ಇಸ್ರೇಲ್ನಲ್ಲಿ ಇನ್ನಾದ್ರೂ ರಚನೆಯಾಗುತ್ತಾ ಸರ್ಕಾರ? ಗಂಝ್ ನಡೆಯೇನು?
ಜೆರುಸಲೆಂ: ಸರ್ಕಾರ ರಚಿಸುವ ಸಂಬಂಧ ಹಿಂದಿನ ಪ್ರಧಾನಿ ಬೆಂಝಮಿನ್ ನೆತನ್ಯಾಹು, ಬ್ಲ್ಯೂ ಅಂಡ್ ವೈಟ್ ಪಕ್ಷದ ಮುಖ್ಯಸ್ಥ ಬೆನ್ನಿ ಗಂಝ್ ಭಾನುವಾರ ಭೇಟಿಯಾಗಿದ್ದಾರೆ. ಸರ್ಕಾರ ರಚಿಸುವ ಉದ್ದೇಶದಿಂದ ಉಭಯ ನಾಯಕರೂ ಭೇಟಿಯಾಗಿದ್ದಾರೆ. ಆದ್ರೆ ಯಾವುದೇ ಸ್ಪಷ್ಟ ಚಿತ್ರಣ ಮೂಡದ ಹಿನ್ನೆಲೆಯಲ್ಲಿ ಉಭಯ ನಾಯಕರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ ಎಂದು ಎರಡೂ ಪಕ್ಷಗಳ ವಕ್ತಾರರು ತಿಳಿಸಿದ್ದಾರೆ. ಇಸ್ರೇಲ್ನ ರಾಜ್ಯಭಾರ ಹೊರುವಂತಹ ಬಲಿಷ್ಠ ಸರ್ಕಾರ ಬೇಕಾಗಿದೆ. ಅದಕ್ಕಾಗಿ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಸೆ. 17ರಂದು ಹೊರಬಿದ್ದ […]
ಜೆರುಸಲೆಂ: ಸರ್ಕಾರ ರಚಿಸುವ ಸಂಬಂಧ ಹಿಂದಿನ ಪ್ರಧಾನಿ ಬೆಂಝಮಿನ್ ನೆತನ್ಯಾಹು, ಬ್ಲ್ಯೂ ಅಂಡ್ ವೈಟ್ ಪಕ್ಷದ ಮುಖ್ಯಸ್ಥ ಬೆನ್ನಿ ಗಂಝ್ ಭಾನುವಾರ ಭೇಟಿಯಾಗಿದ್ದಾರೆ.
ಸರ್ಕಾರ ರಚಿಸುವ ಉದ್ದೇಶದಿಂದ ಉಭಯ ನಾಯಕರೂ ಭೇಟಿಯಾಗಿದ್ದಾರೆ. ಆದ್ರೆ ಯಾವುದೇ ಸ್ಪಷ್ಟ ಚಿತ್ರಣ ಮೂಡದ ಹಿನ್ನೆಲೆಯಲ್ಲಿ ಉಭಯ ನಾಯಕರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ ಎಂದು ಎರಡೂ ಪಕ್ಷಗಳ ವಕ್ತಾರರು ತಿಳಿಸಿದ್ದಾರೆ.
ಇಸ್ರೇಲ್ನ ರಾಜ್ಯಭಾರ ಹೊರುವಂತಹ ಬಲಿಷ್ಠ ಸರ್ಕಾರ ಬೇಕಾಗಿದೆ. ಅದಕ್ಕಾಗಿ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಸೆ. 17ರಂದು ಹೊರಬಿದ್ದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಅತಂತ್ರವಾಗಿತ್ತು. ಹೀಗಾಗಿ ಇಸ್ರೇಲ್ ಅಧ್ಯಕ್ಷ ರುವೆನ್ ರವ್ಲೀನ್ ಅವರು ಸರ್ಕಾರ ರಚಿಸಲು ನೆತನ್ಯಾಹುಗೆ 28 ದಿನ ಕಾಲಾವಕಾಶ ನೀಡಿದ್ದರು. ಆದ್ರೆ ಕಡಿಮೆ ಸಂಖ್ಯಾಬಲದಿಂದಾಗಿ ಚುಕ್ಕಾಣಿ ಹಿಡಿಯುವಲ್ಲಿ ನೆತನ್ಯಾಹು ಸಫಲರಾಗಲಿಲ್ಲ.
ಮ್ಯಾಜಿಕ್ ನಂಬರ್ 61: 120 ಸದಸ್ಯರಿರುವ ಇಸ್ರೇಲ್ ಸಂಸತ್ನಲ್ಲಿ ಅಧಿಕಾರಕ್ಕೇರಲು 61 ಸದಸ್ಯರ ಬೆಂಬಲ ಅಗತ್ಯ. ಆದ್ರೆ ಯಾವ ಪಕ್ಷದ ಬಳಿಯೂ ಅಷ್ಟೊಂದು ಸಂಖ್ಯಾಬಲವಿಲ್ಲ. ಕಳೆದ ಚುನಾವಣೆಯಲ್ಲಿ ಬ್ಲ್ಯೂ ಅಂಡ್ ವೈಟ್ ಪಕ್ಷ 33 ಸ್ಥಾನಗಳಲ್ಲಿ ಗೆದ್ದಿದ್ದರೆ, ನೆತನ್ಯಾಹು ಪಕ್ಷ 32 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 55 ಸದಸ್ಯರ ಬೆಂಬಲ ಇದೆ ಎಂದು ನೆತನ್ಯಾಹು ಹೇಳಿದ್ದರು. ಹೀಗಾಗಿ ಸರ್ಕಾರ ರಚನೆಯ ಮೊದಲ ಆಯ್ಕೆ ನೆತನ್ಯಾಹುಗೆ ನೀಡಲಾಗಿತ್ತು.
ಆದ್ರೆ ಸರ್ಕಾರ ರಚನೆ ನಿಟ್ಟಿನಲ್ಲಿ ನೆತನ್ಯಾಹು, ಬೆನ್ನಿ ಗಂಝ್ ಬೆಂಬಲ ಗಳಿಸಲು ಯತ್ನಿಸಿದರಾದರೂ ಇದುವರೆಗೂ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ಬೆನ್ನಿ ಗಂಝ್, ನೆತನ್ಯಾಹು ಜೊತೆ ಕೈಜೋಡಿಸಲು ಸುತರಾಂ ಒಪ್ಪಿರಲಿಲ್ಲ.
Published On - 12:36 pm, Mon, 28 October 19