ಸೋಂಕಿತ ಅಮ್ಮನನ್ನು ಕೊನೇ ಬಾರಿ ನೋಡಲು ಆಸ್ಪತ್ರೆಯ ಗೋಡೆ ಹತ್ತಿ ಬಂದ ಮಗ..
ಸೋಂಕಿಗೆ ತುತ್ತಾಗಿ ಅಸುನೀಗಿದ ತನ್ನ ತಾಯಿಯನ್ನು ಕೊನೇ ಬಾರಿ ನೋಡಲು ಆಕೆಯ ಮಗ ಆಸ್ಪತ್ರೆಯ ಗೋಡೆ ಹತ್ತಿ ಬಂದ ಮನಕಲುಕುವ ಘಟನೆ ಪ್ಯಾಲೆಸ್ಟೈನ್ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಲುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ 73 ವರ್ಷದ ರಸ್ಮಿ ಸುವೈತಿ ಕೆಲವು ದಿನಗಳ ಹಿಂದೆ ಹೆಬ್ರಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಸ್ಮಿಗೆ ಕೊರೊನಾ ಸೋಂಕು ಸಹ ದೃಢಪಟ್ಟಿತ್ತು. ಹೀಗಾಗಿ, ಅವರನ್ನ ಆಸ್ಪತ್ರೆಯ ಕೊವಿಡ್ ICU ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, […]
ಸೋಂಕಿಗೆ ತುತ್ತಾಗಿ ಅಸುನೀಗಿದ ತನ್ನ ತಾಯಿಯನ್ನು ಕೊನೇ ಬಾರಿ ನೋಡಲು ಆಕೆಯ ಮಗ ಆಸ್ಪತ್ರೆಯ ಗೋಡೆ ಹತ್ತಿ ಬಂದ ಮನಕಲುಕುವ ಘಟನೆ ಪ್ಯಾಲೆಸ್ಟೈನ್ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಲುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ 73 ವರ್ಷದ ರಸ್ಮಿ ಸುವೈತಿ ಕೆಲವು ದಿನಗಳ ಹಿಂದೆ ಹೆಬ್ರಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಸ್ಮಿಗೆ ಕೊರೊನಾ ಸೋಂಕು ಸಹ ದೃಢಪಟ್ಟಿತ್ತು. ಹೀಗಾಗಿ, ಅವರನ್ನ ಆಸ್ಪತ್ರೆಯ ಕೊವಿಡ್ ICU ವಾರ್ಡ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕ್ಯಾನ್ಸರ್ ಕಾಯಿಲೆಯ ಭೀಕರತೆಯಿಂದ ಆಕೆ ಕೊವಿಡ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲೇ ಇಲ್ಲ. ಕೊನೆಗೆ ರಸ್ಮಿ ಪರಿಸ್ಥಿತಿ ಗಂಭೀರವಾಗಿ ಬದುಕಿನ ಅಂತಿಮ ಹಂತ ತಲುಪಿಬಿಟ್ಟರು.
ತಾಯಿಯ ಆರೋಗ್ಯ ಸ್ಥಿತಿ ಅರಿತ ಆಕೆಯ ಮಗ 30 ವರ್ಷದ ಜಿಹಾದ್ ಅಲ್ ಸುವೈತಿ ಹೇಗಾದರೂ ಮಾಡಿ ತನ್ನ ಅಮ್ಮನನ್ನು ನೋಡಲೇಬೇಕು ಎಂಬ ಹಠ ಹಿಡಿದ. ಆದರೆ, ರಸ್ಮಿ ಆರೋಗ್ಯ ಸ್ಥಿತಿ ಹಾಗೂ ಸೋಂಕು ಹರಡುವ ಭೀತಿಯಿಂದ ಆಸ್ಪತ್ರೆಯ ಸಿಬ್ಬಂದಿ ಆತನಿಗೆ ಅನುಮತಿ ನೀಡಲಿಲ್ಲ. ತಾಯಿಯ ಬಗ್ಗೆ ಅಪಾರವಾದ ಪ್ರೀತಿಯಿದ್ದ ಮಗನಿಗೆ ಇದು ಒಪ್ಪಿಗೆಯಾಗಲಿಲ್ಲ.
ಅಮ್ಮನನ್ನ ಕೊನೇ ಬಾರಿ ನೋಡಲೇಬೇಕೆಂದು ಗೋಡೆ ಹತ್ತಿದ ಮಗ ಹಾಗಾಗಿ, ಅಮನನ್ನ ಕೊನೇ ಬಾರಿ ನೋಡಲೇಬೇಕು ಎಂಬ ಹಠದಿಂದ ಜಿಹಾದ್ ಕೊನೆಗೆ ಆಸ್ಪತ್ರೆಯ ಗೋಡೆ ಹತ್ತಿ ಬಂದು ತನ್ನ ತಾಯಿಯಿದ್ದ ICU ವಾರ್ಡ್ನ ಕಿಟಕಿ ತಲುಪಿದ. ಅಲ್ಲೇ ಕುಳಿತು ಆಕೆಯನ್ನ ಕೊನೆಯ ಬಾರಿಗೆ ಕಣ್ಣು ತುಂಬಿಕೊಂಡ. ಈ ನಡುವೆ ಇದಾವುದರ ಅರಿವೇ ಇಲ್ಲದ ರಸ್ಮಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆದರೆ, ಆಕೆಯ ಮಗನಿಗೆ ತನ್ನ ತಾಯಿಯನ್ನ ಕೊನೇ ಬಾರಿ ಕಣ್ತುಂಬ ನೋಡಿದ ತೃಪ್ತಿ ದೊರಕಿತ್ತು.
ಇನ್ನು ಈ ಘಟನೆಯ ಫೋಟೋ ಕ್ಲಿಕ್ಕಿಸಿರುವ ಮೊಹಮ್ಮದ್ ಸಫಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾಯಿಯ ಪರ ಮಗನ ಅಪಾರ ಪ್ರೀತಿಯನ್ನ ಕೊಂಡಾಡಿದ್ದಾರೆ. ಇದೀಗ ಈ ಫೋಟೋ ಮತ್ತು ಕಿಟಕಿಯಲ್ಲಿ ಕೂತಿರುವ ಜಿಹಾದ್ಗೆ ರಸ್ಮಿ ಹಾರೈಸುತ್ತಿರುವ ಚಿತ್ರ ಸಖತ್ ವೈರಲ್ ಆಗಿದೆ. ತಾಯಿ ಬಗ್ಗೆ ನಿಜವಾದ ಪ್ರೀತಿಯಿರುವ ಮಗನೆಂದರೆ ಇವನೇ ಎಂದು ಹಲವರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
The son of a Palestinian woman who was infected with COVID-19 climbed up to her hospital room to sit and see his mother every night until she passed away. pic.twitter.com/31wCCNYPbs
— Mohamad Safa (@mhdksafa) July 18, 2020
Published On - 4:14 pm, Mon, 20 July 20