ಕಠ್ಮಂಡು: ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಸಂಸತ್‌ನಲ್ಲಿ ಸೋಮವಾರ ವಿಶ್ವಾಸಮತ ಕಳೆದುಕೊಂಡಿದ್ದಾರೆ. ಒಲಿ ಅವರ ಪರ 93 ಮತಗಳು ಲಭಿಸಿದ್ದು 124 ಮತಗಳು ವಿರೋಧದ್ದಾಗಿದೆ. 271 ಸದಸ್ಯರಿರುವ ಸದನದಲ್ಲಿ ಕೇವಲ 232 ಸದಸ್ಯರು ಇದ್ದರು. ಸೆಪ್ಟೆಂಬರ್ 2015 ರಲ್ಲಿ ಘೋಷಿಸಿದ ಹೊಸ ಸಂವಿಧಾನದಡಿಯಲ್ಲಿ ಚುನಾಯಿತರಾದ ಮೊದಲ ಸರ್ಕಾರವು ಯಶಸ್ವಿಯಾಗಿ ಕೋರಿದ ಮೊದಲ ವಿಶ್ವಾಸ ಮತ ಇದಾಗಿದೆ. ಒಲಿ ಸರ್ಕಾರ ಸಂಸತ್ ನಲ್ಲಿ ಸೋಲು ಅನುಭವಿಸಿದ್ದು 38 ತಿಂಗಳುಳ ಆಡಳಿತದಿಂದ ಅವರು ನಿರ್ಗಮಿಸಿದ್ದಾರೆ.
ಆಡಳಿತ ಪಕ್ಷದ ಭಿನ್ನಮತೀಯ ಸದಸ್ಯರು ಪಕ್ಷದ ವಿಪ್ ಧಿಕ್ಕರಿಸಿ ಮತದಾನದಿಂದ ದೂರವಿದ್ದು, ಇದರಿಂದಾಗಿ ಅವರು ಸದನದ ಸದಸ್ಯತ್ವವನ್ನು ಕಳೆದುಕೊಳ್ಳಬಹುದು.
ಒಲಿ ಅವರು ತಮ್ಮ ರಾಜೀನಾಮೆಯನ್ನು ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಅವರಿಗೆ ಸಲ್ಲಿಸಲಿದ್ದು, ಒಂದು ವಾರದೊಳಗೆ ಹೊಸ ಸರ್ಕಾರ ರಚನೆಯ ಬಗ್ಗೆ ಪರಿಶೋಧಿಸಲು ಸಂಸತ್ತನ್ನು ಕೇಳಲಿದ್ದಾರೆ. ವಿಶ್ವಾಸಮತಕ್ಕೆ ಮುನ್ನ ಸದನದಲ್ಲಿ ಮಾತನಾಡಿದ ಒಲಿ ದೇಶದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದ ಸರ್ಕಾರವನ್ನು ‘ಸಂಕುಚಿತ ಮತ್ತು ಪಕ್ಷಪಾತದ’ ಹಿತಾಸಕ್ತಿಗಳಿಗೆ ಗುರಿಯಾಗಿಸಲಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದರು. ಯಾರೊಬ್ಬರ ವಿರುದ್ಧವೂ ಸುಳ್ಳು ಆರೋಪ ಹೊರಿಸಬೇಡಿ ಎಂದು ಅವರು ಪ್ರತಿಪಕ್ಷಗಳಿಗೆ ಕೇಳಿದರು.
ದೇಶದಲ್ಲಿ ಕೊವಿಡ್ ಪ್ರಕರಣಗಳು ಮತ್ತು ಸಾವುನೋವುಗಳ ಹೆಚ್ಚಳಕ್ಕೆ ಕಾರಣವಾದ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಒಲಿ ವಿಫಲರಾಗಿದ್ದಾರೆ ಎಂದು ಪ್ರತಿಪಕ್ಷದ ಪ್ರಮುಖ ನಾಯಕರಾದ ಶೇರ್ ಬಹದ್ದೂರ್ ಡಿಯುಬಾ (ನೇಪಾಳಿ ಕಾಂಗ್ರೆಸ್) ಮತ್ತು ಪುಷ್ಪಾ ಕಮಲ್ ದಹಲ್ ಪ್ರಚಂಡ (ಮಾವೋವಾದಿಗಳು) ದೂಷಿದ್ದಾರೆ. ಭ್ರಷ್ಟಾಚಾರ ಮತ್ತು ‘ಹಗರಣಗಳು’ ಭಾರತದಿಂದ ಲಸಿಕೆಗಳನ್ನು ಸಕಾಲಿಕವಾಗಿ ವಿತರಿಸುವುದನ್ನು ನಿರ್ಬಂಧಿಸಿವೆ ಎಂದು ಆರೋಪಿಸಿ ಅವರು ಕೊವಿಡ್ -19 ಸಂತ್ರಸ್ತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Yash: ನೇಪಾಳದಲ್ಲೂ ಯಶ್ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್ ಉದಾಹರಣೆ
(Nepal Prime Minister K P Sharma Oli loses vote of confidence in Parliament)