ವಾಷಿಂಗ್ಟನ್, (ಮಾರ್ಚ್ 12): ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಚೆಲ್ ಒಬಾಮಾ ತಮ್ಮ ಸಹೋದರ ಕ್ರೇಗ್ ರಾಬಿನ್ಸನ್ ಅವರೊಂದಿಗೆ ಜೀವನ ಮತ್ತು ವೈಯಕ್ತಿಕ ಅನುಭವಗಳನ್ನು ಚರ್ಚಿಸುವ ಐಎಂಒ ಎಂಬ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಈ ಕಾರ್ಯಕ್ರಮವು ಲೈಫ್ ಸ್ಟೋರಿ, ಸೆಲೆಬ್ರಿಟಿಗಳ ಸಂದರ್ಶನಗಳು, ಪೇರೆಂಟಿಂಗ್ ಮತ್ತು ಆಪ್ತ ಸಂಬಂಧಗಳಂತಹ ವಿಷಯಗಳನ್ನು ಒಳಗೊಂಡಿರುತ್ತದೆ. ಮಿಚೆಲ್ ಒಬಾಮಾ ತಮ್ಮ ಸಹೋದರ ಕ್ರೇಗ್ ರಾಬಿನ್ಸನ್ ಅವರೊಂದಿಗೆ “ಐಎಂಒ” (ನನ್ನ ಅಭಿಪ್ರಾಯದಲ್ಲಿ) ಎಂಬ ಹೊಸ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಇಬ್ಬರೂ ಜೀವನ, ಸಂಬಂಧಗಳು ಮತ್ತು ವೈಯಕ್ತಿಕ ಅನುಭವಗಳನ್ನು ಪ್ರಾಮಾಣಿಕವಾಗಿ ಚರ್ಚಿಸಲಿದ್ದಾರೆ.
ಪಾಡ್‌ಕಾಸ್ಟ್‌ನ ಟ್ರೇಲರ್‌ನಲ್ಲಿ ಮಿಚೆಲ್ ಒಬಾಮಾ ಡೈವೋರ್ಸ್, ವಿವಾಹದ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಪೋಷಕರಾಗುವುದು, ಮದುವೆಯ ಸವಾಲುಗಳು ಅಥವಾ ಡೇಟಿಂಗ್‌ನಂತಹ ವಿಷಯದ ಬಗ್ಗೆ ನೈಜವಾಗಿರುವುದರ ಮೂಲಕ ಜನರು ಒಂಟಿತನವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ವಯಸ್ಕ ಸ್ನೇಹವನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚಿಸಲು ನಟಿ ಇಸಾ ರೇ ಎರಡನೇ ಸಂಚಿಕೆಯಲ್ಲಿ ಮಿಚೆಲ್ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸುತ್ತಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನಕ್ಕೆ ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾರಿಗೆ ಆಹ್ವಾನ: ಹೆಚ್ಕೆ ಪಾಟೀಲ್
ಮಿಚೆಲ್ ಮತ್ತು ಬರಾಕ್ ಒಬಾಮಾ ವಿಚ್ಛೇದನದ ವದಂತಿ:
ಬರಾಕ್ ಒಬಾಮಾ ಮತ್ತು ಮಿಚೆಲ್ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಚರ್ಚೆಗಳು ಎಲ್ಲೆಡೆ ಹರಿದಾಡುತ್ತಿದ್ದವು. ನಡೆಯುತ್ತಿರುವ ವಿಚ್ಛೇದನ ವದಂತಿಗಳ ಹೊರತಾಗಿಯೂ ಮಿಚೆಲ್ ಮತ್ತು ಬರಾಕ್ ಒಬಾಮಾ ಒಟ್ಟಿಗೆ ಇದ್ದಾರೆ. ಹೈ-ಪ್ರೊಫೈಲ್ ಕಾರ್ಯಕ್ರಮಗಳಲ್ಲಿ ಬರಾಕ್ ಒಬಾಮಾ ಮಾತ್ರ ಪಾಲ್ಗೊಂಡು, ಮಿಚೆಲ್ ಹಾಜರಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚ್ಛೇದನದ ವದಂತಿಗಳು ಇತ್ತೀಚೆಗೆ ಮತ್ತೆ ಕಾಣಿಸಿಕೊಂಡವು. ಆದರೆ, ಈ ಊಹಾಪೋಹಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಈ ಬಗ್ಗೆ ಬರಾಕ್ ಒಬಾಮಾ ಮತ್ತು ಮಿಚೆಲ್ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ.
ಇದನ್ನೂ ಓದಿ: ನನ್ನ ತಾಯಿ ವಾಸಿಸುವ ಮನೆಯೂ ನಿಮ್ಮ ಕಾರಿನಷ್ಟೇ ದೊಡ್ಡದು; ಒಬಾಮಾಗೆ ಹೀಗೆ ಹೇಳಿದ್ದರಂತೆ ಪ್ರಧಾನಿ ಮೋದಿ
ಈ ವರ್ಷದ ಪ್ರೇಮಿಗಳ ದಿನದಂದು ಬರಾಕ್ ಒಬಾಮಾ ಮಿಚೆಲ್ ಅವರೊಂದಿಗಿನ ತಮ್ಮ ದಾಂಪತ್ಯ ಇನ್ನೂ ಪ್ರಬಲವಾಗಿದೆ ಎಂದು ಸುಳಿವು ನೀಡಿದ್ದರು. ”ಒಟ್ಟಿಗೆ 32 ವರ್ಷಗಳು ಒಟ್ಟಿಗೇ ಜೀವನ ನಡಸಿದ್ದೇವೆ. ನೀವು ಇನ್ನೂ ನನ್ನ ಉಸಿರಲ್ಲಿ ಬೆರೆತುಹೋಗಿದ್ದೀರಿ” ಎಂದು ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಮಾಬಾ ತಮ್ಮ ಪತ್ನಿಗೆ ಶುಭ ಹಾರೈಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆದರೂ ಅವರಿಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ವದಂತಿಗಳು ಹರಿದಾಡುತ್ತಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Wed, 12 March 25