೇನಾ ಪಡೆಯು ಬ್ಯೂನಾಕ್ಸ್​ನಲ್ಲಿ ಬಯಲು ಆಸ್ಪತ್ರೆಗಳನ್ನ ಮಾಡ್ತಿದ್ದಾರೆ. ಶೆಡ್​ಗಳಂತೆ ಆಸ್ಪತ್ರೆಗಳನ್ನ ನಿರ್ಮಿಸಿ, ವೈದ್ಯಕೀಯ ಉಪಕರಣಗಳನ್ನ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಷ್ಯಾದಲ್ಲಿ ಈವರೆಗೂ 3 ಲಕ್ಷ 30 ಸಾವಿರ ಕೊರೊನಾ ಸೋಂಕಿತರಿದ್ದಾರೆ.

ಬೊಲ್ಸಾನಾರೋ ಮೇಲೆ ಒತ್ತಡ: ಬ್ರೆಜಿಲ್​ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೀತಿದ್ರೂ, ಅಧ್ಯಕ್ಷ ಬೊಲ್ಸಾನಾರೋರಿಂದ ವೈರಸ್ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅವರು ಕೇವಲ ತಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಲು ಕೆಲ ಪೊಲೀಸ್ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದ್ದಾರೆ ಅನ್ನುವ ವಿಡಿಯೋ ರಿಲೀಸ್ ಮಾಡಲಾಗಿದೆ. ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಮಾತನಾಡಿರೋ ಬೊಲ್ಸಾನಾರೋ, ಅಗತ್ಯವಿದ್ದರೆ ಮಂತ್ರಿಮಂಡಲವನ್ನೇ ಬದಲಾಯಿಸುವ ಬಗ್ಗೆ ಕುಪಿತರಾಗಿ ಮಾತನಾಡಿದ್ದಾರೆ. ಬೊಲ್ಸಾನಾರೋ ರಾಜೀನಾಮೆಗೆ ಒತ್ತ ಹೆಚ್ಚಿದೆ.

ಚಿಲಿ ಗಲಿಬಿಲಿ: ಕೊರೊನಾ ವೈರಸ್​ನಿಂದಾಗಿ ಚಿಲಿ ದೇಶದಲ್ಲಿ ಸೋಂಕಿತರ ಸಂಖ್ಯೆಯೇ 53 ಸಾವಿರ ದಾಟಿದೆ. ಬಡವರು ಹೆಚ್ಚಾಗಿರುವ ಏರಿಯಾಗಳಲ್ಲೇ ಸೋಂಕು ಹರಡುತ್ತಿದೆ.. ಹೀಗಾಗಿ, ಲಾಕ್​ಡೌನ್ ಹೇರಿದ್ದು, ಬಡ ಕುಟುಂಬಗಳಿಗೆ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸ್ಥಳೀಯ ಆಡಳಿತದವರು ಮನೆ ಮನೆಗೆ ತೆರಳಿ ಆಹಾರದ ಕಿಟ್​ಗಳನ್ನ ವಿತರಣೆ ಮಾಡುತ್ತಿವೆ. ಕಳೆದ 7 ದಿನಗಳಲ್ಲಿ 10 ಸಾವಿರ ಸೋಂಕಿತರು ಹೆಚ್ಚಾಗಿರೋದು ಚಿಲಿ ಗಲಿಬಿಲಿಗೊಳ್ಳುವಂತೆ ಮಾಡಿದೆ.

ಇಟಲಿಯಲ್ಲಿ ಜನರ ನಿರ್ಲಕ್ಷ್ಯ: ಕೊರೊನಾ ವೈರಸ್​ನಿಂದ ನಲುಗಿ ಹೋಗಿದ್ದ ಇಟಲಿ ಈ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ, ಮನೆಯಲ್ಲಿ ಬಂಧಿಯಾಗಿದ್ದ ನಾಗರೀಕರು ನೈಟ್ ಲೈಫ್​ಗೆ ಮರಳಿದ್ದಾರೆ. ಬಾರ್ ಪಬ್​ಗಳತ್ತ ಆಗಮಿಸ್ತಿದ್ದು ಮದ್ಯ ಹೀರುತ್ತಾ ಎಂಜಾಜ್ ಮಾಡ್ತಿದ್ದಾರೆ. ಆದ್ರೆ, ಸಾಮಾಜಿಕ ಅಂತರವೇ ಇಲ್ಲದೇ, ಮಾಸ್ಕ್ ಕೂಡ ಧರಿಸದೇ ಗುಂಪು ಗುಂಪಾಗಿ ಸೇರುತ್ತಿದ್ದಾರೆ.

ಜೂನ್​ವರೆಗೂ ಲಾಕ್​ಡೌನ್: ಕೊರೊನಾ ವೈರಸ್ ಪೆರು ರಾಷ್ಟ್ರವನ್ನ ಪತರುಗುಟ್ಟುವಂತೆ ಮಾಡಿದೆ. ಮಾರ್ಚ್​ನಿಂದಲೇ ಲಾಕ್​ಡೌನ್ ಹೇರಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,11,698 ಜನರಿದ್ದಾರೆ. ಲ್ಯಾಟಿನ್ ಅಮೆರಿಕದ ಬಳಿಕ ಎರಡನೇ ಅತಿಹೆಚ್ಚು ಸೋಂಕಿತರು ಇಲ್ಲಿದ್ದಾರೆ. ಹೀಗಾಗಿ, ಸೋಂಕು ತಡೆಗೆ ಮುಂದಾಗಿರೋ ಅಧ್ಯಕ್ಷ ಮಾರ್ಟಿನ್ ವಿಜ್ಕಾರ್ರೋ ಜೂನ್ ಅಂತ್ಯದ ವರೆಗೂ ಲಾಕ್​ಡೌನ್​ ವಿಸ್ತರಣೆ ಮಾಡಿದ್ದಾರೆ.

ಕೊರೊನಾ ‘ತಾಂಡವ’: ವಿಶ್ವದಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡ್ತಿದ್ದು, ಸೋಂಕಿತರ ಸಂಖ್ಯೆ 5ಕೋಟಿ ದಾಟಿದೆ. ಮೃತಪಟ್ಟವರ ಸಂಖ್ಯೆ 3 ಲಕ್ಷ ಮೀರಿದೆ. ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪಟ್ಟಾಗ್ತಿದೆ. 1 ಕೋಟಿ 58 ಲಕ್ಷ ಸೋಂಕಿತರು ದೇಶದಲ್ಲಿದ್ರೆ, 95 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಬ್ರೆಜಿಲ್​ನಲ್ಲಿ 3 ಲಕ್ಷದ 32 ಸಾವಿರ ಜನರಿದ್ರೆ, ರಷ್ಯಾದಲ್ಲಿ 3 ಲಕ್ಷದ 26 ಸಾವಿರ ದಾಟಿದೆ. ಸ್ಪೇನ್​ನಲ್ಲಿ 2ಲ ಕ್ಷದ 81 ಸಾವಿರ ಹಾಗೂ ಇಂಗ್ಲೆಂಡ್​ನಲ್ಲಿ 2 ಲಕ್ಷದ 54 ಸಾವಿರ ಸೋಂಕಿತರಿದ್ರೆ, ಇಟಲಿಯಲ್ಲಿ 2 ಲಕ್ಷದ 28 ಸಾವಿರ ಸೋಂಕಿನ ಸುಳಿಗೆ ಸಿಲುಕಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ