ಊಹಾಪೋಹಗಳ ಬೆನ್ನಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷ!
ಉತ್ತರ ಕೊರಿಯಾ: 20 ದಿನಗಳ ಬಳಿಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಲ್ ಜಝೀರಾ ತಿಳಿಸಿದೆ. ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದ ಸಂಚೆನ್ ಎಂಬಲ್ಲಿ ಸಹೋದರಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಖಾನೆಯೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಚಾಲನೆ ನೀಡಿರುವ ಫೋಟೋಗಳನ್ನು ರಿಲೀಸ್ ಮಾಡಲಾಗಿದೆ. ಆದ್ರೆ ಏ.15 ರಂದು ಕಿಮ್ ಜಾಂಗ್ ಉನ್ ತನ್ನ ತಾತ ಅಂದ್ರೆ ಉತ್ತರ […]
ಉತ್ತರ ಕೊರಿಯಾ: 20 ದಿನಗಳ ಬಳಿಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಲ್ ಜಝೀರಾ ತಿಳಿಸಿದೆ. ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದ ಸಂಚೆನ್ ಎಂಬಲ್ಲಿ ಸಹೋದರಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಕಿಮ್ ಜಾಂಗ್ ಉನ್ ಕಾಣಿಸಿಕೊಂಡಿದ್ದಾರೆ.
ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಖಾನೆಯೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಉನ್ ಚಾಲನೆ ನೀಡಿರುವ ಫೋಟೋಗಳನ್ನು ರಿಲೀಸ್ ಮಾಡಲಾಗಿದೆ. ಆದ್ರೆ ಏ.15 ರಂದು ಕಿಮ್ ಜಾಂಗ್ ಉನ್ ತನ್ನ ತಾತ ಅಂದ್ರೆ ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಸುಂಗ್ನ ಹುಟ್ಟುಹಬ್ಬ ಆಚರಣೆಯಿತ್ತು. ಉತ್ತರ ಕೊರಿಯಾದ ಮಟ್ಟಿಗೆ ಅದು ಮಹತ್ವದ ಆಚರಣೆ. ಆದ್ರೆ ಕಿಮ್ ಜಾಂಗ್ ಉನ್ ಆ ಸಮಾರಂಭದಲ್ಲಿ ಭಾಗಿಯಾಗಿರಲಿಲ್ಲ.
ಅಲ್ಲದೆ, ಅನಾರೋಗ್ಯ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸ್ಥಿತಿ ಗಂಭೀರವಾಗಿದೆ ಎಂದು ಸಾಕಷ್ಟು ಊಹಾಪೋಹಗಳೆದ್ದಿದ್ದವು.
Published On - 7:55 am, Sat, 2 May 20