ಅಧಿಕಾರಿಗಳ ಬೇಜವಾಬ್ದಾರಿತನ: 27 ವರ್ಷಗಳ ನಂತ್ರ ಮಗನ ಸಾವಿನ ಸುದ್ದಿ ಅರಿತ ತಾಯಿ!

|

Updated on: Nov 15, 2020 | 6:48 PM

ಬರೋಬ್ಬರಿ 27 ವರ್ಷಗಳ ಬಳಿಕ ವ್ಯಕ್ತಿಯೊಬ್ಬನ ಸಾವಿನ ಸುದ್ದಿ ಆತನ ಕುಟುಂಬಸ್ಥರಿಗೆ ತಲುಪಿರುವ ಸಂಗತಿ ಸ್ಪೇನ್​ ದೇಶದಲ್ಲಿ ವರದಿಯಾಗಿದೆ. ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ಡಿಸೆಂಬರ್ 8, 1990 ರಂದು ನಡೆದ ಕಾರು ಅಪಘಾತದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆದರೆ, ಈ ವಿಚಾರ ತಿಳಿಯದ ಆತನ ಪೋಷಕರು ಘಟನೆ ನಡೆದ 6 ದಿನಗಳ ಬಳಿಕ ಮಗ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಇದೀಗ ಅಪಘಾತದಲ್ಲಿ ತಮ್ಮ ಪುತ್ರ ಮೃತಪಟ್ಟಿದ್ದಾನೆಂಬ […]

ಅಧಿಕಾರಿಗಳ ಬೇಜವಾಬ್ದಾರಿತನ: 27 ವರ್ಷಗಳ ನಂತ್ರ ಮಗನ ಸಾವಿನ ಸುದ್ದಿ ಅರಿತ ತಾಯಿ!
Follow us on

ಬರೋಬ್ಬರಿ 27 ವರ್ಷಗಳ ಬಳಿಕ ವ್ಯಕ್ತಿಯೊಬ್ಬನ ಸಾವಿನ ಸುದ್ದಿ ಆತನ ಕುಟುಂಬಸ್ಥರಿಗೆ ತಲುಪಿರುವ ಸಂಗತಿ ಸ್ಪೇನ್​ ದೇಶದಲ್ಲಿ ವರದಿಯಾಗಿದೆ. ಸ್ಪೇನ್​ನ​ ದಕ್ಷಿಣ ಭಾಗದ ಗ್ರಾನಡಾ ಬಳಿಯ ಬಾಜಾ ಎಂಬ ಪಟ್ಟಣದಲ್ಲಿ ಡಿಸೆಂಬರ್ 8, 1990 ರಂದು ನಡೆದ ಕಾರು ಅಪಘಾತದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆದರೆ, ಈ ವಿಚಾರ ತಿಳಿಯದ ಆತನ ಪೋಷಕರು ಘಟನೆ ನಡೆದ 6 ದಿನಗಳ ಬಳಿಕ ಮಗ ಕಾಣೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಇದೀಗ ಅಪಘಾತದಲ್ಲಿ ತಮ್ಮ ಪುತ್ರ ಮೃತಪಟ್ಟಿದ್ದಾನೆಂಬ ವಿಚಾರವನ್ನು ಬರೋಬ್ಬರಿ 27 ವರ್ಷಗಳ ನಂತರ ಅಧಿಕಾರಿಗಳು ಆತನ ತಾಯಿ ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಹೌದು, ತಮ್ಮ ಬೇಜವಾಬ್ದಾರಿತನದಿಂದ ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆಂಬ ವಿಚಾರವನ್ನು  ಆತನ ಪೋಷಕರಿಗೆ ನೀಡದ ಅಧಿಕಾರಿಗಳು ಬಳಿಕ 2017ರಲ್ಲಿ ಈ ವಿಷಯ ತಿಳಿಸಿದ್ದಾರೆ. ಇಷ್ಟು ವರ್ಷಗಳ ನಂತರ ಮಗನ ಸಾವಿನ ಸುದ್ದಿ ಕೇಳಿದ್ದ ಪೋಷಕರಿಗೆ ಬರಸಿಡಿಲು ಬಡಿದಂತಾಗಿತ್ತು. ಜೊತೆಗೆ, ಅಧಿಕಾರಿಗಳ ನಡೆಯಿಂದ ಬಹಳಷ್ಟು ಆಕ್ರೋಶವೂ ಉಂಟಾಗಿತ್ತು.

ಹೀಗಾಗಿ, ಸ್ಪ್ಯಾನಿಶ್​ ಹೈಕೋರ್ಟ್ ಮೆಟ್ಟಿಲೇರಿದ್ದ ಮೃತನ ತಾಯಿ ಮತ್ತು ಆತನ ನಾಲ್ಕು ಸಹೋದರರಿಗೆ ಸೂಕ್ತ ಪರಿಹಾರ ನೀಡುವಂತೆ  ನ್ಯಾಯಾಲಯವು ಸರ್ಕಾರಕ್ಕೆ ಆದೇಶ ಹೊರಡಿಸಿತ್ತು. ಕೋರ್ಟ್​ ಸೂಚಿಸಿದ ಪರಿಹಾರವನ್ನು ನೀಡಲು ಮೃತನ ಕುಟುಂಬಸ್ಥರು ಸರ್ಕಾರಕ್ಕೆ ಒತ್ತಾಯ ಸಹ ಹೇರಿದ್ದರು. ಆದರೆ ಸರ್ಕಾರ, ಹೈಕೋರ್ಟ್​ ಆದೇಶ ಉಲ್ಲಂಘಿಸಿ ಕಡಿಮೆ ಪರಿಹಾರ ಮೊತ್ತವನ್ನು ನೀಡಿದೆ. ಹಾಗಾಗಿ, ಮೃತನ ಕುಟುಂಬದವರು ಇದೀಗ ಸೂಕ್ತ ಪರಿಹಾರ ಕೊಡಿಸಲು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.