ಕೆನಡಾದಲ್ಲಿ ಹರ್ದೀಪ್ ನಿಜ್ಜಾರ್ ಸಹವರ್ತಿ ಸಿಮ್ರಾನ್​​ಜಿತ್ ಸಿಂಗ್ ಮನೆಯ ಮೇಲೆ ಗುಂಡು ಹಾರಾಟ

ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ , ಸರ್ರೆ ಆರ್​​ಸಿಎಂಪಿ ಫೆಬ್ರವರಿ 1 ರಂದು, ತಡರಾತ್ರಿ 1:21 ಕ್ಕೆ, ನಿವಾಸದ ಮೇಲೆ ಗುಂಡು ಹಾರಿಸಿದ ವರದಿಯನ್ನು ಸ್ವೀಕರಿಸಿದೆ.ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದು ಸಾಕ್ಷ್ಯವನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದೆ. ಆದಾಗ್ಯೂ, ಯಾವುದೇ ಸಾವು ನೋವು ಸಂಭವಿಸಿಲ್ಲ.

ಕೆನಡಾದಲ್ಲಿ ಹರ್ದೀಪ್ ನಿಜ್ಜಾರ್ ಸಹವರ್ತಿ ಸಿಮ್ರಾನ್​​ಜಿತ್ ಸಿಂಗ್ ಮನೆಯ ಮೇಲೆ ಗುಂಡು ಹಾರಾಟ
ಹರ್ದೀಪ್ ನಿಜ್ಜಾರ್
Follow us
|

Updated on: Feb 02, 2024 | 12:43 PM

ಸರ್ರೆ ಫೆಬ್ರುವರಿ 02: ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆ ಪಟ್ಟಣದಲ್ಲಿ (Surrey)ಕೊಲ್ಲಲ್ಪಟ್ಟ ಖಲಿಸ್ತಾನ್ (Khalistan)ಪರ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜಾರ್ (Hardeep Singh Nijjar) ಸಹವರ್ತಿ ನಿವಾಸದ ಮೇಲೆ ಗುಂಡು ಹಾರಾಟ ನಡೆದ ಘಟನೆ ವರದಿ ಆಗಿದೆ. ಸಿಮ್ರಾನ್ ಜಿತ್ ಸಿಂಗ್ ಮನೆ ಮೇಲೆ ಗುಂಡು ಹಾರಾಟ ನಡೆಸಲಾಗಿದೆ ಎಂದು ಕೆನಡಾದ ಮಾಧ್ಯಮಗಳು ಹೇಳಿವೆ. ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ನಿವಾಸ ಹಾಗೂ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೆ ಗುಂಡುಗಳು ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ನ ಸರ್ರೆ ತುಕಡಿಯು “ದಕ್ಷಿಣ ಸರ್ರೆಯ ನಿವಾಸದಲ್ಲಿ ಗುಂಡು ಹಾರಿಸಿದ ಘಟನೆಯನ್ನು” ದೃಢಪಡಿಸಿದೆ.

ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ , ಸರ್ರೆ ಆರ್​​ಸಿಎಂಪಿ ಫೆಬ್ರವರಿ 1 ರಂದು, ತಡರಾತ್ರಿ 1:21 ಕ್ಕೆ, ನಿವಾಸದ ಮೇಲೆ ಗುಂಡು ಹಾರಿಸಿದ ವರದಿಯನ್ನು ಸ್ವೀಕರಿಸಿದೆ.ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದು ಸಾಕ್ಷ್ಯವನ್ನು ಪತ್ತೆ ಮಾಡಿದ್ದಾರೆ ಎಂದು ಹೇಳಿದೆ. ಆದಾಗ್ಯೂ, ಯಾವುದೇ ಸಾವು ನೋವು ಸಂಭವಿಸಿಲ್ಲ.

ಸರ್ರೆ ಆರ್‌ಸಿಎಂಪಿಯ ಪ್ರಮುಖ ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ. ತನಿಖಾಧಿಕಾರಿಗಳು ಇದು ಒಂದು ಪ್ರತ್ಯೇಕ ಘಟನೆ ಎಂದು ಹೇಳಿದ್ದು ಈ ಘಟನೆಯ ಉದ್ದೇಶ ಏನು ಎಂದು ಪತ್ತೆ ಹಚ್ಚಲು ಅಧಿಕಾರಿಗಳು ಇನ್ನೂ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆದಾಗ್ಯೂ, ಜನವರಿ 26 ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸದ ಹೊರಗೆ ಪ್ರತಿಭಟನೆಯನ್ನು ಆಯೋಜಿಸಲು ಸಿಂಗ್ ಸಹಾಯ ಮಾಡಿದ ನಂತರ ಖಲಿಸ್ತಾನ್ ಪರ ಗುಂಪುಗಳು ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿವೆ.

ಸಿಮ್ರಾನ್​​ಜಿತ್ ಸಿಂಗ್ “ಇದು ಭಾರತೀಯ ರಾಜ್ಯ ಅವರದ್ದೇ ಇಲ್ಲಿ ನಡೆಯುತ್ತದೆ ಎಂದು ಭಾವಿಸುತ್ತಾರೆ. ಇನ್ನೊಬ್ಬರನ್ನು ಹೆದರಿಸಲು ಅವರು ಇದನ್ನು ಬಳಸುತ್ತಾರೆ. ಹರ್ದೀಪ್ ಸಿಂಗ್ ನಿಜ್ಜಾರ್ ಜತೆಗಿನ ಸಿಮ್ರಾನ್​​ಜಿತ್ ಅವರ ಸಂಪರ್ಕವು ಇದಕ್ಕೆ ಕಾರಣವಾಗಿರಬಹುದು ಎಂದು ಬ್ರಿಟಿಷ್ ಕೊಲಂಬಿಯಾ ಗುರುದ್ವಾರಸ್ ಕೌನ್ಸಿಲ್‌ನ ವಕ್ತಾರ ಮತ್ತು ಕೆನಡಾದ ಪ್ರಮುಖ ಪ್ರತ್ಯೇಕತಾವಾದಿ ಮೊನೀಂದರ್ ಸಿಂಗ್, ಸಿಬಿಸಿ ನ್ಯೂಸ್‌ಗೆ ಹೇಳಿದ್ದಾರೆ.

ಇದನ್ನೂ ಓದಿ: ಕೆನಡಾ: ಗಣಿಗಾರಿಕೆಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಅಪಘಾತ, 6ಕ್ಕೂ ಅಧಿಕ ಮಂದಿ ಸಾವು

ಆದಾಗ್ಯೂ, ಡಿಸೆಂಬರ್ 27 ರಂದು ಲಕ್ಷ್ಮೀ ನಾರಾಯಣ ಮಂದಿರದ ಅಧ್ಯಕ್ಷ ಸತೀಶ್ ಕುಮಾರ್ ಅವರ ಪುತ್ರನ ನಿವಾಸದ ಮೇಲೆ ಗುಂಡಿನ ದಾಳಿ ಸೇರಿದಂತೆ ಇತ್ತೀಚಿನ ತಿಂಗಳುಗಳಲ್ಲಿ ಸರ್ರೆ ಮತ್ತು ಹತ್ತಿರದ ಪಟ್ಟಣಗಳು ಗುಂಪು-ಸಂಬಂಧಿತ ಹಿಂಸಾಚಾರದ ಉಲ್ಬಣವನ್ನು ಎದುರಿಸುತ್ತಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ