ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ. ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. […]

ನ್ಯೂಜಿಲ್ಯಾಂಡ್​ನಲ್ಲೊಬ್ಬ ಕಾಮುಕ ಸಚಿವ ಸ್ಥಾನ ಮಾನ ಕಳೆದುಕೊಂಡನಪ್ಪ!
Follow us
KUSHAL V
| Updated By:

Updated on:Jul 23, 2020 | 2:09 PM

ಅನೈತಿಕ ಸಂಬಂಧ ಹೊಂದಿದ್ದ ನ್ಯೂಜಿಲ್ಯಾಂಡ್​ ಸರ್ಕಾರದ ಸಚಿವನೊಬ್ಬನನ್ನ ಪ್ರಧಾನಿ ಜಸಿಂದಾ ಆರ್ಡೆರ್ನ್ ಕೆಲಸದಿಂದ ವಜಾ ಮಾಡಿದ್ದಾರೆ. ತನ್ನ ಮಾಜಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧವಿದ್ದ ಹಿನ್ನೆಲೆಯಲ್ಲಿ ವಲಸೆ ಖಾತೆ ಸಚಿವ ಇಯನ್​ ಲೀಸ್​-ಗ್ಯಾಲೋವೇ (Iain Lees-Galloway) ತಮ್ಮ ಖಾತೆಯಿಂದ ವಜಾ ಆಗಿದ್ದಾರೆ.

ಪ್ರಧಾನಿ ಆರ್ಡೆರ್ನ್ ಪ್ರಕಾರ ಇಯನ್​ ಲೀಸ್​-ಗ್ಯಾಲೋವೇ ನಿರ್ವಹಿಸುತ್ತಿದ್ದ ಖಾತೆಯಡಿ ಕಚೇರಿ ಸಂಬಂಧಗಳು (Workplace Relations) ಸಹ ಒಂದು ಭಾಗವಾಗಿದ್ದರಿಂದ ಸಚಿವರನ್ನ ಆ ಖಾತೆಯಲ್ಲಿ ಮುಂದುವರಿಸುವುದು ಸಮಂಜಸವಲ್ಲ. ಜೊತೆಗೆ, ಈ ಪ್ರಕರಣದಿಂದ ಅಧಿಕಾರದ ದುರಪಯೋಗ ಸಹ ಆಗುತ್ತದೆ. ಹೀಗಾಗಿ, ಅವರನ್ನ ಕೆಲಸದಿಂದ ವಜಾ ಮಾಡಲಾಗಿದೆ ಎಂದಿದ್ದಾರೆ.

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಚಿವನ ತಲೆದಂಡ? ಅಂದ ಹಾಗೆ, ನ್ಯೂಜಿಲ್ಯಾಂಡ್​ನಲ್ಲಿ​ ಇದೇ ಸೆಪ್ಟಂಬರ್​ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ, ಸಚಿವರ ರಾಸಲೀಲೆ ಪ್ರಕರಣವು ಆಡಳಿತ ಪಕ್ಷದ ಗೆಲುವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.

ಜೊತೆಗೆ, ಸಚಿವರ ಕಾಮದಾಟವನ್ನ ಬೆಳಕಿಗೆ ತಂದಿರೋದು ವಿರೋಧ ಪಕ್ಷದ ನಾಯಕಿ ಜೂಡಿಥ್​ ಕಾಲಿನ್ಸ್​. ಆದ್ದರಿಂದ, ಮುಂಬರುವ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಪ್ರಧಾನಿ ಆರ್ಡೆರ್ನ್​ಗೆ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು ಎನ್ನಲಾಗಿದೆ.

ಇನ್ನು, ಮೂರು ಮಕ್ಕಳ ತಂದೆಯಾಗಿರುವ ಇಯನ್​ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನನ್ನ ವರ್ತನೆ ಅನುಚಿತವಾಗಿದ್ದು, ಈ ಕುರಿತು ಕ್ಷಮಾಪಣೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Published On - 1:12 pm, Wed, 22 July 20

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?