ವುಹಾನ್ ಕೊರೊನಾಗಿಂತಲೂ 10 ಪಟ್ಟು ವೇಗವಾಗಿ ಹರಡುತ್ತೆ ಈ ಕೊರೊನಾ ಕ್ರಿಮಿ!

ದೆಹಲಿ: ಕೊರೊನಾ ಆರ್ಭಟದಿಂದ ಪ್ರಪಂಚದಾದ್ಯಂತ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಮಲೇಷ್ಯಾ ದೇಶದಲ್ಲಿ ಹೊಸ ಪ್ರಬೇಧದ ಕೊರೊನಾ ವೈರಸ್ ಪತ್ತೆ ಹಚ್ಚಲಾಗಿದ್ದು ಇದು ವುಹಾನ್ ವೈರಸ್​ಗಿಂತಲೂ ಹತ್ತು ಪಟ್ಟು ವೇಗವಾಗಿ ಹರಡುತ್ತೆ ಎಂದು ತಿಳಿದುಬಂದಿದೆ. ಈ ಹೊಸ ಪ್ರಭೇದದ ಕೊರೊನಾ ವೈರಸ್​ ಈ ಮೊದಲು ಬೇರೆಡೆ ಕೂಡ ಪತ್ತೆಯಾಗಿತ್ತು. ಆದರೆ, ಇದರ ಬಗ್ಗೆ ಆಗ ಹೆಚ್ಚು ಸಂಶೋಧನೆ ನಡೆಸಲಾಗಿರಲಿಲ್ಲ. ಆದರೆ ಇದೀಗ, ಈ ಪ್ರಭೇದದ ಬಗ್ಗೆ ಮಾಹಿತಿ ಲಭ್ಯವಾಗಿದೆ. D614G ಎಂದು ಕರೆಯಲಾಗುವ […]

ವುಹಾನ್ ಕೊರೊನಾಗಿಂತಲೂ 10 ಪಟ್ಟು ವೇಗವಾಗಿ ಹರಡುತ್ತೆ ಈ ಕೊರೊನಾ ಕ್ರಿಮಿ!
ಪ್ರಾತಿನಿಧಿಕ ಚಿತ್ರ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 17, 2020 | 11:59 AM

ದೆಹಲಿ: ಕೊರೊನಾ ಆರ್ಭಟದಿಂದ ಪ್ರಪಂಚದಾದ್ಯಂತ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಮಲೇಷ್ಯಾ ದೇಶದಲ್ಲಿ ಹೊಸ ಪ್ರಬೇಧದ ಕೊರೊನಾ ವೈರಸ್ ಪತ್ತೆ ಹಚ್ಚಲಾಗಿದ್ದು ಇದು ವುಹಾನ್ ವೈರಸ್​ಗಿಂತಲೂ ಹತ್ತು ಪಟ್ಟು ವೇಗವಾಗಿ ಹರಡುತ್ತೆ ಎಂದು ತಿಳಿದುಬಂದಿದೆ.

ಈ ಹೊಸ ಪ್ರಭೇದದ ಕೊರೊನಾ ವೈರಸ್​ ಈ ಮೊದಲು ಬೇರೆಡೆ ಕೂಡ ಪತ್ತೆಯಾಗಿತ್ತು. ಆದರೆ, ಇದರ ಬಗ್ಗೆ ಆಗ ಹೆಚ್ಚು ಸಂಶೋಧನೆ ನಡೆಸಲಾಗಿರಲಿಲ್ಲ. ಆದರೆ ಇದೀಗ, ಈ ಪ್ರಭೇದದ ಬಗ್ಗೆ ಮಾಹಿತಿ ಲಭ್ಯವಾಗಿದೆ.

D614G ಎಂದು ಕರೆಯಲಾಗುವ ಈ ಕೊರೊನಾ ವೈರಸ್ ಪ್ರಭೇದವನ್ನ ಭಾರತದಿಂದ ವಾಪಸ್ ಆದ ಮೂವರಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಫಿಲಿಪೈನ್ಸ್​ನಿಂದ ಬಂದ ವ್ಯಕ್ತಿಗಳಲ್ಲೂ ಈ ಪ್ರಭೇದದ ವೈರಸ್ ಪತ್ತೆ‌ಯಾಗಿದೆಯಂತೆ.

ಹೊಸ ಪ್ರಭೇದದ ಕೊರೊನ ವೈರಸ್ ನಿಂದ ಕೊರೊನಾ ವೇಗವಾಗಿ ಹರಡುತ್ತೆ ಎಂದ ಅಮೆರಿಕಾದ ಪ್ರಮುಖ ಸಾಂಕ್ರಾಮಿಕ ರೋಗ ತಜ್ಞ ಡಾಕ್ಟರ್ ಅಂಥೋನಿ ಫೌಸಿ ಹೇಳಿದ್ದಾರೆ. ಈ ಹೊಸ ರೂಪಾಂತರದ ವೈರಸ್ ಯೂರೋಪ್ ಮತ್ತು ಆಮೆರಿಕಾದಲ್ಲಿ ಹೆಚ್ಚಾಗಿ ಪತ್ತೆಯಾಗುತ್ತಿದ್ದರೂ ಸದ್ಯಕ್ಕೆ ಇದರಿಂದ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಮಾಹಿತಿ ನೀಡಿದೆ.