9/11 ಲಾಡೆನ್​ ದಾಳಿಗೆ ತುತ್ತಾಗಿದ್ದ ಸ್ಥಳದಲ್ಲಿ ತಲೆ ಎತ್ತಿತು ವಿಶ್ವದ ಅತಿ ಐಷಾರಾಮಿ ರೈಲ್ವೆ ನಿಲ್ದಾಣ!

| Updated By: ಸಾಧು ಶ್ರೀನಾಥ್​

Updated on: Dec 07, 2020 | 5:08 PM

ಈ ರೈಲ್ವೆ ನಿಲ್ದಾಣ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, 24 ಗಂಟೆ ಈ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಇರುತ್ತದೆ. ಇದು ವಿಶ್ವದ ದುಬಾರಿ ರೈಲ್ವೆ ನಿಲ್ದಾಣ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.

9/11 ಲಾಡೆನ್​ ದಾಳಿಗೆ ತುತ್ತಾಗಿದ್ದ ಸ್ಥಳದಲ್ಲಿ ತಲೆ ಎತ್ತಿತು ವಿಶ್ವದ ಅತಿ ಐಷಾರಾಮಿ ರೈಲ್ವೆ ನಿಲ್ದಾಣ!
ನ್ಯೂಯಾರ್ಕ್​ ರೈಲ್ವೆ ನಿಲ್ದಾಣ
Follow us on

ರೈಲ್ವೆ ನಿಲ್ದಾಣ ಎಂದಾಕ್ಷಣ ಸಾಲು ಸಾಲು ರೈಲ್ವೆ ಹಳಿಗಳು, ಅದರ ಮೇಲೆ ಓಡಾಡುವ ಹೆಗ್ಗಣ, ಹಳಿಗಳ ಮೇಲೆ ಬಿದ್ದ ರಾಶಿ ರಾಶಿ ಕಸ ನೆನಪಾಗುತ್ತೆ.  ಎಲ್ಲಕ್ಕಿಂತ ಹೆಚ್ಚಾಗಿ ಗಬ್ಬುನಾರುವ ವಾತಾವರಣ. ಕೂಗಾಟ-ತಳ್ಳಾಟ. ಇಎವಲ್ಲ ಸರ್ವೆ ಸಾಮಾನ್ಯ ಎಂಬಷ್ಟು ಜನಜೀವನ ಅದಕ್ಕೆ ಒಗ್ಗಿಕೊಂಡಿದೆ. ಆದರೆ, ಇಲ್ಲೊಂದು ವಿಶ್ವದ ದುಬಾರಿ ಹಾಗೂ ಅತಿ ಐಷಾರಾಮಿ ರೈಲ್ವೆ ನಿಲ್ದಾಣ ನಿಮ್ಮ ಕಲ್ಪನೆಗಳಿಗೆ ತದ್ವಿರುದ್ಧವಾಗಿದೆ!

ಹೌದು, ಅಮೆರಿಕದ ನ್ಯೂಯಾರ್ಕ್​ನಲ್ಲಿ ಬರೋಬ್ಬರಿ 29,559 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲೇ ಅತಿ ದುಬಾರಿ ರೈಲ್ವೆ ನಿಲ್ದಾಣ ಎನ್ನುವ ಖ್ಯಾತಿಗೆ ಭಾಜನವಾಗಿದೆ.

2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ವಿಮಾನ ಹೈಜಾಕ್​ ಮಾಡಿ ವರ್ಡ್​ ಟ್ರೇಡ್​ ಸೆಂಟರ್​ ನಾಶ ಮಾಡಿದ್ದರು. ಈ ಕಟ್ಟಡದ ಪಕ್ಕದಲ್ಲೇ ಇದ್ದ ನ್ಯೂಯಾರ್ಕ್​ ವಿಮಾನ ನಿಲ್ದಾಣ ಧೂಳಿನಿಂದ ತುಂಬಿ ಹೋಗಿತ್ತು. ಹೀಗಾಗಿ, 2004ರಲ್ಲಿ ಹೊಸ ರೈಲ್ವೆ ನಿಲ್ದಾಣ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿತ್ತು. ಅಂತೆಯೇ 2004ರಲ್ಲಿ ಯೋಜನೆ ಆರಂಭಗೊಂಡಿತ್ತು. ಅವಳಿ ಕಟ್ಟಡ ಇದ್ದ ಜಾಗದಲ್ಲೇ ಈಗ ರೈಲ್ವೆ ನಿಲ್ದಾಣ ಕಟ್ಟಲಾಗಿದೆ.

12 ವರ್ಷ ಕಾಮಗಾರಿ:
2004ರಲ್ಲಿ ಈ ಯೋಜನೆ ಆರಂಭಗೊಂಡಿತ್ತು. 2009ರಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಆಲೋಚನೆ ಇವರದ್ದಾಗಿತ್ತು. ಆದರೆ, ಈ ಯೋಜನೆ ಹೆಚ್ಚು ಸಮಯ ತೆಗೆದುಕೊಳ್ಳಲು ಆರಂಭಿಸಿತ್ತು. ಅಂದುಕೊಂಡಿದ್ದಕ್ಕಿಂತಲೂ 7 ವರ್ಷ ತಡವಾಗಿ ಯೋಜನೆ ಪೂರ್ಣಗೊಂಡಿತ್ತು. ಯೋಜನೆಗಿಂತ ಎರಡು ಪಟ್ಟು ಹಣ ವೆಚ್ಚವಾಗಿತ್ತು.

ಏನಿಲ್ಲ ಎಂದು ಕೇಳಿ?:
ಈ ರೈಲ್ವೆ ನಿಲ್ದಾಣ ಸಾಮಾನ್ಯ ರೈಲ್ವೆ ನಿಲ್ದಾಣದಂತಲ್ಲ. ಈ ರೈಲ್ವೆ ನಿಲ್ದಾಣಕ್ಕೆ ತೆರಳೋದು ಒಂದೇ, ಮಾಲ್​​ಗೆ ತೆರಳೋದು ಒಂದೇ. ಏಕೆಂದರೆ, ಈ ರೈಲ್ವೆ ನಿಲ್ದಾಣದಲ್ಲಿ ಶಾಪಿಂಗ್​ ಮಾಲ್​ ಇದೆ, ರೆಸ್ಟೋರೆಂಟ್​ಗಳಿವೆ. ಹೀಗಾಗಿ, ರೈಲಿಗೆ ಕಾಯೋ ಅವಧಿಯಲ್ಲಿ ನೀವು ಶಾಪಿಂಗ್​ ಮಾಡಬಹುದು. ಇನ್ನು, ಇಡೀ ನಿಲ್ದಾಣಕ್ಕೆ ಎಸಿ ವ್ಯವಸ್ಥೆ ಕೂಡ ಇದೆ.

ಪ್ರಮುಖ ನಗರಗಳಿಗೆ ಸಂಪರ್ಕ:
ಈ ರೈಲ್ವೆ ನಿಲ್ದಾಣ ಅಮೆರಿಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ, 24 ಗಂಟೆ ಈ ರೈಲ್ವೆ ನಿಲ್ದಾಣದಲ್ಲಿ ಜನಸಂದಣಿ ಇರುತ್ತದೆ.

Photos: ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಮ್ಯೂಸಿಯಂ ಉದ್ಘಾಟನೆಯಾಯ್ತು!