ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ: ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚೀನಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಯುದ್ಧ ನೌಕೆ ನಿಯೋಜಿಸಿದ ಅಮೆರಿಕ

| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2022 | 8:55 PM

Nancy Pelosi's Taiwan visit ನ್ಯಾನ್ಸಿ ಪೆಲೋಸಿ ತನ್ನ ಏಷ್ಯಾ ಪ್ರವಾಸದ ವೇಳೆ ತೈವಾನ್‌ಗೆ ಭೇಟಿ ನೀಡಿದರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ ಮಂಗಳವಾರ ಎಚ್ಚರಿಕೆ ನೀಡಿದ್ದರ ಬೆನ್ನಲ್ಲೇ ಅಮೆರಿಕ ಈ ನೌಕೆಗಳ ನಿಯೋಜನೆ ಮಾಡಿದೆ

ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ: ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚೀನಾ ಎಚ್ಚರಿಕೆ ನೀಡಿದ ಬೆನ್ನಲ್ಲೇ  ಯುದ್ಧ ನೌಕೆ ನಿಯೋಜಿಸಿದ ಅಮೆರಿಕ
ನ್ಯಾನ್ಸಿ ಪೆಲೋಸಿ
Follow us on

ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ತನ್ನ ಏಷ್ಯಾ ಪ್ರವಾಸದ ವೇಳೆ ತೈವಾನ್‌ಗೆ  (Taiwan) ಭೇಟಿ ನೀಡಲಿದ್ದಾರೆ ಎಂಬ ವರದಿಗಳ ಮಧ್ಯೆ, ಅಮೆರಿಕ ತಮ್ಮ ಮಿಲಿಟರಿ ವಿಮಾನವಾಹಕ ನೌಕೆ ಮತ್ತು ದೊಡ್ಡ ವಿಮಾನಗಳನ್ನು ದ್ವೀಪದ ಹತ್ತಿರ ನಿಯೋಜಿಸಿದೆ. ವರದಿಗಳ ಪ್ರಕಾರ, ಪೆಲೋಸಿ ತೈವಾನ್‌ಗೆ ಭೇಟಿ ನೀಡಲು ನಿರ್ಧರಿಸಿದರೆ ಅವರ ವಿಮಾನಕ್ಕಾಗಿ ಮಿಲಿಟರಿ ಬಫರ್ ವಲಯವನ್ನು ರಚಿಸಲು ನೋಡುತ್ತಿದೆ. ಪೆಲೋಸಿ ತನ್ನ ಏಷ್ಯಾ ಪ್ರವಾಸದ ಸಮಯದಲ್ಲಿ ತೈವಾನ್‌ಗೆ ಭೇಟಿ ನೀಡಿದರೆ ಅಮೆರಿಕ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಚೀನಾ (China) ಮಂಗಳವಾರ ಎಚ್ಚರಿಕೆ ನೀಡಿದ್ದರ ಬೆನ್ನಲ್ಲೇ ಅಮೆರಿಕ ಈ ನೌಕೆಗಳ ನಿಯೋಜನೆ ಮಾಡಿದೆ. ವರದಿಗಳ ಪ್ರಕಾರ ಅಮೆರಿಕದ ನೌಕಾಪಡೆ ಈ ಪ್ರದೇಶದಲ್ಲಿ ಎರಡು ವಿಮಾನವಾಹಕ ನೌಕೆ ಗುಂಪುಗಳು ಮತ್ತು ಎರಡು ಉಭಯಚರ ಆಕ್ರಮಣ ಗುಂಪುಗಳನ್ನು ಹೊಂದಿದೆ.  ಯುಎಸ್ಎಸ್ ರೊನಾಲ್ಡ್ ರೇಗನ್ ಗೈಡೆಡ್ ಕ್ಷಿಪಣಿ ಕ್ರೂಸರ್ ಆಗಿದ್ದು ಯುಎಸ್ಎಸ್ ಅಂಟಿಯೇಟಂ ,ವಿಧ್ವಂಸಕ ಯುಎಸ್ಎಸ್ ಹಿಗ್ಗಿನ್ಸ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಪ್ರಸ್ತುತ ತೈವಾನ್‌ನ ಪೂರ್ವ ಮತ್ತು ಫಿಲಿಪೈನ್ಸ್ ಮತ್ತು ಜಪಾನ್‌ನ ದಕ್ಷಿಣಕ್ಕೆ ಫಿಲಿಪೈನ್ಸ್ ಸಮುದ್ರದಲ್ಲಿದೆ. ಉಭಯಚರ ದಾಳಿ ಹಡಗು ಯುಎಸ್ಎಸ್ ಟ್ರಿಪೋಲಿಯು ಸ್ಯಾನ್ ಡಿಯಾಗೋದಿಂದ ಮೇಯಲ್ಲಿ ಹೊರಟಿದ್ದು ನಿಯೋಜನೆಯ ಭಾಗವಾಗಿ ಇಲ್ಲಿದೆ. ವಿಮಾನವಾಹಕ ನೌಕೆ ಅಬ್ರಹಾಂ ಲಿಂಕನ್ (CVN-72) ಮತ್ತು ಉಭಯಚರ ದಾಳಿ ಹಡಗು ಯುಎಸ್ಎಸ್ ಅಮೆರಿಕ (LHA-6) ಕೂಡಾ ಇದೇ ಪ್ರದೇಶದಲ್ಲಿದೆ.


ಚೀನಾದ ಟೀಕಾಕಾರರಾಗಿರುವ ಪೆಲೋಸಿ ಮಂಗಳವಾರತೈಪೆಗೆ ಆಗಮಿಸುವ ನಿರೀಕ್ಷೆಯಿದೆ. ಕಳೆದ 25 ವರ್ಷಗಳಲ್ಲಿ ಅಮೆರಿಕದ ಅಧಿಕಾರಿಯೊಬ್ಬರು ತೈಪೆಗೆ ಭೇಟಿ ನೀಡುತ್ತಿದ್ದು, ಪೆಲೋಸಿ ಭೇಟಿ ಬೀಜಿಂಗ್‌ನಿಂದ ಯುದ್ಧದ ಎಚ್ಚರಿಕೆಗಳನ್ನು ಹುಟ್ಟುಹಾಕಿದೆ. ಏಷ್ಯಾ ಪ್ರವಾಸದ ಭಾಗವಾಗಿ ಅವರು ತೈವಾನ್‌ಗೆ ಬಂದಿಳಿಯುತ್ತಾರೆಯೇ ಎಂದು ಪೆಲೋಸಿ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಆದರೆ ಅಮೆರಿಕ ಮತ್ತು ತೈವಾನೀಸ್ ಮಾಧ್ಯಮಗಳು ಪೆಲೋಸಿ ಭೇಟಿ ನೀಡುವ ಸಾಧ್ಯತೆಯೇ ಹೆಚ್ಚು ಎಂದು ವರದಿ ಮಾಡಿವೆ.

ಚೀನಾದ ಸಾರ್ವಭೌಮ ಭದ್ರತಾ ಹಿತಾಸಕ್ತಿಗಳನ್ನು ದುರ್ಬಲಗೊಳಿಸಿದ್ದಕ್ಕಾಗಿ ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದಿ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಬೀಜಿಂಗ್‌ನಲ್ಲಿಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಚೀನಾ ಸ್ವ-ಆಡಳಿತ, ಪ್ರಜಾಪ್ರಭುತ್ವದ ತೈವಾನ್ ಅನ್ನು ತನ್ನ ಪ್ರದೇಶವೆಂದು ಪರಿಗಣಿಸುತ್ತದೆ ಮತ್ತು ಅಗತ್ಯವಿದ್ದರೆ ಬಲವಂತವಾಗಿ ಒಂದು ದಿನ ದ್ವೀಪವನ್ನು ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಇದು ವಿಶ್ವ ವೇದಿಕೆಯಲ್ಲಿ ತೈವಾನ್ ಅನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದ ತೈಪೆಯೊಂದಿಗೆ ಅಧಿಕೃತ ವಿನಿಮಯವನ್ನು ಹೊಂದಿರುವ ದೇಶಗಳನ್ನು ವಿರೋಧಿಸುತ್ತದೆ.

Published On - 8:28 pm, Tue, 2 August 22