AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಕೊರೊನಾ ಲಾಕ್​ಡೌನ್​ನಿಂದ ಕುಡುಕರ ಸಂಖ್ಯೆ ಹೆಚ್ಚಳ!

ಕೊರೊನೋ ವೈರಸ್ ನಿಗ್ರಹಿಸುವ ಸಲುವಾಗಿ ವಿಶ್ವದ ಹಲವು ದೇಶಗಳಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು. ಆದ್ರೆ,ಈ ಅವಧಿಯಲ್ಲಿ ಕೆಲಸ ಕಾರ್ಯಗಳಿಲ್ಲದಿದ್ದರೂ ಸಹ ಆಲ್ಕೋಹಾಲ್ ಸೇವನೆ ಮಾಡೋರ ಸಂಖ್ಯೆ ಹೆಚ್ಚಾಗಿದೆಯಂತೆ. ಮನೆಯಲ್ಲಿರುವ ಗೃಹಿಣಿಯರೂ ಸೇರಿ ಪುರುಷರೂ ಎಣ್ಣೆ ಕಡೆ ವಾಲಿ, ವಾಲಾಡಿದ್ದು ಅನಾರೋಗ್ಯ ಪ್ರಮಾಣ ಹೆಚ್ಚಾಗಲು ಕಾರಣ ಅಂತಾ ಹೇಳಲಾಗ್ತಿದೆ. ಕೊರೊನಾ ‘ವಿಶ್ವ’ರೂಪ ಕ್ರೂರಿ ಕೊರೊನಾ ವೈರಸ್​ನಿಂದಾಗಿ ಇಡೀ ವಿಶ್ವದ ಜನಜೀವನವೇ ಉಲ್ಟಾಪಲ್ಟಾ ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ರೆ, ಸಾವಿನ ಸಂಖ್ಯೆ ಕೂಡ ಗಗನಕ್ಕೇರ್ತಿದೆ. ವಿಶ್ವದಾದ್ಯಂತ 1,49,42,861 ಜನರಿಗೆ […]

Top News: ಕೊರೊನಾ ಲಾಕ್​ಡೌನ್​ನಿಂದ ಕುಡುಕರ ಸಂಖ್ಯೆ ಹೆಚ್ಚಳ!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Jul 20, 2020 | 3:48 PM

Share

ಕೊರೊನೋ ವೈರಸ್ ನಿಗ್ರಹಿಸುವ ಸಲುವಾಗಿ ವಿಶ್ವದ ಹಲವು ದೇಶಗಳಲ್ಲಿ ಲಾಕ್​ಡೌನ್ ವಿಧಿಸಲಾಗಿತ್ತು. ಆದ್ರೆ,ಈ ಅವಧಿಯಲ್ಲಿ ಕೆಲಸ ಕಾರ್ಯಗಳಿಲ್ಲದಿದ್ದರೂ ಸಹ ಆಲ್ಕೋಹಾಲ್ ಸೇವನೆ ಮಾಡೋರ ಸಂಖ್ಯೆ ಹೆಚ್ಚಾಗಿದೆಯಂತೆ. ಮನೆಯಲ್ಲಿರುವ ಗೃಹಿಣಿಯರೂ ಸೇರಿ ಪುರುಷರೂ ಎಣ್ಣೆ ಕಡೆ ವಾಲಿ, ವಾಲಾಡಿದ್ದು ಅನಾರೋಗ್ಯ ಪ್ರಮಾಣ ಹೆಚ್ಚಾಗಲು ಕಾರಣ ಅಂತಾ ಹೇಳಲಾಗ್ತಿದೆ.

ಕೊರೊನಾ ‘ವಿಶ್ವ’ರೂಪ ಕ್ರೂರಿ ಕೊರೊನಾ ವೈರಸ್​ನಿಂದಾಗಿ ಇಡೀ ವಿಶ್ವದ ಜನಜೀವನವೇ ಉಲ್ಟಾಪಲ್ಟಾ ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ರೆ, ಸಾವಿನ ಸಂಖ್ಯೆ ಕೂಡ ಗಗನಕ್ಕೇರ್ತಿದೆ. ವಿಶ್ವದಾದ್ಯಂತ 1,49,42,861 ಜನರಿಗೆ ವಕ್ಕರಿಸಿಕೊಂಡಿದ್ರೆ, ಸೋಂಕಿನಿಂದ 6,08,911 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ವೈರಸ್​ನಿಂದಾಗಿ 59,819 ಜನರ ಸ್ಥಿತಿ ಚಿಂತಾಜನಕವಾಗಿದೆ.

ಅಮೆರಿಕಕ್ಕೆ ಅಮರಿಕೊಂಡ ವೈರಸ್ ಕೊರೊನಾ ಹೊಡೆತಕ್ಕೆ ಅಮೆರಿಕದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 38,98,550ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 1,43,289ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿ ಅಮೆರಿಕದಲ್ಲಿ ಮಾತ್ರ ಅತಿವೇಗವಾಗಿ ಸೋಂಕು ಹರಡುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 63 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಹೊಕ್ಕಿದ್ರೆ, 392 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ‘ಡ್ರ್ಯಾಗನ್’ ಕೊರೊನಾ ಸೋಂಕಿನ ಮೂಲ ಚೀನಾದಲ್ಲೂ ವೈರಸ್​ನ ನಾಗಾಲೋಟ ಕೊಂಚ ಮಟ್ಟಿಗೆ ತಗ್ಗಿದ್ದರೂ ಸಹ, ಸೋಂಕಿನ ಅಲೆ ಮಾತ್ರ ಇನ್ನೂ ನಿಂತಿಲ್ಲ. ಚೀನಾದಲ್ಲಿ ನಿನ್ನೆ ಮತ್ತೆ 47 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಉರುಗ್ಮಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ದೇಶದಲ್ಲಿ ಈವರೆಗೂ 83.682 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 4,634 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬ್ರೆಜಿಲ್​ನಲ್ಲಿ 20 ಲಕ್ಷ ಸೋಂಕಿತರು! ಬ್ರೆಜಿಲ್​ ದೇಶವನ್ನ ಕೊರೊನಾ ವೈರಸ್ ಹಿಂಡಿ ಹಿಪ್ಪೆ ಮಾಡುತ್ತಿದೆ., ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ವೈರಸ್​ನಿಂದಾಗಿ 20,98,389 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲೇ 23,529 ಸೋಂಕಿತರು ಪತ್ತೆಯಾಗಿದ್ದಾರೆ. ಆದ್ರೆ, ಒಂದು ದಿನದ ಹಿಂದಷ್ಟೇ ಕೇವಲ 5 ಸಾವಿರ ಸೋಂಕಿತರು ಪತ್ತೆಯಾಗಿದ್ದು, ಏಕಾಏಕಿ ಸೋಂಕು ಹೆಚ್ಚಾಗಿದ್ದು ಟೆನ್ಷನ್ ತಂದಿದೆ.

ಬೆಂಬಲಿಗರಿಗೆ ಬ್ರೆಜಿಲ್ ಅಧ್ಯಕ್ಷ ಸಲಾಂ ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋಗೂ ಕೊರೊನಾ ವೈರಸ್ ಅಟ್ಯಾಕ್ ಆಗಿದೆ. ಜುಲೈ 7 ರಿಂದ ರಿಯೋ ಡಿ ಜನೇರಿಯಾದ ಅಲ್ವೊರದಾ ಪ್ಯಾಲೇಸ್​ನಲ್ಲೇ ಐಸೋಲೇಷನ್ ಆಗಿದ್ದಾರೆ. ಆದ್ರೆ, ಮುಂದಿನ ಚುನಾವಣೆಯಲ್ಲಿ ಬ್ರೆಜಿಲ್ ಅಧ್ಯಕ್ಷರನ್ನ ಮತದಾನದ ಮೂಲಕವೇ ಬದಲಾಯಿಸಬೇಕೆಂಬ ಒತ್ತಡ ಹೆಚ್ಚಾಗಿದೆ. ಇದ್ರ ಬೆನ್ನಲ್ಲೇ ತನ್ನ ಬೆಂಬಲಿಗರ ಒತ್ತಾಯದ ಮೇರೆ ಪ್ಯಾಲೆಸ್​ನಿಂದ ಹೊರ ಬಂದ ಬೊಲ್ಸೊನಾರೋ, ಬೆಂಬಲಿಗರಿಗೆ ಶುಭಕೋರಿದ್ರು.

ಚಿಲಿ ರೀಓಪನ್ ಚಿಲಿ ದೇಶದಲ್ಲಿ ಹೆಮ್ಮಾರಿಯ ಅಟ್ಟಹಾಸ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 3,30,930ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 8,503 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ 20 ಸಾವಿರಕ್ಕೂ ಹೆಚ್ಚು ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಆತಂಕದ ಮಧ್ಯೆಯೂ ಚಿಲಿಯಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ತರಕಾರಿ ಮಾರುಕಟ್ಟೆ ಮತ್ತು ಕೆಲ ಶಾಪ್​​ಗಳನ್ನ ತೆರೆಯಲಾಗಿದೆ.

ನೈಜೀರಿಯಾ ಸಚಿವರಿಗೂ ಸೋಂಕು ನೈಜೀರಿಯಾದಲ್ಲಿ ಕೊರೊನಾ ಸೋಂಕಿನ ಅಬ್ಬ ಹೆಚ್ಚಾಗಿದ್ದು, 36,663 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. ಸೋಂಕಿನಿಂದ 789 ಜನರು ಪ್ರಾಣ ಕಳೆದುಕೊಂಡಿದ್ದು, ಪ್ರಸ್ತುತ 20 ಸಾವಿರಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ. ಇದ್ರ ಮಧ್ಯೆ ನೈಜೀರಿಯಾದ ವಿದೇಶಾಂಗ ಸಚಿವರಿಗೂ ಸೋಂಕು ಹೊಕ್ಕಿದೆ. ಜೆಫ್ರಿ ಒನ್ಯೆಮಾಗೆ ಪಾಸಿಟಿವ್ ಬಂದಿದ್ದು, ಅಧ್ಯಕ್ದಷ ಮುಹಮ್ಮದ್ ಬುಹಾರಿಸ್ ಸಂಪುಟದಲ್ಲೂ ಟೆನ್ಷನ್ ಶುರುವಾಗಿದೆ.

ಮಾಸ್ಕ್ ವಿರೋಧಿ ಪ್ರೊಟೆಸ್ಟ್ ಇಂಗ್ಲೆಂಡ್​ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,94,792ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 45 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದು, ದೇಶದಲ್ಲಿ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಲಾಗಿದೆ. ಆದ್ರೆ, ಇದಕ್ಕೆ ಕೆಲವರು ಕ್ಯಾರೆ ಅಂತಿಲ್ಲ. ಲಂಡನ್ ಪಾರ್ಕ್ ಬಳಿ ಜಮಾಯಿಸಿ ನೂರಾರು ಪ್ರತಿಭಟನಾಕಾರರು ನಾನು ಮಾಸ್ಕ್ ಧರಿಸಲ್ಲ ಅಂತಾ ಘೋಷಣೆಗಳನ್ನ ಕೂಗುತ್ತಾ ಪ್ರತಿಭಟನೆ ನಡೆಸಿದ್ರು.

Published On - 3:35 pm, Mon, 20 July 20

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್