ರಷ್ಯಾ- ಉಕ್ರೇನ್ ನಡುವಿನ ಯುದ್ಧ(Russia-Ukraine War) ಆರಂಭವಾಗಿದೆ. ಬಲಿಷ್ಠ ರಾಷ್ಟ್ರ ರಷ್ಯಾ ದಾಳಿಗೆ ಉಕ್ರೇನ್ ಅಕ್ಷರಶಃ ನಲುಗಿ ಹೋಗುತ್ತಿದೆ. ಬಾಂಬ್, ಕ್ಷಿಪಣಿಗಳ ದಾಳಿಗೆ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುರೋಪ್ (Europe) ರಾಷ್ಟ್ರಗಳಿಗೆ ಇಂತಹದ್ದೊಂದು ಯುದ್ಧದ ಪರಿಸ್ಥಿತಿ ಎದುರಾಗಲಿದೆ ಎಂದು ಪ್ರೆಂಚ್ನ ನಾಸ್ಟ್ರಾಡಾಮಸ್(Nostradamus) ಈ ಹಿಂದೆಯೇ ತಮ್ಮ ಭವಿಷ್ಯ ವಾಣಿಯಲ್ಲಿ ಹೇಳಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಾಸ್ಟ್ರಾಡಾಮಸ್ 1555ರಲ್ಲಿಯೇ 942 ಮುನ್ಸೂಚನೆಗಳನ್ನು ಒಳಗೊಂಡ ಲೆಸ್ ಪ್ರೊಫೆಟೀಸ್ (Les Propheties) ಎನ್ನುವ ಪುಸ್ತಕ ಬರೆದಿದ್ದಾನೆ. ಅದರಲ್ಲಿ 2022 ರಲ್ಲಿ ಯುರೋಪಿನಲ್ಲಿ ಯುದ್ಧ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಈ ಹಿಂದೆ ನಾಸ್ಟ್ರಾಡಾಮಸ್ ಭವಿಷ್ಯ ವಾಣಿಯಲ್ಲಿ ಲಂಡನ್ನ ಮಹಾಬೆಂಕಿ ದುರಂತ, ಅಡಾಲ್ಫ್ ಹಿಟ್ಲರ್ ಮತ್ತು ನೆಪೋಲಿಯನ್ನ ಜನನ, 9/11ರ ವರ್ಲಡ್ ಟ್ರೇಡ್ ಸೆಂಟರ್ನ ಮೇಲಾದ ದಾಳಿ, ಜಾನ್ ಎಫ್ ಕೆನಡಿ ಹತ್ಯೆಯ ಬಗ್ಗೆ ಭವಿಷ್ಯ ನುಡಿದಿದ್ದರು. ಅವೆಲ್ಲವೂ ಸತ್ಯವಾಗಿತ್ತು. ಅದೇ ರೀತಿ ಈ ವರ್ಷವೂ ಯುದ್ಧ ನಡೆಯುವ ಬಗ್ಗೆ ಭವಿಷ್ಯದಲ್ಲಿ ಹೇಳಿದ್ದರು ಎಂದು ಹೇಳಲಾಗಿದೆ.
ಮೂರನೇ ಮಹಾಯುದ್ಧ, ಭೂಕಂಪ, ಮೂರನೇ ಆಂಟಿಕ್ರೈಸ್ಟ್ ಮುಂದಿನ ದಿನಗಳಲ್ಲಿ ಸಂಭವಿಸಬಹುದು ಎಂದು ಭವಿಷ್ಯದಲ್ಲಿ ಹೇಳಲಾಗಿದೆ. ಇದರ ಜತೆಗೆ ಬ್ರಿಟಿಷ್ ನಾಸ್ಟ್ರಾಡಾಮಸ್ ಬೋಬು ಶೈಲರ್ ನುಡಿದ ಭವಿಷ್ಯದಲ್ಲಿ ಎಂಡ್ ಆಫ್ ಡೇಸ್ ಸರಣಿಯಲ್ಲಿ ಭವಿಷ್ಯದಲ್ಲಿ ಭೂಮಿಯು ನಾಶವಾಗಲಿದೆ. ಆದರೆ ಇದು ಇನ್ನೂ 1,772 ವರ್ಷಗಳವರೆಗೆ ಆಗುವುದಿಲ್ಲ ಎಂದಿದ್ದಾರೆ.ಇದರೊಂದಿಗೆ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದಲ್ಲಿ ಜ್ವಾಲಾಮುಖಿ ಸ್ಫೋಟ ಮತ್ತು ಮುಂಬರುವ ವರ್ಷಗಳಲ್ಲಿ ಸಂಭವಿಸಬಹುದಾದ ಬೃಹತ್ ಸೌರ ಜ್ವಾಲೆ ಬಗ್ಗೆ ಎಚ್ಚರಿಸಿದ್ದಾರೆ.
ನಾಸ್ಟ್ರಾಡಾಮಸ್ ಪ್ರಕಾರ ಭೂಮಿಯ ನಾಶ 3797ರ ಹೊತ್ತಿಗೆ ಸಂಭವಿಸಬಹುದು. ಅದನ್ನು ಹೊರತುಪಡಿಸಿ ಜಗತ್ತಿಗೆ ಒಂದಷ್ಟು ಸಂಕಷ್ಟಗಳು ಎದುರಾಗಲಿದೆ ಎಂದು ದಿ ಸನ್ ವರದಿ ಮಾಡಿದೆ. ಇನ್ನು ಬ್ರಿಟಿಷ್ ನಾಸ್ಟ್ರಾಡಾಮಸ್ 100 ವರ್ಷಗಳವರೆಗೆ ಭೂಮಿಯ ನಾಶವಾಗುವುದಿಲ್ಲ. ಅದರ ನಂತರ ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ
Published On - 12:44 pm, Fri, 25 February 22