ಮ್ಯಾನ್ಮಾರ್ನಲ್ಲಿ ಶನಿವಾರ (ಮಾರ್ಚ್ 27, 2021) ಒಂದೇ ದಿನ ಭದ್ರತಾ ಪಡೆಗಳು 90ಕ್ಕೂ ಹೆಚ್ಚು ಮಂದಿಯನ್ನು ಕೊಂದಿವೆ. ಕಳೆದ ತಿಂಗಳು ಸೇನಾ ದಂಗೆ ನಡೆದ ನಂತರ ವರದಿ ಆಗುತ್ತಿರುವ ರಕ್ತಸಿಕ್ತ ದಿನ ಇದಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ಇಂದು ಮ್ಯಾನ್ಮಾರ್ನಲ್ಲಿ ಸಶಸ್ತ್ರ ಪಡೆಗಳ ದಿನವಾಗಿತ್ತು. ರಾಜಧಾನಿ ನಯ್ ಪಿಟಾವ್ನಲ್ಲಿ ನಡೆದ ಪಥ ಸಂಚಲನದ ವೇಳೆ ಹಿರಿಯ ಜನರಲ್ ಮಿನ್ ಆಂಗ್ ಲೆಂಗ್ ಮಾತನಾಡಿ, ಸೇನೆಯು ಜನರ ರಕ್ಷಣೆ ಮಾಡುತ್ತದೆ ಮತ್ತು ಪ್ರಜಾಪ್ರಭುತ್ವಕ್ಕಾಗಿ ಶ್ರಮಿಸುತ್ತದೆ ಎಂದಿದ್ದರು. ಶುಕ್ರವಾರದಂದು ಸರ್ಕಾರಿ ವಾಹಿನಿಯಲ್ಲಿ ಎಚ್ಚರಿಕೆ ಪ್ರತಿಭಟನಾ ನಿರತರಿಗೆ ಎಚ್ಚರಿಕೆ ನೀಡಿತ್ತು. ತಲೆಗೆ ಮತ್ತು ಹಿಂಭಾಗಕ್ಕೆ ಗುಂಡಿಡುವ ಬಗ್ಗೆ ಎಚ್ಚರಿಸಿತ್ತು. ಇದರ ಹೊರತಾಗಿಯೂ ಫೆಬ್ರವರಿ 1ನೇ ತಾರೀಕಿನಂದು ಮ್ಯಾನ್ಮಾರ್ನಲ್ಲಿ ನಡೆದಿದ್ದ ಸೇನಾ ದಂಗೆ ವಿರೋಧಿಸಿ ಯಾಂಗೂನ್, ಮಂದಲಯ್ ಮತ್ತಿತರ ನಗರಗಳಲ್ಲಿ ಪ್ರತಿಭಟನೆಗೆ ಇಳಿದಿದ್ದರು.
ದ ಮ್ಯಾನ್ಮಾರ್ ನೌ ಸುದ್ದಿ ಪೋರ್ಟಲ್ ಪ್ರಕಾರ, ಭದ್ರತಾ ಪಡೆಗಳು ಒಂದೇ ದಿನದಲ್ಲಿ ದೇಶದಾದ್ಯಂತ 91 ಮಂದಿಯನ್ನು ಕೊಂದಿವೆ. ಮಂದಲಯ್ನಲ್ಲಿ ಐದು ವರ್ಷದ ಬಾಲಕನೂ ಸೇರಿ 29 ಜನರನ್ನು ಕೊಂದಿದ್ದರೆ, ಯಾಂಗೂನ್ನಲ್ಲಿ ಕನಿಷ್ಠ 24 ಮಂದಿಯನ್ನು ಕೊಲ್ಲಲಾಗಿದೆ. “ನಮ್ಮದೇ ಮನೆಗಳಲ್ಲಿ ಅವರು ನಮ್ಮನ್ನು ಕೋಳಿಗಳಂತೆ ಕೊಲ್ಲುತ್ತಿದ್ದಾರೆ,” ಎಂದು ಮೈಯಂಗ್ಯಾನ್ನಲ್ಲಿ ನಾಗರಿಕರೊಬ್ಬರು ಹೇಳಿದ್ದಾರೆ. ಅಲ್ಲಿ ಕನಿಷ್ಠ ಇಬ್ಬರು ಪ್ರತಿಭಟನಾನಿರತರು ಸಾವನ್ನಪ್ಪಿದ್ದಾರೆ. ಆದರೆ ಜುಂತಾ ಪತನದ ತನಕ ನಾವು ಹೋರಾಡುತ್ತಲೇ ಇರುತ್ತೇವೆ ಎಂದಿದ್ದಾರೆ. ಶನಿವಾರ ಸಾವನ್ನಪ್ಪಿದವರ ಸಂಖ್ಯೆಯೂ ಸೇರಿದರೆ ಸೇನಾ ದಂಗೆಯ ನಂತರ ಮೃತಪಟ್ಟ ನಾಗರಿಕರ ಸಂಖ್ಯೆ 400ಕ್ಕೂ ಹೆಚ್ಚಾಗಿದೆ.
ಭಯೋತ್ಪಾದನೆಯ ಮತ್ತು ಅಗೌರವದ ದಿನ
76ನೇ ಮ್ಯಾನ್ಮಾರ್ ಸಶಸ್ತ್ರ ಮೀಸಲು ಪಡೆ ದಿನವು ಭಯೋತ್ಪಾದನೆಯ ಮತ್ತು ಅಗೌರವದ ದಿನವಾಗಿ ಉಳಿದುಹೋಗುತ್ತದೆ ಯುರೋಪಿಯನ್ ಒಕ್ಕೂಟದ ನಿಯೋಗವು ಹೇಳಿದೆ. ಯಾವುದೇ ಶಸ್ತ್ರಾಸ್ತ್ರ ಇಲ್ಲದ ನಾಗರಿಕರನ್ನು, ಜತೆಗೆ ಮಕ್ಕಳನ್ನೂ ಸೇರಿಸಿ ಹತ್ಯೆ ಮಾಡಿರುವುದು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದೆ. ಇನ್ನು ಸುದ್ದಿ ಮಾಧ್ಯಮದ ವರದಿಗಳ ಪ್ರಕಾರ, ಕೇಂದ್ರ ಸಗೈಂಗ್ ಭಾಗ, ಪೂರ್ವದ ಲಷಿಯೋ ಮತ್ತಿತರ ಕಡೆಗಳಲ್ಲಿ ಸಾವಿನ ಪ್ರಕರಣಗಳು ವರದಿ ಆಗಿವೆ. ಒಂದು ವರ್ಷದ ಮಗುವಿನ ಕಣ್ಣಿಗೆ ರಬ್ಬರ್ ಗುಂಡು ತಗುಲಿದೆ.
ನಯ್ಪಿಟಾವ್ನಲ್ಲಿ ಮಾತನಾಡಿದ ಮಿನ್ ಆಂಗ್ ಲೆಂಗ್, ದೇಶದಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಯಾವುದೇ ಕಾಲಾವಧಿಯನ್ನು ಹೇಳಿಲ್ಲ. ಅಂದಹಾಗೆ, ಕಳೆದ ನವೆಂಬರ್ನಲ್ಲಿ ಮ್ಯಾನ್ಮಾರ್ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸನ್ ಸೂಕಿ ಪಕ್ಷವು ಜಯಿಸಿತ್ತು. ಆದರೆ ಆ ಪಕ್ಷವು ವಂಚನೆಯಿಂದ ಗೆದ್ದಿದೆ ಎಂದು ಆರೋಪಿಸಿ, ತಾನು ಅಧಿಕಾರವನ್ನು ವಹಿಸಿಕೊಂಡಿದ್ದಾಗಿ ಸೇನೆ ಹೇಳಿದೆ. ಮ್ಯಾನ್ಮಾರ್ನ ಅತ್ಯಂತ ಖ್ಯಾತ ನಾಗರಿಕ ರಾಜಕಾರಣಿ ಅಜ್ಞಾತ ಸ್ಥಳವೊಂದರಲ್ಲಿ ಗೃಹಬಂಧನದಲ್ಲಿ ಇದ್ದಾರೆ. ಅವರ ಪಕ್ಷದ ಇತರ ಹಲವು ಸದಸ್ಯರು ಕೂಡ ಸೇನೆ ವಶದಲ್ಲಿ ಇದ್ದಾರೆ.
ರಷ್ಯಾದ ಉಪ ರಕ್ಷಣಾ ಸಚಿವರು ಪಥಸಂಚಲನದಲ್ಲಿ ಭಾಗಿ
ಜುಂತಾ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. ಈ ವಾರ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದಿಂದ ಹೊಸದಾಗಿ ದಿಗ್ಬಂಧನ ಹಾಕಲಾಗಿದೆ. ಆದರೆ ರಷ್ಯಾದ ಉಪ ರಕ್ಷಣಾ ಸಚಿವರು ನಯ್ ಪಿಟಾವ್ನಲ್ಲಿ ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಅದಕ್ಕೂ ಮುನ್ನ ಜುಂತಾದ ಹಿರಿಯ ನಾಯಕರನ್ನು ಆತ ಭೇಟಿ ಆಗಿದ್ದರು. ರಷ್ಯಾ ನಮ್ಮ ನಿಜವಾದ ಸ್ನೇಹಿತ ಎಂದು ಮಿನ್ ಆಂಗ್ ಲೆಂಗ್ ಹೇಳಿದ್ದಾರೆ. ರಷ್ಯಾ, ಚೀನಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ್, ವಿಯೆಟ್ನಾಂ, ಲಾವೋಸ್, ಥಾಯ್ಲೆಂಡ್ನಿಂದ ಪ್ರತಿನಿಧಿಗಳನ್ನು ಕಳಿಸಿದ್ದರೆ, ರಷ್ಯಾದಿಂದ ಸಚಿವರನ್ನು ಕಳುಹಿಸಲಾಗಿತ್ತು.
ಇನ್ನು ರಷ್ಯಾ ಹಾಗೂ ಚೀನಾದ ಬೆಂಬಲ ಸಿಕ್ಕಿರುವುದರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದು ಜುಂತಾಗೆ ಬಹಳ ಮುಖ್ಯ. ಏಕೆಂದರೆ, ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಶಾಶ್ವತ ಸದಸ್ಯ ರಾಷ್ಟ್ರವಾದ ಇವೆರಡು ವಿಶ್ವಸಂಸ್ಥೆಯು ಮ್ಯಾನ್ಮಾರ್ನಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ತಡೆಯಬಹುದು. ಅಂದಹಾಗೆ ಶನಿವಾರದಂದು ಮ್ಯಾನ್ಮಾರ್ನಲ್ಲಿ ಇರುವ ಅಮೆರಿಕದ ಸಾಂಸ್ಕೃತಿಕ ಕೇಂದ್ರದ ಮೇಲೂ ದಾಳಿಯಾಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರಾದ ಅರ್ಯಾನಿ ಮನ್ರಿಂಗ್ ಹೇಳಿದ್ದಾರೆ.
Shocking violence against #Myanmar’s people by its military on #ArmedForcesDay. We are receiving reports of scores killed, incl. children, 100s injured across 40 locations, & mass arrests. This violence is compounding the illegitimacy of the coup & the culpability of its leaders. pic.twitter.com/ifgpXSqG8e
— UN Human Rights (@UNHumanRights) March 27, 2021
Night Strike at #Ye Township on Mar 27.#WhatsHappeningInMyanmar#Mar27Coup pic.twitter.com/zlfZ8osq2M
— Spring Revolution 2021 Myanmar (@various__k) March 27, 2021