Covid Vaccine ಆಕ್ಸ್‌ಫರ್ಡ್ ವಿವಿ ಪ್ರಯೋಗದ ಮೊದಲ ಹಂತದ ವರದಿ ಬಿಡುಗಡೆ!

| Updated By: ಸಾಧು ಶ್ರೀನಾಥ್​

Updated on: Jul 20, 2020 | 1:22 PM

[lazy-load-videos-and-sticky-control id=”rK3ShpMzpMY”] ದೆಹಲಿ: ಇಂದು ಆಕ್ಸ್‌ಫರ್ಡ್ ವಿವಿಯಿಂದ ಕೊರೊನಾ ಔಷಧಿ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆಯಾಗಲಿದ್ದು, ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಈ ಬಗ್ಗೆ ಮಾಹಿತಿ ಸಿಗಲಿದೆ. ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಕೊರೊನಾಗೆ ಔಷಧ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ 1, 2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಳಿಸಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧಿ ಪ್ರಯೋಗ ಮಾಡಬೇಕಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಔಷಧ ಪ್ರಯೋಗ ಯಶಸ್ವಿಯಾದರೆ […]

Covid Vaccine ಆಕ್ಸ್‌ಫರ್ಡ್ ವಿವಿ  ಪ್ರಯೋಗದ ಮೊದಲ ಹಂತದ ವರದಿ ಬಿಡುಗಡೆ!
Follow us on

[lazy-load-videos-and-sticky-control id=”rK3ShpMzpMY”]

ದೆಹಲಿ: ಇಂದು ಆಕ್ಸ್‌ಫರ್ಡ್ ವಿವಿಯಿಂದ ಕೊರೊನಾ ಔಷಧಿ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆಯಾಗಲಿದ್ದು, ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರಿಂದ ಈ ಬಗ್ಗೆ ಮಾಹಿತಿ ಸಿಗಲಿದೆ.

ಅಸ್ಟ್ರಾಜೆನೆಕ್ ಫಾರ್ಮಾಸೂಟಿಕಲ್ಸ್ ಜತೆಗೂಡಿ ಕೊರೊನಾಗೆ ಔಷಧ ಅಭಿವೃದ್ಧಿಪಡಿಸುತ್ತಿರುವ ಆಕ್ಸ್‌ಫರ್ಡ್ 1, 2ನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಳಿಸಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧಿ ಪ್ರಯೋಗ ಮಾಡಬೇಕಿದೆ. ಈವರೆಗಿನ ಪ್ರಯೋಗದಲ್ಲಿ ಶೇ.80ರಷ್ಟು ಪರಿಣಾಮಕಾರಿಯಾಗಿದೆ. ಔಷಧ ಪ್ರಯೋಗ ಯಶಸ್ವಿಯಾದರೆ ಈ ವರ್ಷವೇ 200 ಕೋಟಿ ಔಷಧ ಉತ್ಪಾದನೆಯ ಗುರಿ ಹಾಕಿಕೊಂಡಿದೆ.

ಸದ್ಯ ಆಕ್ಸ್‌ಫರ್ಡ್ ವಿವಿ ಔಷಧಿಯು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ನ್ಯೂಮೋನಿಯಾ ಕಂಡು ಬಂದಿಲ್ಲ. ಔಷಧಿಯಿಂದ ವೈರಸ್ ಸಾವನ್ನಪ್ಪಿವೆ‌. ಈಗ ಬ್ರೆಜಿಲ್‌ನ ಕೊರೊನಾ ರೋಗಿಗಳ ಮೇಲೆ ಆಕ್ಸ್‌ಫರ್ಡ್ ವಿವಿಯ ಔಷಧ ಪ್ರಯೋಗ ಮಾಡಲಾಗಿದೆ. ಮೊದಲ ಹಂತದ ಪ್ರಯೋಗದ ವರದಿ ಜುಲೈ 20ರ ಸೋಮವಾರ ಅಂದ್ರೆ ಇಂದು ಬಿಡುಗಡೆಯಾಗಲಿದೆ.

ಮನುಷ್ಯರ ಮೇಲೆ ಮೂರನೇ ಹಂತದ ಪ್ರಯೋಗ ಮಾತ್ರ ಬಾಕಿ ಇದೆ. 3ನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ಮಾಡಲಾಗುತ್ತೆ. ಆಕ್ಸ್‌ಫರ್ಡ್ ವಿವಿ ಔಷಧಿಗೆ ‘AZD 1222’ ಎಂದು ಹೆಸರಿಡಲಾಗಿದೆ. ಮತ್ತೊಂದೆಡೆ ಆಮೆರಿಕಾದ ಮೋಡರ್ನಾ ಕಂಪನಿಯು ಜುಲೈ 27 ರಿಂದ ಮೂರನೇ ಹಂತದ ಪ್ರಯೋಗ ಆರಂಭಿಸಲಿದೆ.

Published On - 10:12 am, Mon, 20 July 20