ಬೇಗ ಗಾಜಾ ಬಿಟ್ಟು ಹೋಗಿ ಇಲ್ಲವಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತೆ: ಇಸ್ರೇಲ್ ಎಚ್ಚರಿಕೆ

|

Updated on: Oct 22, 2023 | 3:09 PM

ಪ್ಯಾಲೆಸ್ತೀನಿಯನ್ನರಿಗೆ ಉತ್ತರ ಗಾಜಾದಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್​ ಹೇಳಿದೆ. ಒಂದೊಮ್ಮೆ ಹೋಗದಿದ್ದರೆ ಅಂಥವರನ್ನು ನಾವು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಗಾಜಾದ ಉತ್ತರ ಭಾಗದಲ್ಲಿರುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ, ನಿಮಗೆ ಈಗಾಗಲೇ ದಕ್ಷಿಣಕ್ಕೆ ತೆರಳುವಂತೆ ನಾವು ಕೇಳಿಕೊಂಡಿದ್ದಾಗಿದೆ. ಇನ್ನೂ ನೀವು ಈ ಜಾಗವನ್ನು ಬಿಟ್ಟು ಹೋಗಿಲ್ಲ ಎಂದಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ಹೇಳಿದೆ.

ಬೇಗ ಗಾಜಾ ಬಿಟ್ಟು ಹೋಗಿ ಇಲ್ಲವಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಬೇಕಾಗುತ್ತೆ: ಇಸ್ರೇಲ್ ಎಚ್ಚರಿಕೆ
ಗಾಜಾ
Image Credit source: Hindustan Times
Follow us on

ಪ್ಯಾಲೆಸ್ತೀನಿಯನ್ನರಿಗೆ ಉತ್ತರ ಗಾಜಾದಿಂದ ದಕ್ಷಿಣಕ್ಕೆ ತೆರಳುವಂತೆ ಇಸ್ರೇಲ್​ ಹೇಳಿದೆ. ಒಂದೊಮ್ಮೆ ಹೋಗದಿದ್ದರೆ ಅಂಥವರನ್ನು ನಾವು ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಗಾಜಾದ ಉತ್ತರ ಭಾಗದಲ್ಲಿರುವುದು ನಿಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ, ನಿಮಗೆ ಈಗಾಗಲೇ ದಕ್ಷಿಣಕ್ಕೆ ತೆರಳುವಂತೆ ನಾವು ಕೇಳಿಕೊಂಡಿದ್ದಾಗಿದೆ. ಇನ್ನೂ ನೀವು ಈ ಜಾಗವನ್ನು ಬಿಟ್ಟು ಹೋಗಿಲ್ಲ ಎಂದಾದರೆ ನಿಮ್ಮನ್ನು ಉಗ್ರರೆಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್​ ಇಂದು ಬೆಳಗ್ಗೆ ಗಾಜಾದ ಮಸೀದಿಯೊಂದರ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾದ ವೆಸ್ಟ್​ ಬ್ಯಾಂಕ್​ನ ಜೆನಿನ್ ನಗರದಲ್ಲಿರುವ ಅಲ್​-ಅನ್ಸಾರ್ ಮಸೀದಿ ಸಂಕೀರ್ಣದಲ್ಲಿರುವ ಭಯೋತ್ಪಾದಕ ಸಂಘಟನೆ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದ್ ಕಮಾಂಡ್ ಸೆಂಟರ್ ಮೇಲೆ ಇಸ್ರೇಲಿ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.

ಆದರೆ, ಇದು ಇನ್ನೂ ದೃಢಪಟ್ಟಿಲ್ಲ. ಇದಕ್ಕೂ ಮುನ್ನ ನೂರ್ ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದರು. ಗಾಜಾ ನಗರದ ಜನರು ತಮ್ಮ ಸುರಕ್ಷತೆಗಾಗಿ ದಕ್ಷಿಣ ಗಾಜಾದ ಕಡೆಗೆ ವಲಸೆ ಹೋಗುವಂತೆ ಇಸ್ರೇಲ್ ಕೇಳಿಕೊಂಡಿತ್ತು. ಹಮಾಸ್ ಗುಂಪು ಇಬ್ಬರು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಮತ್ತಷ್ಟು ಓದಿ: Israel Gaza War: ಗಾಜಾದ ವೆಸ್ಟ್​ ಬ್ಯಾಂಕ್​ನ ಅಲ್​-ಅನ್ಸಾರ್​ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತೊಮ್ಮೆ ಗಾಜಾವನ್ನು ವಶಪಡಿಸಿಕೊಳ್ಳುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ