ಕೆನಡಾ: ಗಣಿಗಾರಿಕೆಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಅಪಘಾತ, 6ಕ್ಕೂ ಅಧಿಕ ಮಂದಿ ಸಾವು
ಕೆನಡಾ(Canada)ದ ದೂರದ ಉತ್ತರದಲ್ಲಿರುವ ಗಣಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಫೋರ್ಟ್ ಸ್ಮಿತ್ ಬಳಿ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ, ಅಪಘಾತದಲ್ಲಿ 6ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಒಬ್ಬ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿದ್ದಾರೆ. ಬದುಕುಳಿದವರ ಆರೋಗ್ಯ ಸ್ಥಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಕೆನಡಾ(Canada)ದ ದೂರದ ಉತ್ತರದಲ್ಲಿರುವ ಗಣಿಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಫೋರ್ಟ್ ಸ್ಮಿತ್ ಬಳಿ ಅಪಘಾತಕ್ಕೀಡಾಗಿದೆ. ವರದಿಗಳ ಪ್ರಕಾರ, ಅಪಘಾತದಲ್ಲಿ 6ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಒಬ್ಬ ವ್ಯಕ್ತಿ ಪವಾಡವೆಂಬಂತೆ ಬದುಕುಳಿದಿದ್ದಾರೆ. ಬದುಕುಳಿದವರ ಆರೋಗ್ಯ ಸ್ಥಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಫೋರ್ಟ್ ಸ್ಮಿತ್‌ನಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ವಿಮಾನದ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವರದಿ ಮಾಡಿದೆ. ಫೋರ್ಟ್ ಸ್ಮಿತ್ ಪ್ರಾದೇಶಿಕ ರಾಜಧಾನಿಯಾದ ಯೆಲ್ಲೊನೈಫ್‌ನ ನೈಋತ್ಯಕ್ಕೆ 320 ಕಿಲೋಮೀಟರ್ (200 ಮೈಲುಗಳು) ದೂರದಲ್ಲಿದೆ.
ಜೆಟ್‌ಸ್ಟ್ರೀಮ್ ಟ್ವಿನ್ ಟರ್ಬೊಪ್ರಾಪ್ ಏರ್‌ಲೈನರ್ ಅನ್ನು ನಿರ್ವಹಿಸುವ ನಾರ್ತ್‌ವೆಸ್ಟರ್ನ್ ಏರ್, ಇದು ಕಾರ್ಮಿಕರನ್ನು ಗಣಿಗೆ ಸಾಗಿಸುವ ಚಾರ್ಟರ್ ಫ್ಲೈಟ್ ಎಂದು ಹೇಳಿದೆ. ಇದು ರನ್‌ವೇಯ ಅಂತ್ಯದಿಂದ 1.1 ಕಿಲೋಮೀಟರ್ (0.7 ಮೈಲಿ) ದೂರದಲ್ಲಿ ಅಪ್ಪಳಿಸಿತು.
ಮತ್ತಷ್ಟು ಓದಿ: Plane Crash: ಮಿಜೋರಾಂನ ಲೆಂಗ್‌ಪುಯಿ ಏರ್ಪೋರ್ಟ್ನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ
ಮತ್ತೊಂದು ಘಟನೆ ಮಿಜೋರಾಂನಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಮ್ಯಾನ್ಮಾರ್ ಸೇನಾ ವಿಮಾನ ಪತನ(Plane Crash)ಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಜೋರಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಕಾರ, ಬರ್ಮಾ ಸೇನೆಯ ವಿಮಾನ ಅಪಘಾತದಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಪೈಲಟ್‌ನೊಂದಿಗೆ ಒಟ್ಟು 14 ಮಂದಿ ವಿಮಾನದಲ್ಲಿದ್ದರು, ಆರು ಮಂದಿ ಗಾಯಗೊಂಡಿದ್ದಾರೆ, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಸೇನಾ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ಕಳೆದ ವಾರ ಬಂಡುಕೋರರೊಂದಿಗೆ ಗುಂಡಿನ ಚಕಮಕಿಯ ನಡುವೆ ಮಿಜೋರಾಂಗೆ ಪಲಾಯನ ಮಾಡಿದ್ದ 184 ಮ್ಯಾನ್ಮಾರ್ ಸೈನಿಕರನ್ನು ಭಾರತ ಸೋಮವಾರ ವಾಪಸ್ ಕಳುಹಿಸಿದೆ. ಇದನ್ನು ದೃಢಪಡಿಸಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಪಲಾಯನಗೈದಿದ್ದ ಮ್ಯಾನ್ಮಾರ್ ಸೈನಿಕರನ್ನು ಕರೆದುಕೊಂಡು ಹೋಗಲು ವಿಮಾನ ಬಂದಿತ್ತು ಎನ್ನಲಾಗಿದೆ. ಮಿಜೋರಾಂನ ಲೆಂಗ್‌ಪುಯಿಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನವು ರನ್‌ವೇಯಿಂದ ಜಾರಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ