ಸ್ವಿಜರ್ಲ್ಯಾಂಡ್: ಮಂಕಿಪಾಕ್ಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ (WHO) ಇಂದು (ಜುಲೈ 23) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಡಬ್ಲ್ಯುಹೆಚ್‌ಒ ಮಂಕಿಪಾಕ್ಸ್ ವಿರುದ್ಧ ಹೋರಾಡಲು ಜಾಗತಿಕ ಸಹಕಾರಕ್ಕಾಗಿ ಕರೆ ನೀಡಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ “ಮಂಕಿಪಾಕ್ಸ್ ಕಾಯಿಲೆಯು ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
"For all of these reasons, I have decided that the global #monkeypox outbreak represents a public health emergency of international concern," says WHO DG Dr Tedros Adhanom pic.twitter.com/USzn5CIQE2
— ANI (@ANI) July 23, 2022
ಇಲ್ಲಿಯವರೆಗೆ 60 ರಾಷ್ಟ್ರಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಮತ್ತು ಐದು ಸಾವು ಸಂಭವಿಸಿವೆ ಎಂದು ವರದಿಯಾಗಿದೆ. ಮಂಕಿಪಾಕ್ಸ್ನ್ನು ಎದುರಿಸಲು ಪರಿಣಾಮಕಾರಿ ಮಾಹಿತಿ ಮತ್ತು ಸೇವೆಗಳನ್ನು ಪ್ರಾರಂಭಿಸಲು ಎಲ್ಲಾ ದೇಶಗಳು ನಿಕಟವಾಗಿ ಕೆಲಸ ಮಾಡುವುದು ಅತ್ಯಗತ್ಯವಾದ ಕಾರಣ, ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.
Published On - 8:19 pm, Sat, 23 July 22