ನಫ್ತಾಲಿ ಬೆನೆಟ್ ಇಸ್ರೇಲ್​ನ ನೂತನ ಪ್ರಧಾನಿ; 12 ವರ್ಷಗಳ ನಂತರ ಪ್ರಧಾನಿ ಪಟ್ಟದಿಂದ ಕೆಳಗಿಳಿದ ಬೆಂಜಮಿನ್ ನೆತನ್ಯಾಹು

| Updated By: guruganesh bhat

Updated on: Jun 14, 2021 | 12:16 AM

Naftali Bennett: ಒಂದಾನುವೇಳೆ ತಾವು ಹೊಸ ಸರ್ಕಾರ ರಚಿಸಿದಲ್ಲಿ, ಅದು ಪ್ರತಿಯೋರ್ವ ಇಸ್ರೇಲಿ ನಾಗರಿಕರ ಸರ್ಕಾರವಾಗಲಿದೆ. ಯಾವುದೇ ಇಸ್ರೇಲಿ ಪ್ರಜೆಯನ್ನೂ ಸಹ ಬಿಟ್ಟುಕೊಡಲು ತಮ್ಮ ಸಮಿಶ್ರ ಸರ್ಕಾರ ಒಪ್ಪುವುದಿಲ್ಲ ಎಂದಿದ್ದಾರೆ ಬಹು ಕೋಟ್ಯಾಧಿಪತಿಯೂ ಆಗಿರುವ ನಫ್ತಾಲಿ ಬೆನೆಟ್.

ನಫ್ತಾಲಿ ಬೆನೆಟ್ ಇಸ್ರೇಲ್​ನ ನೂತನ ಪ್ರಧಾನಿ; 12 ವರ್ಷಗಳ ನಂತರ ಪ್ರಧಾನಿ ಪಟ್ಟದಿಂದ ಕೆಳಗಿಳಿದ ಬೆಂಜಮಿನ್ ನೆತನ್ಯಾಹು
ನಫ್ತಾಲಿ ಬೆನೆಟ್ ಮತ್ತು ಬೆಂಜಮಿನ್ ನೆತನ್ಯಾಹು
Follow us on

ಇಸ್ರೇಲ್​ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ.  ಬೆಂಜಮಿನ್ ನೆತನ್ಯಾಹು ಬರೋಬ್ಬರಿ 12 ವರ್ಷಗಳ ನಂತರ ಪ್ರಧಾನಿ ಪಟ್ಟದಿಂದ ಕೆಳಕ್ಕಿಳಿದಿದ್ದಾರೆ. ಅವರನ್ನು ಖುರ್ಚಿಯಿಂದ ಇಳಿಸಲು ಅವರದೇ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಈ ಮುನ್ನ ಒಟ್ಟುಗೂಡಿದ್ದರು.  ಬೆಂಜಮಿನ್ ನೆತನ್ಯಾಹು ಸರ್ಕಾರದ ಭಾಗವೇ ಆಗಿದ್ದ ನಫ್ತಾಲಿ ಬೆನೆಟ್ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು 2009ರಿಂದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ. ಹೊಸದಾಗಿ ರೂಪಿಸಿರುವ ಸಮಿಶ್ರ ಸರ್ಕಾರಕ್ಕೆ  ಸಂಸತ್ ಸದಸ್ಯರ ಅಂಗೀಕಾರ ದಕ್ಕಿದ್ದು, ಮಿಲೇನಿಯರ್, ಮಾಜಿ ಟೆಕ್ ಉದ್ಯಮಿ ನಫ್ತಾಲಿ ಬೆನೆಟ್ ಇಸ್ರೇಲ್​ನ ಪ್ರಧಾನಿಯಾಗಿದ್ದಾರೆ. (Naftali Bennett is the Israeli new prime minister Benjamin Netanyahu step down)

ತಮ್ಮ ಹೊಸ ಸರ್ಕಾರ  ಪ್ರತಿಯೋರ್ವ ಇಸ್ರೇಲಿ ನಾಗರಿಕರ ಸರ್ಕಾರವಾಗಲಿದೆ. ಯಾವುದೇ ಇಸ್ರೇಲಿ ಪ್ರಜೆಯನ್ನೂ ಸಹ ಬಿಟ್ಟುಕೊಡಲು ತಮ್ಮ ಸಮಿಶ್ರ ಸರ್ಕಾರ ಒಪ್ಪುವುದಿಲ್ಲ ಎಂದಿದ್ದಾರೆ ಬಹು ಕೋಟ್ಯಾಧಿಪತಿಯೂ ಆಗಿರುವ ನಫ್ತಾಲಿ ಬೆನೆಟ್. ಇಸ್ರೇಲ್​ನ ಸಂಸತ್ ಹೊಸತಾಗಿ ರಚನೆಗೊಂಡಿರುವ ಸಮಿಶ್ರ ಸರ್ಕಾರಕ್ಕೆ ಅಂಗೀಕಾರ ನೀಡುವ ಸಾಧ್ಯತೆ ಬಹುತೇಕ ಹೆಚ್ಚಿದೆ ಎಂದು ಹೇಳಲಾಗಿತ್ತು. ಈಗ ಅದೇ ರೀತಿ ನಫ್ತಾಲಿ ಬೆನೆಟ್ ಇಸ್ರೇಲ್​ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಆದರೆ ಇಂದಷ್ಟೇ ಮಾತನಾಡಿದ್ದ ಹಾಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತಮಗೆ ಅಧಿಕಾರದಲ್ಲಿ ಮುಂದುವರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅಲ್ಲದೇ, ತಮ್ಮ ಪ್ರಧಾನಿ ಅವಧಿಯಲ್ಲಿ ಹಾಕಿಕೊಂಡಿರುವ ಯೋಜನೆಗಳೇ ತಮ್ಮ ಜೀವನದ ಗುರಿ ಎಂದು ವ್ಯಾಖ್ಯಾನಿಸಿದ್ದ ಅವರು, ಒಂದಾನುವೇಳೆ ಪ್ರಧಾನಿ ಪದವಿಯಿಂದ ಕೆಳಕ್ಕಿಳಿಯುವ ಸಂದರ್ಭ ಬಂದರೂ, ಪಕ್ಷದ ನೇತೃತ್ವವನ್ನು ತಾವೇ ವಹಿಸಿಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ

ಕೊವಿಡ್​ ಸಮಯದಲ್ಲಿ ಮಕ್ಕಳೊಂದಿಗೆ ಆಟವಾಡುತ್ತಲೆ ಜ್ಞಾನ ಹೆಚ್ಚಿಸುವ ಕೆಲವು ಸಲಹೆಗಳು ಹೀಗಿವೆ

(Naftali Bennett is the Israeli new prime minister Benjamin Netanyahu step down)

Published On - 11:51 pm, Sun, 13 June 21