ಕೊನೆಗೂ ಈಡೇರಿತು ‘ಭರವಸೆ’ UAE ನಿಂದ ಮಂಗಳದತ್ತ ಮಹತ್ವಾಕಾಂಕ್ಷಿ ಉಡ್ಡಯನ
ಕೊರೊನಾ ಮಹಾಮಾರಿಯ ಆರ್ಭಟದ ನಡುವೆ ಮಧ್ಯ ಪ್ರಾಚ್ಯ ರಾಷ್ಟ್ರವಾದ UAE (ಯುನೈಟೆಡ್ ಅರಬ್ ಎಮಿರೇಟ್ಸ್) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆಯೊಂದನ್ನು ಮಾಡಿದೆ. ಇಂದು ಬಾಹ್ಯಾಕಾಶದಲ್ಲಿ ತನ್ನ ಮೊದಲನೇ ಅಂತರ್ ಗ್ರಹ ಉಪಗ್ರಹದ ಯಶಸ್ವಿ ಉಡಾವಣೆಗೆ ಸಾಕ್ಷಿಯಾಗಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲು ಮುಂದಾಗಿದೆ. ಹೌದು, ಜಪಾನ್ನ ದಕ್ಷಿಣ ಭಾಗದಿಂದ H-2A ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡ್ಡಯನ ಕಂಡ Hope ಎಂಬ ಹೆಸರಿನ UAE ದೇಶದ ಉಪಗ್ರಹ ಇದೀಗ ಮಂಗಳ ಗ್ರಹದತ್ತ ತೆರಳಲಿದೆ. […]
ಕೊರೊನಾ ಮಹಾಮಾರಿಯ ಆರ್ಭಟದ ನಡುವೆ ಮಧ್ಯ ಪ್ರಾಚ್ಯ ರಾಷ್ಟ್ರವಾದ UAE (ಯುನೈಟೆಡ್ ಅರಬ್ ಎಮಿರೇಟ್ಸ್) ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆಯೊಂದನ್ನು ಮಾಡಿದೆ. ಇಂದು ಬಾಹ್ಯಾಕಾಶದಲ್ಲಿ ತನ್ನ ಮೊದಲನೇ ಅಂತರ್ ಗ್ರಹ ಉಪಗ್ರಹದ ಯಶಸ್ವಿ ಉಡಾವಣೆಗೆ ಸಾಕ್ಷಿಯಾಗಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಲು ಮುಂದಾಗಿದೆ.
ಹೌದು, ಜಪಾನ್ನ ದಕ್ಷಿಣ ಭಾಗದಿಂದ H-2A ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡ್ಡಯನ ಕಂಡ Hope ಎಂಬ ಹೆಸರಿನ UAE ದೇಶದ ಉಪಗ್ರಹ ಇದೀಗ ಮಂಗಳ ಗ್ರಹದತ್ತ ತೆರಳಲಿದೆ. ಕಾರ್ ಗಾತ್ರದ ಈ ಉಪಗ್ರಹ ಸತತ ಏಳು ತಿಂಗಳ ಕಾಲ ಮಂಗಳದತ್ತ ಕ್ರಮಿಸಲಿದ್ದು ನಂತರ ಮಂಗಳ ಗ್ರಹದ ಹವಾಮಾನ ಮತ್ತು ವಾತಾವರಣದ ಬಗ್ಗೆ ಸಂಶೋಧನೆ ನಡೆಸಲಿದೆ.
ಮಧ್ಯಪ್ರಾಚ್ಯದ UAE ದೇಶಕ್ಕೆ ಈ ಉಪಗ್ರಹದ ಉಡ್ಡಯನ ಬಹಳಷ್ಟು ಮಹತ್ವ ಪಡೆದಿದೆ. ಡಿಸೆಂಬರ್ 2021 ರಲ್ಲಿ ಈ ಸಂಯುಕ್ತ ಅರಬ್ ರಾಷ್ಟ್ರ ಸ್ಥಾಪನೆಯಾಗಿ 50 ವರ್ಷಗಳು ಪೂರ್ಣಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ನಾಡಿನ ಯುವಕರಿಗೆ ಭವಿಷ್ಯದ ಬಗ್ಗೆ ಭರವಸೆ (Hope) ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನ ಕೈಗೊಂಡಿದೆ. 2014ರಲ್ಲಿ ಪ್ರಾರಂಭವಾದ ಈ ಯೋಜನೆಯ ಕನಸು ಇದೀಗ ನನಸಾಗಿದೆ.