
ಬಹ್ರೈನ್, ಮೇ 25: ಒಬ್ಬ ಮುಗ್ದನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಲ್ಲುವುದಕ್ಕೆ ಸಮಾನ ಎಂದು ಕುರಾನ್ ಹೇಳುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ, ಭಾರತೀಯ ಸಂಸದರ ನಿಯೋಗವು ಪ್ರಪಂಚದೆದುರು ಪಾಕಿಸ್ತಾನ(Pakistan)ದ ಮುಖವಾಡ ಕಳಚುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಭಾರತೀಯ ನಿಯೋಗ ಬಹ್ರೇನ್ ತಲುಪಿದೆ. ಈ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಈ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ಮುಗ್ಧ ಜನರ ಹತ್ಯೆಯನ್ನು ಸಮರ್ಥಿಸಿವೆ, ಜನರನ್ನು ಕೊಲ್ಲುವುದನ್ನು ಸಮರ್ಥಿಸಲು ಅವರು ಧರ್ಮವನ್ನು ಬಳಸಿಕೊಂಡಿದ್ದಾರೆ. ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದರು.
ನಮ್ಮ ರಾಜಕೀಯ ಸಂಬಂಧ ಏನೇ ಇರಲಿ, ನಮ್ಮ ದೇಶದಲ್ಲಿ ಒಮ್ಮತವಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ, ಆದರೆ ನಮ್ಮ ದೇಶದ ಸಮಗ್ರತೆಯ ವಿಷಯಕ್ಕೆ ಬಂದಾಗ, ನಮ್ಮ ನೆರೆಯ ದೇಶವು ಇದನ್ನು ಅರ್ಥಮಾಡಿಕೊಳ್ಳಲು ಇದು ಸರಿಯಾದ ಸಮಯ. ಪಾಕಿಸ್ತಾನವನ್ನು FATF ಬೂದು ಪಟ್ಟಿಗೆ ಮರಳಿ ಸೇರಿಸುವಲ್ಲಿ ಬಹ್ರೇನ್ ಸರ್ಕಾರ ನಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದರು.
ಮತ್ತಷ್ಟು ಓದಿ: ನಾವಿನ್ನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅಮೆರಿಕದಲ್ಲಿ ಭಯೋತ್ಪಾದನೆ, ಪಾಕಿಸ್ತಾನದ ವಿರುದ್ಧ ಶಶಿ ತರೂರ್ ವಾಗ್ದಾಳಿ
ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದರು.ಮುಂದೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗಲು ಧೈರ್ಯ ಮಾಡಿದರೆ, ಅವರ ನಿರೀಕ್ಷೆಗೂ ಮೀರಿರುವ ಪರಿಣಾಮವನ್ನು ಪಾಕಿಸ್ತಾನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದುರದೃಷ್ಟವಶಾತ್, ನಾವು ಅನೇಕ ಮುಗ್ಧ ಜನರ ಪ್ರಾಣವನ್ನು ಕಳೆದುಕೊಂಡಿದ್ದೇವೆ. ಈ ಸಮಸ್ಯೆ ಉದ್ಭವಿಸಲು ಪಾಕಿಸ್ತಾನವೇ ಕಾರಣ. ಪಾಕಿಸ್ತಾನ ಈ ಭಯೋತ್ಪಾದಕ ಗುಂಪುಗಳನ್ನು ಉತ್ತೇಜಿಸುವುದು, ಸಹಾಯ ಮಾಡುವುದು ಮತ್ತು ಪ್ರಾಯೋಜಿಸುವುದನ್ನು ನಿಲ್ಲಿಸದ ಹೊರತು, ಈ ಸಮಸ್ಯೆ ಬಗೆಹರಿಯುವುದಿಲ್ಲ.
Manama, Bahrain 🇧🇭 During an interaction with prominent personalities, AIMIM MP Asaduddin Owaisi stated, “Our government has sent us over here so that the world knows the threat India has been facing for so many years. Unfortunately, we have lost numerous innocent lives. This… pic.twitter.com/v2Kt8DnvHe
— Apt (@ALLANPHILIP70) May 25, 2025
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿ ಪಡೆದಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ನಾಶಪಡಿಸಿತ್ತು. ಅದಾದ ಬಳಿಕ ದಾಳಿ, ಪ್ರತಿ ದಾಳಿ ಮುಂದುವರೆದಿತ್ತು. ಈಗ ಎರಡೂ ದೇಶಗಳು ಒಪ್ಪಂದಕ್ಕೆ ಬಂದಿದ್ದು, ಕದನ ವಿರಾಮ ಘೋಷಿಸಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Sun, 25 May 25