North Korea Missile: ಶತ್ರುಗಳಲ್ಲಿ ಭಯ ಹುಟ್ಟಿಸಲು ಮತ್ತೆ ಸಮುದ್ರದ ಕಡೆಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

|

Updated on: Mar 19, 2023 | 9:22 AM

ಉತ್ತರ ಕೊರಿಯಾವು ಭಾನುವಾರ ಸಮುದ್ರದ ಕಡೆಗೆ ಮತ್ತೊಂದು ಕ್ಷಿಪಣಿಯನ್ನು ಹಾರಿಸಿದೆ. ಒಂದೆಡೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಪಡೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿದೆ, ಅದನ್ನು ಸಹಿಸಿಕೊಳ್ಳಲಾಗದ ಉತ್ತರ ಕೊರಿಯಾವು ಪದೇ ಪದೇ ಕ್ಷಿಪಣಿಗಳನ್ನು ಹಾರಿಸುತ್ತಿದೆ.

North Korea Missile: ಶತ್ರುಗಳಲ್ಲಿ ಭಯ ಹುಟ್ಟಿಸಲು ಮತ್ತೆ ಸಮುದ್ರದ ಕಡೆಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ
ಕಿಮ್ ಜಾಂಗ್ ಉನ್
Image Credit source: India TV
Follow us on

ಉತ್ತರ ಕೊರಿಯಾವು ಭಾನುವಾರ ಸಮುದ್ರದ ಕಡೆಗೆ ಮತ್ತೊಂದು ಕ್ಷಿಪಣಿಯನ್ನು ಹಾರಿಸಿದೆ. ಒಂದೆಡೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಪಡೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿದೆ, ಅದನ್ನು ಸಹಿಸಿಕೊಳ್ಳಲಾಗದ ಉತ್ತರ ಕೊರಿಯಾವು ಪದೇ ಪದೇ ಕ್ಷಿಪಣಿಗಳನ್ನು ಹಾರಿಸುತ್ತಿದೆ.
ಭಾನುವಾರ ಉತ್ತರ ಕೊರಿಯಾವು ಕ್ಷಿಪಣಿಯ ಉಡಾವಣೆ ಮಾಡಿದೆ ಎಂದು ಜಪಾನ್​ನ ರಕ್ಷಣಾ ಸಚಿವಾಲಯ ಹೇಳಿದೆ. ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ದಕ್ಷಿಣದ ಮಿಲಿಟರಿಯನ್ನು ಉಲ್ಲೇಖಿಸಿ ಮಾತನಾಡಿ, ಉತ್ತರ ಕೊರಿಯಾ ತನ್ನ ಪೂರ್ವದ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ ಎಂದು ಹೇಳಿದೆ.

ಈ ಉಡಾವಣೆ ದೃಢಪಟ್ಟರೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಮಿಟಿಲರಿ ಪಡೆಗಳ ಒಟ್ಟಿಗೆ ಸಮರಾಭ್ಯಾಸವನ್ನು ಆರಂಭಿಸಿದ ಬಳಿಕ ಇದು ಮೂರನೇ ಸುತ್ತಿನ ಕ್ಷಿಪಣಿ ಉಡಾವಣೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾಗಳು ತಮ್ಮ ತರಬೇತಿಯು ರಕ್ಷಣಾತ್ಮಕ ಸ್ವರೂಪದ್ದಾಗಿದೆ ಎಂದು ದೃಢವಾಗಿ ಹೇಳಿದ್ದರೂ, ಉತ್ತರವು ಡ್ರಿಲ್‌ಗಳನ್ನು ಆಕ್ರಮಣಕ್ಕೂ ಮುನ್ನ ನಡೆಸುವ ಅಭ್ಯಾಸವೆಂದು ಪರಿಗಣಿಸುತ್ತದೆ.

ಮತ್ತಷ್ಟು ಓದಿ:Ballistic Missile: ಉತ್ತರ ಕೊರಿಯಾದಿಂದ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆ

ಕಂಪ್ಯೂಟರ್ ಸಿಮ್ಯುಲೇಶನ್‌ಗಳು ಮತ್ತು ಫೀಲ್ಡ್ ವ್ಯಾಯಾಮಗಳನ್ನು ಒಳಗೊಂಡಿರುವ ಇತ್ತೀಚಿನ ಯುಎಸ್-ದಕ್ಷಿಣ ಕೊರಿಯಾದ ಡ್ರಿಲ್‌ಗಳು ಗುರುವಾರದವರೆಗೆ ಮುಂದುವರಿಯಲಿವೆ. ಅಮೆರಿಕ ಮತ್ತು ಚೀನಾ ನಡುವೆ ತಲೆದೋರಿರುವ ಉದ್ವಿಗ್ನತೆ ನಡುವೆ, ಉತ್ತರ ಕೊರಿಯಾ ಮಿಲಿಟರಿ ಸಾಮರ್ಥ್ಯಗಳ ಬಗ್ಗೆ ಚೀನಾದ ರಕ್ಷಣಾ ವಿಜ್ಞಾನಿಗಳು ಹೇಳಿಕೆ ನೀಡಿದ್ದಾರೆ. ಉತ್ತರ ಕೊರಿಯಾವು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿದ್ದು, ಅದು ಕೇವಲ 33 ನಿಮಿಷಗಳಲ್ಲಿ ಅಮೆರಿಕವನ್ನು ವಿನಾಶಗೊಳಿಸಬಹುದು ಎಂದಿದ್ದಾರೆ.

ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್‌ನ ಟ್ಯಾಂಗ್ ಯುವಾನ್ ನೇತೃತ್ವದ ಸಂಶೋಧನಾ ತಂಡದ ಪ್ರಕಾರ, ಉತ್ತರ ಕೊರಿಯಾ ಕ್ಷಿಪಣಿಯು ಎರಡು ಹಂತದ ಪರಮಾಣು-ಸಾಮರ್ಥ್ಯದ ಅಸ್ತ್ರವಾಗಿದ್ದು, 13,000 ಕಿಮೀ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಇಡೀ ಅಮೆರಿಕವನ್ನು ನಾಶ ಮಾಡಲು ಸಾಕು ಎಂದು ಹೇಳಿದೆ.

ಉತ್ತರ ಕೊರಿಯಾದ ಕ್ಷಿಪಣಿಯು ಮಧ್ಯ ಅಮೆರಿಕವನ್ನು 1,997 ಸೆಕೆಂಡುಗಳಲ್ಲಿ ಅಂದರೆ ಸರಿಸುಮಾರು 33 ನಿಮಿಷಗಳಲ್ಲಿ ತಲುಪಬಹುದು  ಎಂದು ಚೀನಾದ ರಕ್ಷಣಾ ತಜ್ಞರು ಹೇಳಿಕೆ ನೀಡಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ