ಪಿಒಕೆಯನ್ನು ಮರಳಿ ಪಡೆಯುವ ಗುರಿಯನ್ನು ಭಾರತ ಎಂದೂ ಸಾಧಿಸುವುದಿಲ್ಲ: ಪಾಕ್ ಸೇನಾ ಮುಖ್ಯಸ್ಥ

| Updated By: ನಯನಾ ರಾಜೀವ್

Updated on: Dec 04, 2022 | 9:52 AM

ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಗುರಿಯನ್ನು ಭಾರತ ಎಂದಿಗೂ ಸಾಧಿಸುವುದಿಲ್ಲ ಮತ್ತು ದಾಳಿಯ ವೇಳೆ ತನ್ನ ದೇಶವನ್ನು ರಕ್ಷಿಸಲು ಪಾಕಿಸ್ತಾನಿ ಪಡೆಗಳು ಸಿದ್ಧವಾಗಿವೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಹೇಳಿದ್ದಾರೆ.

ಪಿಒಕೆಯನ್ನು ಮರಳಿ ಪಡೆಯುವ ಗುರಿಯನ್ನು ಭಾರತ ಎಂದೂ ಸಾಧಿಸುವುದಿಲ್ಲ: ಪಾಕ್ ಸೇನಾ ಮುಖ್ಯಸ್ಥ
Syed Asim Munir
Follow us on

ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ಗುರಿಯನ್ನು ಭಾರತ ಎಂದಿಗೂ ಸಾಧಿಸುವುದಿಲ್ಲ ಮತ್ತು ದಾಳಿಯ ವೇಳೆ ತನ್ನ ದೇಶವನ್ನು ರಕ್ಷಿಸಲು ಪಾಕಿಸ್ತಾನಿ ಪಡೆಗಳು ಸಿದ್ಧವಾಗಿವೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಹೇಳಿದ್ದಾರೆ. ಪಾಕ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಖ್‌ಚಿಕ್ರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಗೆ (ಎಲ್‌ಒಸಿ) ಮೊದಲ ಭೇಟಿ ನೀಡಿದ ಮುನೀರ್, ನಾನು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಪಾಕಿಸ್ತಾನ ಅವರ ಸಶಸ್ತ್ರ ಪಡೆಗಳು ನಮ್ಮ ಮಾತೃಭೂಮಿಯ ಪ್ರತಿ ಇಂಚಿನ್ನೂ ರಕ್ಷಿಸುವುದು ಮಾತ್ರವಲ್ಲ ಶತ್ರುಗಳ ವಿರುದ್ಧ ಯುದ್ಧಕ್ಕೂ ಸಿದ್ಧವಿದೆ ಎಂದರು.

ನಾವು ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮವನ್ನು ಮುರಿಯಲು ಬಯಸುವುದಿಲ್ಲ, ಒಂದು ವೇಳೆ ಶತ್ರು ರಾಷ್ಟ್ರ ನಮ್ಮ ಮೇಲೆ ದಾಳಿ ಮಾಡಿದ್ದೇ ಆದಲ್ಲಿ ನಮ್ಮ ಸೇನೆ ಯುದ್ಧಕ್ಕೆ ಸಿದ್ಧವಾಗಿದೆ, ಯುದ್ಧಭೂಮಿಯಲ್ಲೇ ಸೂಕ್ತ ಉತ್ತರ ನೀಡುತ್ತೇವೆ ಎಂದರು.

ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವಂತಹ ಆದೇಶಗಳನ್ನು ಕಾರ್ಯಗತಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದು ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಈ ಹೇಳಿಕೆಗಳನ್ನು “ಅತ್ಯಂತ ಬೇಜವಾಬ್ದಾರಿ” ಎಂದು ಕರೆಯುವ ಪಾಕಿಸ್ತಾನ ಸೇನ, ಭಾರತವು ತನ್ನ ಗುರಿಯನ್ನು ಸಾಧಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಎಲ್‌ಒಸಿ ಭೇಟಿಯ ಸಂದರ್ಭದಲ್ಲಿ, ಎಲ್‌ಒಸಿಯ ಇತ್ತೀಚಿನ ಪರಿಸ್ಥಿತಿ ಮತ್ತು ರಚನೆಯ ಕಾರ್ಯಾಚರಣೆಯ ಸನ್ನದ್ಧತೆಯ ಬಗ್ಗೆ ಮುನೀರ್‌ಗೆ ವಿವರಿಸಲಾಯಿತು. ಅಕ್ಟೋಬರ್ 28 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯುವ ನವದೆಹಲಿಯ ಸಂಕಲ್ಪವನ್ನು ಪುನರುಚ್ಚರಿಸಿದರು.

ಸೇನಾಧಿಕಾರಿಯಾಗಿದ್ದ ಜನರಲ್ ಕಮರ್ ಜಾವೇದ್ ಬಜ್ವಾ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ನವೆಂಬರ್ 24 ರಂದು ಜನರಲ್ ಅಸೀಮ್ ಮುನೀರ್ ನೇಮಕವಾದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ