ರಷ್ಯಾ ದಾಳಿ ಅರಂಭಿಸಿದಾಗಿನಿಂದ ಇಲ್ಲಿಯವರೆಗೆ ಕನಿಷ್ಟ 287 ಮಕ್ಕಳು ಬಲಿಯಾಗಿದ್ದಾರೆ: ಉಕ್ರೇನ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 12, 2022 | 8:00 AM

ಕಚೇರಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಲು ಆದೇಶ ನೀಡಿದ ಬಳಿಕ ಇಲ್ಲಿಯವರೆಗೆ ಕನಿಷ್ಟ 287 ಮಕ್ಕಳು ಆಕ್ರಮಣಕ್ಕೆ ಸಿಕ್ಕು ಸತ್ತಿದ್ದಾರೆ ಮತ್ತು 492 ಮಕ್ಕಳು ಗಾಯಗೊಂಡಿದ್ದಾರೆ.

ರಷ್ಯಾ ದಾಳಿ ಅರಂಭಿಸಿದಾಗಿನಿಂದ ಇಲ್ಲಿಯವರೆಗೆ ಕನಿಷ್ಟ 287 ಮಕ್ಕಳು ಬಲಿಯಾಗಿದ್ದಾರೆ: ಉಕ್ರೇನ್
ರಷ್ಯಾ ದಾಳಿಗೆ ನಲುಗಿದ ಉಕ್ರೇನ್
Follow us on

ಕೀವ್: ಉಕ್ರೇನಿನ ಪ್ರಾಸಿಕ್ಯೂಟರ್ ಜನರಲ್ (Office of Prosecutor General) ಅವರ ಕಚೇರಿಯಿಂದ ಶನಿವಾರ ಹೊರ ಬಿದ್ದಿರುವ ಪ್ರಕಟಣೆಯೊಂದರ ಪ್ರಕಾರ ರಷ್ಯನ್ ಪಡೆಗಳಿಂದ ವಾರಗಳ ಕಾಲ ಮುತ್ತಿಗೆ ಹಾಕಲ್ಪಟ್ಟಿದ್ದ ದೇಶದ ನೈರುತ್ಯ ಭಾಗಕ್ಕಿರುವ ಬಂದರು ಪಟ್ಟಣ ಮರಿಯುಫೋಲ್ ನಿಂದ (Mariupol) ಇನ್ನೂ 24 ಮಕ್ಕಳು ಮರಣಿಸಿರುವ ಕುರಿತು ಮಾಹಿತಿ ಸಿಕ್ಕಿದೆ. ಕಳೆದ ತಿಂಗಳು ಮಧ್ಯಭಾಗದಲ್ಲಿ ರಷ್ಯಾ (Russia) ಸದರಿ ಪಟ್ಟಣವನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಕಚೇರಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಫೆಬ್ರುವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸಲು ಆದೇಶ ನೀಡಿದ ಬಳಿಕ ಇಲ್ಲಿಯವರೆಗೆ ಕನಿಷ್ಟ 287 ಮಕ್ಕಳು ಆಕ್ರಮಣಕ್ಕೆ ಸಿಕ್ಕು ಸತ್ತಿದ್ದಾರೆ ಮತ್ತು 492 ಮಕ್ಕಳು ಗಾಯಗೊಂಡಿದ್ದಾರೆ.

‘ರಷ್ಯನ್ ಸೈನಿಕರು ನಡೆಸಿದ ದೌರ್ಜನ್ಯ ಮತ್ತು ಅಪರಾಧಗಳ ದಾಖಲೆಯನ್ನು ಪರಿಶೀಲಿಸುವಾಗ ಅವರು ನಡೆಸಿದ ಅವ್ಯಾಹತ ಶೆಲ್ಲಿಂಗ್ ಕಾರಣ ಮರಿಯುಪೋಲ್ ಮತ್ತು ಡಾನೆಟ್ಸ್ಕ್ ಪ್ರಾಂತ್ಯದಲ್ಲಿ ಇನ್ನೂ 24 ಮಕ್ಕಳು ಅಸು ನೀಗಿರುವ ಬಗ್ಗೆ ಮಾಹಿತಿ ನಮಗೆ ದೊರಕಿದೆ,’ ಅಂತ ಟೆಲಿಗ್ರಾಮ್ ಮೇಸೇಜಿಂಗ್ ಌಪ್ ನಲ್ಲಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

‘ಇವೇ ಅಂತಿಮ ಅಂಕಿ-ಅಂಶಗಳಲ್ಲ. ರಷ್ಯನ್ ಸೈನಿಕರು ದಾಳಿ ನಡೆಸಿದ ಪ್ರದೇಶಗಳು, ಅದರ ಸೈನಿಕರು ತಾತ್ಕಾಲಿಕವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳು ಮತ್ತು ಅವರಿಂದ ಸ್ವತಂತ್ರಗೊಂಡ ಪ್ರದೇಶಗಳಿಂದ ನಾವು ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ,’ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರದಿಯನ್ನು ಪ್ರತ್ಯೇಕವಾಗಿ ಪರಶೀಲಿಸಲು ತನಗೆ ಸಾಧ್ಯವಾಗಿಲ್ಲ ಎಂದು ರಾಯಿಟರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ರಷ್ಯನ್ ಸೈನಿಕರು ಮುತ್ತಿಗೆ ಹಾಕಿದ ಸಮಯದ ಬಳಿಕ ವಿನಾಶಗೊಂಡ ಕೂಪದಂತೆ ಕಾಣುತ್ತಿರುವ ಮರಿಯುಪೋಲ್ ನಗರದ ಎಲ್ಲ ಒಳಚರಂಡಿ ವ್ಯವಸ್ಥೆ ಧ್ವಂಸಗೊಂಡಿರುವುದರಿಂದ ಮತ್ತು ಚರಂಡಿ ಹಾಗೂ ಬೀದಿಗಳಲ್ಲಿ ಕೊಳೆತು ನಾರುತ್ತಿರುವ ನಾಗರಿಕರ ದೇಹಗಳು ಪತ್ತೆಯಾಗುತ್ತಿರುವುದರಿದ ಪ್ರದೇಶದಲ್ಲಿ ಕಾಲರಾ ಪಿಡುಗು ಹಬ್ಬಿದೆ ಅಂತ ಅಲ್ಲಿನ ಮೇಯರ್ ಹೇಳಿದ್ದಾರೆ.

ನಾಗರಿಕರು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳುತ್ತಲೇ ಬಂದಿದೆ ಮತ್ತು ಯುದ್ಧ ಸಂಬಂಧಿತ ಅಪರಾಧ ನಡೆಸಿರುವ ಅರೋಪಗಳನ್ನು ತಳ್ಳಿಹಾಕಿದೆ. ಉಕ್ರೇನಿನ ಮಿಲಿಟರಿ ಬಲ ಕಡಿಮೆ ಮಾಡುವುದು ಮತ್ತು ಆ ದೇಶವನ್ನು ‘ನಾಜಿಮುಕ್ತ’ ಮಾಡುವ ಉದ್ದೇಶದಿಂದ ಮಾತ್ರ ತಾನು ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸಿರುವುದಾಗಿ ಅದು ಹೇಳುತ್ತಿದೆ. ಉಕ್ರೇನ್ ಮತ್ತು ಅದರ ಮಿತ್ರರಾಷ್ಟ್ರಗಳು ಯಾವುದೇ ಪ್ರಚೋದನೆ ಇಲ್ಲದೆ ರಷ್ಯಾ ಆಕ್ರಮಣ ನಡೆಸಿದೆ ಎಂದು ಹೇಳುತ್ತಿವೆ.

ಈ ತಿಂಗಳ ಆರಂಭದಲ್ಲಿ ಹೇಳಿಕೆಯೊಂದನ್ನು ನೀಡಿದ ವಿಶ್ವಸಂಸ್ಥೆಯು ರಷ್ಯಾ ಯುದ್ಧ ಆರಂಭಿಸಿದ ಬಳಿಕ 250ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ ಮತ್ತು ಕನಿಷ್ಟ 50 ಲಕ್ಷ ಉಕ್ರೇನಿ ಜನ ಹಿಂಸೆ ಮತ್ತು ಕಿರುಕುಳದ ಅಪಾಯದಲ್ಲಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.