Miss Universe 2023: 2023ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡ ನಿಕರಾಗುವಾದ ಶೆಯ್ನಿಸ್ ಪಲಾಸಿಯೋಸ್

|

Updated on: Nov 19, 2023 | 12:57 PM

72ನೇ ಮಿಸ್‌ ಯೂನಿವರ್ಸ್‌ ಸ್ಪರ್ಧೆಯು ನಿನ್ನೆ ಎಲ್‌ ಸಾಲ್ವಡಾರ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. 90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದು, ವಿಶ್ವ ಸುಂದರಿ ಪಟ್ಟವನ್ನು ನಿಕರಾಗುವಾದ ಚೆಲುವೆ ಶೆಯ್ನಿಸ್ ಪಲಾಸಿಯೋಸ್ ಮುಡಿಗೇರಿಸಿಕೊಂಡಿದ್ದಾರೆ.

Miss Universe 2023: 2023ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡ ನಿಕರಾಗುವಾದ ಶೆಯ್ನಿಸ್ ಪಲಾಸಿಯೋಸ್
Miss Universe 2023
Image Credit source: Twitter
Follow us on

72ನೇ ಮಿಸ್‌ ಯೂನಿವರ್ಸ್‌ (Miss Universe) ಸ್ಪರ್ಧೆಯು ನಿನ್ನೆ(ನವೆಂಬರ್‌ 18) ಎಲ್‌ ಸಾಲ್ವಡಾರ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. 90 ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದು, ವಿಶ್ವ ಸುಂದರಿ ಪಟ್ಟವನ್ನು ನಿಕರಾಗುವಾದ ಸುಂದರಿ ಶೆಯ್ನಿಸ್ ಪಲಾಸಿಯೋಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಕಾಲಮಾನದ ಪ್ರಕಾರ ಇಂದು (ನವೆಂಬರ್​​ 19) ಬೆಳಿಗ್ಗೆ 6:30 ಕ್ಕೆ ಮಿಸ್ ಯೂನಿವರ್ಸ್ ಪಟ್ಟ ಘೋಷಣೆಯಾಗಿದೆ. 23 ವರ್ಷದ ಶ್ವೇತಾ ಶಾರ್ದಾ ಭಾರತವನ್ನು ಪ್ರತಿನಿಧಿಸಿ ಸೆಮಿಫೈನಲ್‌ಗೆ ವರಗೆ ತಲುಪಿದ್ದರು. ಈ ಮೂಲಕ ಶಾರ್ದಾ ಅಗ್ರ 20 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆಕೊಂಡಿದ್ದಾರೆ.

ನಿಕರಾಗುವಾದಿಂದ ಪ್ರತಿನಿಧಿಸಿದ ವಿಶ್ವ ಸುಂದರಿ ವಿಜೇತೆ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ಕಾರ್ನೆಜೊ ಅವರು ಕಳೆದ ವರ್ಷದ ವಿಜೇತ ಆರ್’ಬೊನಿ ಗೇಬ್ರಿಯಲ್ ಅವರಿಂದ 2023 ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 23 ವರ್ಷದ ಪಲಾಸಿಯೋಸ್ ಕಿರೀಟವನ್ನು ಮುಡಿಗೇರಿಸಿಕೊಂಡರೆ, ಥಾಯ್ಲೆಂಡ್‌ನ ಆಂಟೋನಿಯಾ ಪೋರ್ಸಿಲ್ಡ್ ರನ್ನರ್ ಅಪ್ ಆಗಿ ಹಾಗೂ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 2023ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಸುಂದರಿ ಯಾರು ಗೊತ್ತಾ?

2023ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿರುವ ಸುಂದರ ಕ್ಷಣ ಇಲ್ಲಿದೆ ನೋಡಿ:

ಅಂತಿಮ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಶೆಯ್ನಿಸ್ ಅಲೋಂಡ್ರಾ ಪಲಾಸಿಯೊಸ್ ನೀಡಿದ ಉತ್ತರ ಇಡೀ ವಿಶ್ವದ ಗಮನಸೆಳೆದಿದೆ. ಮಹಿಳಾ ಶಕ್ತಿ ಹಾಗೂ ಸಬಲೀಕರಣಕ್ಕೆ ಸ್ಪೂರ್ತಿಯಾಗಿರುವ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸ್ತ್ರೀವಾದದ ತಾಯಿ ಎಂದು ಕರೆಯಲ್ಪಡುವ ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಅವರ ಹೆಸರನ್ನು ಮಿಸ್ ನಿಕರಾಗುವಾ ಉಲ್ಲೇಖಿಸಿದರು. ಈ ಮೂಲಕ ತೀರ್ಪುಗಾರರ ಮನ ಗೆದ್ದಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:48 pm, Sun, 19 November 23