Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಮಾಸ್ಕ್ ಧರಿಸಿದ್ರೆ ದೇಶಭಕ್ತ ಎಂದ ಟ್ರಂಪ್

ಅಮೆರಿಕವನ್ನ ಕೊರೊನಾ ವೈರಸ್ ಆವರಿಸಿಕೊಂಡಿದ್ದರೂ, ಮಾಸ್ಕ್ ಧರಿಸಬೇಕೋ ಬೇಡವೋ ಅನ್ನೋ ದ್ವಂದ್ವ ಕೂಡ ಇದೆ. ಆದ್ರೆ ಈ ಬಗ್ಗೆ ಟ್ವೀಟ್ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅದೃಶ್ಯ ವೈರಸ್​ನ್ನು ಸೋಲಿಸಲು ನಾವು ಒಗ್ಗೂಡಿದ್ದೇವೆ. ಸಾಮಾಜಿಕವಾಗಿ ದೂರ ಇರಲು ಸಾಧ್ಯವಾಗದಿದ್ದಾಗ ಮಾಸ್ಕ್ ಧರಿಸೋದು ದೇಶಭಕ್ತಿ. ಹೀಗಾಗಿ, ನನಗಿಂತ ದೇಶಭಕ್ತ ಇನ್ನೊಬ್ಬರಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ. ವೈರಸ್ ‘ವಿಷವ್ಯೂಹ’ ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ವೈರಸ್ ಕೊರೊನಾದಿಂದಾಗಿ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,48,52,700ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 6,13,213 ಜನರು ಪ್ರಾಣ […]

Top News: ಮಾಸ್ಕ್ ಧರಿಸಿದ್ರೆ ದೇಶಭಕ್ತ ಎಂದ ಟ್ರಂಪ್
Follow us
ಆಯೇಷಾ ಬಾನು
| Updated By:

Updated on:Jul 22, 2020 | 2:59 PM

ಅಮೆರಿಕವನ್ನ ಕೊರೊನಾ ವೈರಸ್ ಆವರಿಸಿಕೊಂಡಿದ್ದರೂ, ಮಾಸ್ಕ್ ಧರಿಸಬೇಕೋ ಬೇಡವೋ ಅನ್ನೋ ದ್ವಂದ್ವ ಕೂಡ ಇದೆ. ಆದ್ರೆ ಈ ಬಗ್ಗೆ ಟ್ವೀಟ್ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅದೃಶ್ಯ ವೈರಸ್​ನ್ನು ಸೋಲಿಸಲು ನಾವು ಒಗ್ಗೂಡಿದ್ದೇವೆ. ಸಾಮಾಜಿಕವಾಗಿ ದೂರ ಇರಲು ಸಾಧ್ಯವಾಗದಿದ್ದಾಗ ಮಾಸ್ಕ್ ಧರಿಸೋದು ದೇಶಭಕ್ತಿ. ಹೀಗಾಗಿ, ನನಗಿಂತ ದೇಶಭಕ್ತ ಇನ್ನೊಬ್ಬರಿಲ್ಲ ಅಂತಾ ಟ್ರಂಪ್ ಹೇಳಿದ್ದಾರೆ.

ವೈರಸ್ ‘ವಿಷವ್ಯೂಹ’ ಜಗತ್ತನ್ನೇ ತಲ್ಲಣಗೊಳಿಸಿರುವ ಕ್ರೂರಿ ವೈರಸ್ ಕೊರೊನಾದಿಂದಾಗಿ, ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 1,48,52,700ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 6,13,213 ಜನರು ಪ್ರಾಣ ಕಳೆದುಕೊಂಡಿದ್ರೆ, ಪ್ರಸ್ತುತ 53,32,797 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ವಿರುದ್ಧ ಹೋರಾಡಿ, 89,06,690 ಜನರು ಗುಣಮುಖರಾಗಿದ್ದಾರೆ. 63 ಸಾವಿರ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ.

ಬ್ರೆಜಿಲ್​ನಲ್ಲಿ ವ್ಯಾಕ್ಸಿನ್​ ಪ್ರಯೋಗ ಬ್ರೆಜಿಲ್ ದೇಶದಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ 21,21,645ಕ್ಕೆ ಏರಿಕೆಯಾಗಿದೆ. ಇದ್ರ ಬೆನ್ನಲ್ಲೇ ಚೀನಾ ಮೂಲದ ವ್ಯಾಕ್ಸಿನ್​ ಅನ್ನ ಸೋಂಕಿತರ ಮೇಲೆ ಪ್ರಯೋಗ ಮಾಡಲು ಬ್ರೆಜಿಲ್ ಮುಂದಡಿ ಇಟ್ಟಿದೆ. ದೇಶದಲ್ಲಿ ಈಗಾಗಲೇ 80 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸೋಂಕಿತರನ್ನ ಉಳಿಸುವ ಸಲುವಾಗಿ ವ್ಯಾಕ್ಸಿನ್​ನ್ನ ಸಾವೋಪೋಲೋದಲ್ಲಿ ಪ್ರಯೋಗಿಸಲು ಆರಂಭಿಸಿದೆ.

ಪೋಲಿಯೋ ಲಸಿಕೆಗೂ ಕೊರೊನಾ ಕುತ್ತು..! ಹೆಮ್ಮಾರಿ ವೈರಸ್ ಎಲ್ಲಾ ಕೆಲಸಕ್ಕೂ ಕುತ್ತು ತಂದಿದೆ. ಪಾಕಿಸ್ತಾನದಲ್ಲಿ ಪುಟ್ಟ ಮಕ್ಕಳಿಗೆ ನೀಡಬೇಕಿದ್ದ ಪೋಲಿಯೋ ಲಸಿಕೆಗೂ ಅಡ್ಡಿಯಾಗಿತ್ತು. ಹೌದು, ಮಾರ್ಚ್​ನಲ್ಲಿ ನಡೆಯಬೇಕಿದ್ದ ಪೋಲಿಯೋ ಲಸಿಕೆ ಅಭಿಯಾನ ಕೊರೊನಾ ಅಬ್ಬರದಿಂದ ಸ್ಥಗಿತಗೊಂಡಿತ್ತು. ಹೀಗಾಗಿ, ಈಗ ವೈರಸ್ ಮಧ್ಯೆಯೂ ಽ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನ ಹಾಕಲಾಗ್ತಿದೆ.

ಕುಟುಂಬಸ್ಥರೇ ನರ್ಸ್​ಗಳು! ಅಫ್ಗಾನಿಸ್ಥಾನದಲ್ಲಿ ಕ್ರೂರಿ ಕೊರೊನಾ ವೈರಸ್​ನಿಂದಾಗಿ 35 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ವಕ್ಕರಿಸಿಕೊಂಡಿದೆ. ಈವರೆಗೂ ಸೋಂಕಿನಿಂದಾಗಿ 1 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾಬುಲ್​ನಲ್ಲಿರುವ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇರೋದ್ರಿಂದ, ಸೋಂಕಿತರ ಕುಟುಂಬಸ್ಥರೇ ಪಿಪಿಇ ಕಿಟ್​ಗಳನ್ನ ಧರಿಸಿ, ವಾರ್ಡ್​ಗಳಿಗೆ ಬಂದಿದ್ದಾರೆ.

ಬ್ಲಾಕ್​ಬರ್ನ್ ಹಾಟ್​ಸ್ಪಾಟ್​ ಇಂಗ್ಲೆಂಡ್​ನಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅದ್ರಲ್ಲೂ ಬ್ಲ್ಯಾಕ್​ಬರ್ನ್​ನಲ್ಲಿ ಸೋಂಕಿನ ಸುನಾಮಿಯೇ ಎದ್ದಿದೆ. ಒಂದು ವಾರದ ಅವಧಿಯಲ್ಲೇ ಬ್ಲಾಕ್​ಬರ್ನ್​ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಬ್ಲಾಕ್​ಬರ್ನ್ ಮತ್ತು ಡರ್ವೆನ್​ನಲ್ಲಿ ಸೋಂಕಿನ ವಿಸ್ಫೋಟ ಉಂಟಾಗಿದ್ದು, ಈಗ ಇಂಗ್ಲೆಂಡ್​ನ ಕೊರೊನಾ ಹಾಟ್​ಸ್ಪಾಟ್​ ಆಗಿ ಗುರುತಿಸಲ್ಪಟ್ಟಿದೆ.

ಆಸ್ಟ್ರೇಲಿಯಾದಲ್ಲಿ ನಿಲ್ಲದ ಆತಂಕ ಕಾಂಗರೂ ನಾಡಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿನ ನಾಗಾಲೋಟಕ್ಕೆ ಬ್ರೇಕೇ ಬೀಳ್ತಿಲ್ಲ. ಅದ್ರಲ್ಲೂ ವಿಕ್ಟೋರಿಯಾ ರಾಜ್ಯ ಮತ್ತು ಸೌತ್ ವೇಲ್ಸ್​ನಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಹೀಗಾಗಿ, ಸೋಂಕು ನಿಗ್ರಹಿಸುವ ಸಲುವಾಗಿ ಮಾಸ್ಕ್ ಧರಿಸೋದು ಕಡ್ಡಾಯ ಮಾಡಲಾಗಿದೆ. ದಕ್ಷಿಣ ವೇಲ್ಸ್​ನ ಸ್ಥಿತಿ ದಿನೇ ದಿನೆ ಮತ್ತಷ್ಟು ಬಿಗಡಾಯಿಸುತ್ತಿದೆ ಅಂತಾ ವರದಿಯೊಂದು ಆತಂಕ ವ್ಯಕ್ತಪಡಿಸಿದೆ.

‘ವೈರಸ್​​ನಿಂದ ಜಾಗತಿಕ ಅಸಮಾನತೆ’ ಕ್ರೂರಿ ಕೊರೊನಾ ವೈರಸ್​ನಿಂದಾಗಿ ಜಗತ್ತಿನಲ್ಲಿ ಜಾಗತಿಕ ಅಸಮಾನತೆ ಏನು ಅನ್ನೋದನ್ನ ಬಹಿರಂಗ ಪಡಿಸಿದೆ ಅಂತಾ ವಿಶ್ವ ಸಂಸ್ಥೆ ಹೇಳಿದೆ. ವಿಶ್ವ ಸಂಸ್ಥೆಯ ಸೆಕ್ರೇಟಿ ಜನರಲ್ ಅಂಟೊನಿಯಾ ಮಾತನಾಡಿ, ನಾವು ಕಟ್ಟಿದ ಸಮಾಜದಲ್ಲಿನ ಅಸ್ಥಿ ಪಂಜರಗಳಲ್ಲಿನ ಬಿರುಕುಗಳನ್ನು ನಾವೇ ಸರಿಪಡಿಸಬೇಕಾದ ಅನಿವಾರ್ಯತೆ ಇದೆ ಅಂತಾ ಹೇಳಿದ್ದಾರೆ.

‘ಅಂತರ’ದಲ್ಲೇ ಪಾಠ ಅಮೆರಿಕದಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ 39,61,429ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 1,45,834 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದ್ರಿಂದ ಅಕ್ಯಾಡೆಮಿಕ್​ ಇಯರ್​ನಂತೆ ಶಾಲೆಗಳು ಆರಂಭಗೊಂಡಿರಲಿಲ್ಲ. ಆದ್ರೀಗ, ವೈರಸ್ ಅಬ್ಬರ ಕಡಿಮೆಯಾಗದಿದ್ದರೂ ಸಹ, ಅಂತರ ಕಾಪಾಡಿಕೊಂಡು ಶಾಲೆಗಳನ್ನ ಆರಂಭಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಶಾಲೆಗಳೂ ಸಹ ಅಂತರದ ಸಿದ್ಧತೆ ನಡೆಸಿವೆ.

Published On - 2:52 pm, Tue, 21 July 20

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು