PM Modi France Visit: ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಭಾಗಿ, ಇತರೆ ಕಾರ್ಯಕ್ರಮಗಳ ವಿವರ ಹೀಗಿದೆ
ಪ್ಯಾರಿಸ್, ಜುಲೈ 14: ಪ್ರಧಾನಿ ನರೇಂದ್ರ ಮೋದಿ(Narendra Modi) ಫ್ರಾನ್ಸ್ಗೆ ಭೇಟಿ ನೀಡಿದ್ದು, ಇಂದು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ಯಾರಿಸ್, ಜುಲೈ 14: ಪ್ರಧಾನಿ ನರೇಂದ್ರ ಮೋದಿ(Narendra Modi) ಫ್ರಾನ್ಸ್ಗೆ ಭೇಟಿ ನೀಡಿದ್ದು, ಇಂದು ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಬಾಸ್ಟಿಲ್ ಡೇ ಪರೇಡ್ ಕೂಡ ಒಂದು. ಬಾಸ್ಟಿಲ್ ಡೇಯನ್ನು ಫ್ರೆಂಚ್ ನ್ಯಾಷನಲ್ ಡೇ ಎಂದೂ ಕೂಡ ಕರೆಯಲಾಗುತ್ತದೆ, ಇಂದು ಮಿಲಿಟರಿ ಮೆರವಣಿಗೆ ನಡೆಯಲಿದೆ.
ಇದು ಕೇವಲ ಸಶಸ್ತ್ರ ಪಡೆಗಳಿಗೆ ಮಾತ್ರವಲ್ಲದೆ ಇಡೀ ಭಾರತದ ಜನರಿಗೆ ಫ್ರೆಂಚ್ ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮವಾದ ಬಾಸ್ಟಿಲ್ ಡೇಯಲ್ಲಿ ನಮ್ಮನ್ನು ಪ್ರತಿನಿಧಿಸಿರುವುದು ಒಂದು ಹೆಮ್ಮೆಯ ವಿಷಯವಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರತದ ನೌಕಾದಳ, ಭೂದಳ, ವಾಯು ದಳ ಸಹಿತ ಮೂರು ತುಕಡಿಗಳು ಭಾಗವಹಿಸುತ್ತಿವೆ. ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬೇಲ್ ಮುನ್ನಡೆಸಲಿದ್ದಾರೆ.
ಈ ಮೆರವಣಿಗೆಯನ್ನು ವೀಕ್ಷಿಸಲು ಪ್ರತಿ ವರ್ಷ ಭಾರತ ಹಾಗೂ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಫ್ರಾನ್ಸ್‌ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಭಾರತೀಯ ಪ್ರಧಾನಿಗೆ ನೀಡಿದರು. ಇಂದು ಪ್ರಧಾನಿ ಮೋದಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಂತರ ಫ್ರೆಂಚ್ ಅಧ್ಯಕ್ಷರೊಂದಿಗೆ ಭಾರತೀಯ ನಿಯೋಗವನ್ನು ಭೇಟಿ ಮಾಡಲಿದ್ದಾರೆ.
ಮತ್ತಷ್ಟು ಓದಿ: PM Modi France Visit: ಭಾರತದ ಪ್ರಧಾನಿಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ, ಮೋದಿಗೆ ಮತ್ತೊಂದು ಗರಿ
ಪ್ರಧಾನಿ ಮೋದಿ ಅವರು ಮಧ್ಯಾಹ್ನ 1.30ರ ಸುಮಾರಿಗೆ ಬಾಸ್ಟಿಲ್ ಡೇ ಪರೇಡ್ ವೀಕ್ಷಿಸಲಿದ್ದಾರೆ. ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಬ್ರೌನ್-ಪಿವೆಟ್ ಅವರು ಸಂಜೆ 4.30 ಕ್ಕೆ ಭೋಜನವನ್ನು ಏರ್ಪಡಿಸಿದ್ದಾರೆ, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಸಂಜೆ 6:15ರ ಸುಮಾರಿಗೆ ಪ್ರಧಾನಿ ವಿವಿಧ ಚಿಂತಕರನ್ನು ಭೇಟಿಯಾಗಲಿದ್ದಾರೆ.
ರಾತ್ರಿ 8.30ಕ್ಕೆ ಎಲಿಸೀ ಅರಮನೆಯಲ್ಲಿ ನಡೆಯುವ ಔಪಚಾರಿಕ ಸ್ವಾಗತ ಸಮಾರಂಭದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದು, ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಬಳಿಕ ಪತ್ರಿಕಾಗೋಷ್ಠಿ ನಡೆಯಲಿದೆ.
ಇಂದು ರಾತ್ರಿ ಸುಮಾರು 10:30ಕ್ಕೆ ಪಿಎಂ ಇಂಡಿಯಾ-ಫ್ರಾನ್ಸ್ ಸಿಇಒ ಫೋರಂನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ನಂತರ, ತಡರಾತ್ರಿ ಪ್ರಧಾನಿ ಅವರು ಲೌವ್ರೆ ಮ್ಯೂಸಿಯಂಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಐಫೆಲ್ ಟವರ್‌ನಲ್ಲಿ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ