ಅಪಘಾತದಲ್ಲಿ ಬೇರ್ಪಟ್ಟಿದ್ದ ತಲೆಯನ್ನು ಯಶಸ್ವಿಯಾಗಿ ಜೋಡಿಸಿ ಬಾಲಕನಿಗೆ ಮರುಜೀವ ನೀಡಿದ ಇಸ್ರೇಲ್ ವೈದ್ಯರು

|

Updated on: Jul 14, 2023 | 5:05 PM

ಅಪಘಾತದಲ್ಲಿ ಬಾಲಕನೊಬ್ಬನ ತಲೆ ತುಂಡಾಗಿತ್ತು. ಇದನ್ನು ಮರುಜೋಡಿಸುವ ಮೂಲಕ ಇಸ್ರೇಲ್ ವೈದ್ಯರ ತಂಡ ಬಾಲಕನಿಗೆ ಮರು ಜೀವ ನೀಡಿದ್ದಾರೆ. ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಬದುಕುಳಿಯುವ ಅವಕಾಶ ಶೇಕಡಾ 50 ರಷ್ಟು ಮಾತ್ರ ಇರುತ್ತದೆ. ಆದರೆ ಬಾಲಕನಲ್ಲಿ ಆಗುತ್ತಿರುವ ಚೇತರಿಕೆಯು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಶಸ್ತ್ರಚಿಕಿತ್ಸಕರು ಹೇಳಿದ್ದಾರೆ.

ಅಪಘಾತದಲ್ಲಿ ಬೇರ್ಪಟ್ಟಿದ್ದ ತಲೆಯನ್ನು ಯಶಸ್ವಿಯಾಗಿ ಜೋಡಿಸಿ ಬಾಲಕನಿಗೆ ಮರುಜೀವ ನೀಡಿದ ಇಸ್ರೇಲ್ ವೈದ್ಯರು
ಅಪಘಾತದಲ್ಲಿ ಬೇರ್ಪಟ್ಟಿದ್ದ ಬಾಲಕನ ತಲೆಯನ್ನು ಮರುಜೋಡಿಸಿದ ಇಸ್ರೇಲ್ ವೈದ್ಯರು
Image Credit source: Twitter/Renmusb1
Follow us on

ಪ್ರಥಮ ಪೂಜಿತ ಗಣಪತಿಯ ತಲೆಯನ್ನು ಈಶ್ವರನು ತ್ರಿಶೂಲದಿಂದ ಬೇರ್ಪಡಿಸಿ ನಂತರ ಗುಜಮುಖ ಜೋಡಿಸಿದ್ದು ಪುರಣಾದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಶಿವನ ಅಂಶವಾಗಿರುವ ವೀರಭ್ರನು ಪ್ರಜಾಪತಿ ದಕ್ಷನ ತಲೆಯನ್ನು ಕತ್ತರಿಸಿ ಹೋಮಕುಂಡಕ್ಕೆ ಎಸೆದಿದ್ದು ಹಾಗೂ ಈಶ್ವರನು ಪ್ರತ್ಯಕ್ಷವಾಗಿ ದಕ್ಷನಿಗೆ ಮೇಕೆಯ ತಲೆ ಜೋಡಿಸಿದ್ದು ಕೂಡ ಪುರಾಣಾದಲ್ಲಿ ಉಲ್ಲೇಖಿಸಲಾಗಿದೆ. ಇದೀಗ, ಕಲಿಯುಗದಲ್ಲೂ ಅಂತಹದ್ದೇ ಒಂದು ವಿದ್ಯಮಾನ ನಡೆದಿದ್ದು, ಇಸ್ರೇಲ್​ನ (Israel) ವೈದ್ಯರ ತಂಡವು, ಅಪಘಾತದಲ್ಲಿ ತುಂಡಾಗಿದ್ದ ಬಾಲಕನ ತಲೆಯನ್ನು ಮರುಜೋಡಿಸುವಲ್ಲಿ ಯಶಸ್ವಿಯಾಗಿದೆ.

ಇಸ್ರೇಲ್‌ನ ಶಸ್ತ್ರಚಿಕಿತ್ಸಕರು ಅತ್ಯಂತ ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರುಜೋಡಿಸಿದ್ದಾರೆ ಎಂದು ಜೆರುಸಲೆಮ್ ಆಸ್ಪತ್ರೆ ಬುಧವಾರ ಪ್ರಕಟಿಸಿದೆ.

ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, 12 ವರ್ಷದ ಬಾಲಕ ಸುಲೈಮಾನ್ ಹಸನ್ ಬೈಸಿಕಲ್​ನಲ್ಲಿ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ತಲೆ ತುಂಡಾಗಿತ್ತು. ಕಾರು ಅಪಘಾತದ ನಂತರ ಸುಲೈಮಾನ್ ಹಸನ್​ನನ್ನು ವೆಸ್ಟ್ ಬ್ಯಾಂಕ್‌ನಿಂದ ಹದಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದ ಮೂಲಕ ಕೊಂಡೊಯ್ಯಲಾಯಿತು. ತಪಾಸಣೆ ವೇಳೆ ಬಾಲಕನ ತಲೆಬುರುಡೆಯ ಹಿಂಭಾಗದ ತಳವನ್ನು ಹಿಡಿದಿರುವ ಅಸ್ಥಿರಜ್ಜುಗಳು ಹೆಚ್ಚು ಹಾನಿಗೊಳಗಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: Obstetric ICUs: ರಾಜ್ಯದಲ್ಲಿ 14 ಹೊಸ ಪ್ರಸೂತಿ ತೀವ್ರ ನಿಗಾ ಘಟಕ ಸ್ಥಾಪನೆಗೆ ಮುಂದಾದ ಆರೋಗ್ಯ ಇಲಾಖೆ

ಟೈಮ್ಸ್ ಆಫ್ ಇಸ್ರೇಲ್​ ಜೊತೆ ಮಾತನಾಡಿದ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿದ ಮೂಳೆ ಶಸ್ತ್ರಚಿಕಿತ್ಸಕ ಡಾ.ಒಹಾದ್ ಐನಾವ್, ಬಾಲಕನನ್ನು ಉಳಿಸಲು ಹೆಚ್ಚಿನ ಸಾಮರ್ಥ್ಯ ಹಾಕಿದ್ದು, ನಮ್ಮ ಆಸ್ಪತ್ರೆಯಲ್ಲಿನ ಆಧುನಿಕ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ತಲೆಯನ್ನು ಮರು ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆ ಹಲವು ಗಂಟೆಗಳನ್ನು ತೆಗೆದುಕೊಂಡಿದೆ ಎಂದರು.

ಇಂತಹ ಸ್ಥಿತಿಯಲ್ಲಿ ವ್ಯಕ್ತಿ ಬದುಕುಳಿಯುವ ಅವಕಾಶ ಶೇಕಡಾ 50 ರಷ್ಟು ಮಾತ್ರ ಇರುತ್ತದೆ. ಆದರೆ ಬಾಲಕನಲ್ಲಿ ಆಗುತ್ತಿರುವ ಚೇತರಿಕೆಯು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಶಸ್ತ್ರಚಿಕಿತ್ಸಕರು ಹೇಳಿದ್ದಾರೆ. ಈ ಶಸ್ತ್ರಚಿಕಿತ್ಸೆಯು ಕಳೆದ ತಿಂಗಳು ನಡೆದಿದೆ. ಆದರೆ ಜುಲೈವರೆಗೆ ವೈದ್ಯರು ಫಲಿತಾಂಶಗಳನ್ನು ಬಹಿರಂಗಪಡಿಸಲಿಲ್ಲ. ಆದರೆ ಇತ್ತೀಚೆಗೆ ಹಸನ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆತ ಕುತ್ತಿಗೆಗೆ ಕಟ್ಟುಪಟ್ಟಿ ಧರಿಸುತ್ತಿದ್ದು, ಚೇತರಿಕೆಯ ಮೇಲ್ವಿಚಾರಣೆ ಮುಂದುವರಿಸುವುದಾಗಿ ಆಸ್ಪತ್ರೆ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Fri, 14 July 23