
ಇಷ್ಟು ದಿನ ಅಷ್ಟೆಲ್ಲ ಪ್ರಚಲಿತದಲ್ಲಿ ಇಲ್ಲದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೆಸರು ಇದೀಗ ಸಿಕ್ಕಾಪಟೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ರಷ್ಯಾ ಮತ್ತು ಉಕ್ರೇನ್ ಯುದ್ಧ. ರಷ್ಯಾ ಮತ್ತು ಉಕ್ರೇನ್ ನಡುವೆ ಬಿಕ್ಕಟ್ಟು ಶುರುವಾಗಿ ಹಲವು ದಿನಗಳೇ ಕಳೆದು, ಇದೀಗ ಯುದ್ಧವೆಂಬ ಅಂತಿಮ ಘಟ್ಟದಲ್ಲಿದೆ. ಕಳೆದ ನಾಲ್ಕು ದಿನಗಳಿಂದ ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇದೆ. ತಮ್ಮ ರಾಷ್ಟ್ರಕ್ಕೆ ಒದಗಿದ ಕಷ್ಟದ ಕಾಲದಲ್ಲಿ ಉಕ್ರೇನ್ ಅಧ್ಯಕ್ಷ ಎದೆಗುಂದದೆ ನಿಂತಿದ್ದಾರೆ. ಟ್ವೀಟ್, ವಿಡಿಯೋ ಸಂದೇಶದ ಮೂಲಕ ಉಕ್ರೇನ್ ಜನರಿಗೆ ಧೈರ್ಯ ತುಂಬುವ ಜತೆ, ತಾವೇ ಸ್ವತಃ ಮಿಲಿಟರಿ ವಸ್ತ್ರ ಧರಿಸಿ, ಬಂದೂಕು ಹಿಡಿದು ಸೈನಿಕರ ಜತೆ ಸೇರಿದ್ದಾರೆ. ಅಷ್ಟೆ ಅಲ್ಲ, ಜಗತ್ತಿನ ಅನೇಕ ರಾಷ್ಟ್ರಗಳ ನಾಯಕರು, ಜನರಿಂದ ಮೆಚ್ಚಿಗೆಗಳ ಸುರಿಮಳೆಯೇ ಅವರಿಗೆ ಹರಿದುಬರುತ್ತಿದೆ. ಈ ಮಧ್ಯೆ ಅವರ ಕೆಲವು ಹಳೇ ವಿಡಿಯೋಗಳು ವೈರಲ್ ಆಗುತ್ತಿದ್ದು, ನೆಟ್ಟಿಗರಂತೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ನಿಜಕ್ಕೂ ಒಬ್ಬ ಲೆಜೆಂಡ್ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು, ಇಂಥ ವಿಡಿಯೋಗಳನ್ನೆಲ್ಲ ವೈರಲ್ ಮಾಡಿದಾಕ್ಷಣ ಯುದ್ಧ ನಿಲ್ಲುವುದಿಲ್ಲ ಎಂದೂ ವ್ಯಂಗ್ಯವಾಡಿದ್ದಾರೆ.
ಅಂದಹಾಗೇ, ಈ ವಿಡಿಯೋಗಳು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಡ್ಯಾನ್ಸ್ ವಿಡಿಯೋಗಳು. ಇದು 2006ನೇ ಇಸ್ವಿಯ ಕಾಲದ್ದು. ಆಗಿನ್ನೂ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾಗಿರಲಿಲ್ಲ. ಉಕ್ರೇನ್ನ ಆಗಿನ ಸ್ಟಾರ್ ನೃತ್ಯ ಕಲಾವಿದೆಯರ ಜತೆ ಅವರು ನೃತ್ಯ ಮಾಡುತ್ತಿದ್ದ ವಿಡಿಯೋಗಳು. ಅಂದರೆ ಆಗೊಂದು ಡ್ಯಾನ್ಸಿಂಗ್ ಶೋನಲ್ಲಿ ಭಾಗವಹಿಸಿ, ಅದರಲ್ಲಿ ಗೆದ್ದಿದ್ದರು. ಇದೀಗ ಅದೇ ಶೋದ ಹಲವು ಡ್ಯಾನ್ಸ್ನ ವಿಡಿಯೋ ತುಣುಕುಗಳು ವೈರಲ್ ಆಗಿವೆ. ಅದರಲ್ಲಿ ವೊಲೊಡಿಮಿರ್ ಅವರ ಕಲೆ, ಹಾಕುತ್ತಿದ್ದ ಸ್ಟೆಪ್ಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ..
ಇದನ್ನೂ ಓದಿ: Video: ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಮಾತುಕತೆ; ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ಞತೆ
Published On - 1:09 pm, Sun, 27 February 22