ಅಪಾರ್ಟ್ಮೆಂಟ್ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮಿಸ್ ಯುಎಸ್ಎ ವಿನ್ನರ್; ಸಾವಿಗೂ ಮೊದಲು ಇನ್ಸ್ಟಾ ಪೋಸ್ಟ್ !
ಚೆಸ್ಲಿ ಸಾವಿನ ಬಗ್ಗೆ ಅವರ ಕುಟುಂಬ ದೃಢಪಡಿಸಿದೆ. ನಮ್ಮ ಪ್ರೀತಿಯ ಚೆಸ್ಲಿ ಕ್ರಿಸ್ಟ್ ನಮ್ಮ ಪಾಲಿಗೆ ಬಹುದೊಡ್ಡ ಬೆಳಕಾಗಿದ್ದಳು. ಎಲ್ಲರನ್ನೂ ಕಾಳಜಿ ಮಾಡುತ್ತಿದ್ದಳು, ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಅವಳನ್ನು ಕಳೆದುಕೊಂಡಿದ್ದು ತುಂಬ ನೋವು ತಂದಿದೆ ಎಂದಿದ್ದಾರೆ.
ಮಾಜಿ ಮಿಸ್ ಯುಎಸ್ಎ ಬಿರುದು ಪಡೆದಿದ್ದ ಚೆಸ್ಲಿ ಕ್ರಿಸ್ಟ್ (30)ಚೆ ತಮ್ಮ ಮನೆ ಇರುವ ಎತ್ತರದ ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರ ಮಿಸ್ ಯುಎಸ್ಎ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಇವರು, ಮ್ಯಾನ್ಹಟ್ಟನ್ನ 60 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿನ 9ನೇ ಫ್ಲೋರ್ನಲ್ಲಿ ವಾಸವಾಗಿದ್ದರು. ಭಾನುವಾರ ಮುಂಜಾನೆ ಅಪಾರ್ಟ್ಮೆಂಟ್ನ ಎದುರಿನ ರಸ್ತೆಯಲ್ಲಿ ಅವರ ಶವ ಪತ್ತೆಯಾಗಿದೆ. ಭಾನುವಾರ ಮುಂಜಾನೆ 7ಗಂಟೆ ಹೊತ್ತಿಗೆ ಚೆಸ್ಲಿ ಕ್ರಿಸ್ಟ್ 29ನೇ ಫ್ಲೋರ್ನಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಚೆಸ್ಲಿ ಸಾವಿನ ಬಗ್ಗೆ ಅವರ ಕುಟುಂಬ ದೃಢಪಡಿಸಿದೆ. ನಮ್ಮ ಪ್ರೀತಿಯ ಚೆಸ್ಲಿ ಕ್ರಿಸ್ಟ್ ನಮ್ಮ ಪಾಲಿಗೆ ಬಹುದೊಡ್ಡ ಬೆಳಕಾಗಿದ್ದಳು. ಎಲ್ಲರನ್ನೂ ಕಾಳಜಿ ಮಾಡುತ್ತಿದ್ದಳು, ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಅವಳನ್ನು ಕಳೆದುಕೊಂಡಿದ್ದು ತುಂಬ ನೋವು ತಂದಿದೆ. ಆಕೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದಳು. ಎಲ್ಲರನ್ನೂ ಪ್ರೀತಿಸುತ್ತಿದ್ದಳು. ಬಡವರ ಸೇವೆ ಮಾಡುತ್ತಿದ್ದಳು. ನಮ್ಮ ಮನೆಯ ಮಗಳಾಗಿ, ಸಹೋದರಿಯಾಗಿ, ಸ್ನೇಹಿತೆ, ಮಾರ್ಗದರ್ಶಿಯಾಗಿ ಇದ್ದಳು ಎಂದು ಚೆಸ್ಲಿ ಕುಟುಂಬದವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಾವಿಗೂ ಕೆಲವೇ ಗಂಟೆ ಮೊದಲು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ ಕ್ರಿಸ್ಟ್, ಈ ದಿನ ನಿಮಗೆ ಶಾಂತಿ ಮತ್ತು ವಿಶ್ರಾಂತಿಯನ್ನು ತರಲಿ ಎಂದು ಪೋಸ್ಟ್ ಹಾಕಿದ್ದರು. ಕ್ರಿಸ್ಟ್ ಸಾವಿಗೆ ನಿಜವಾದ ಕಾರಣವೇನು ಎಂಬ ಬಗ್ಗೆ ತನಿಖೆ ಶುರುವಾಗಿದೆ. ಆದರೆ ಸದ್ಯಕ್ಕೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇನ್ನು ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲದಿರುವುದೇ ಸಾವಿಗೆ ಕಾರಣವಾ ಎಂಬುದೊಂದು ಅನುಮಾನವೂ ಮೂಡಿದೆ. ಈ ಹಿಂದೆ 2019ರಲ್ಲಿ ಮಾನಸಿಕ ಆರೋಗ್ಯ, ಒತ್ತಡ ನಿಭಾಯಿಸುವ ಬಗ್ಗೆ ಮಾತನಾಡುತ್ತ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಾವು ಅನುಸರಿಸುವ ಕ್ರಮಗಳ ಬಗ್ಗೆ ಕ್ರಿಸ್ಟ್ ಮಾತನಾಡಿದ್ದರು. ನಾನು ನನ್ನ ಮನಸಿನ ಸುಸ್ಥಿರ ಆರೋಗ್ಯಕ್ಕಾಗಿ ಆಗಾಗ ಕೌನ್ಸೆಲರ್ ಬಳಿ ಕೂಡ ಮಾತನಾಡುತ್ತೇನೆ. ಇದು ನನಗೆ ಬಹುದೊಡ್ಡ ಸಮಾಧಾನ ಕೊಡುತ್ತದೆ ಎಂದು ಹೇಳಿದ್ದರು. ಹಾಗೇ, ಜನರು ಮಾನಸಿಕ ಒತ್ತಡ ನಿಭಾಯಿಸಿಕೊಳ್ಳಲು ಏನೆಲ್ಲ ಮಾಡಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು.
View this post on Instagram
ಇದನ್ನೂ ಓದಿ: ‘ಮತ್ತು ಬರಿಸಿ ಅತ್ಯಾಚಾರ ಮಾಡಿದರು’; ಖ್ಯಾತ ಗಾಯಕನ ವಿರುದ್ಧ ಮಾಡೆಲ್ ಆರೋಪ: 150 ಕೋಟಿ ಕೊಡಲು ಆಗ್ರಹ