ಹಜ್ ಯಾತ್ರೆ ಈ ಬಾರಿ ಹೇಗೆ? ಎಷ್ಟು ಮಂದಿಗೆ ಅವಕಾಶ? ನಿಯಮಗಳು ಕಠಿಣ..
ರಿಯಾದ್: ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವ ತನ್ನ ಯುದ್ಧವನ್ನು ಮುಂದುವರಿಸಿದೆ. ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆಗೆ ವಿವಿಧ ರಾಷ್ಟ್ರಗಳಿಂದ ಬಂದ 1000 ಯಾತ್ರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎಂದು ಸೌದಿ ಅರೇಬಿಯಾ ಪ್ರಕಟಿಸಿದೆ. ಕಳೆದ ಬಾರಿ 25 ಲಕ್ಷ ಮಂದಿ, ಈ ಬಾರಿ ಸಾವಿರ ಮಂದಿಯಷ್ಟೇ! ಆಧುನಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಹೊರಗಿನ ಯಾತ್ರಿಕರನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡಿರುವುದು. ಈ ನಿರ್ಧಾರದಿಂದ ವಿಶ್ವಾದ್ಯಂತ ನೆಲೆಸಿರುವ […]
ರಿಯಾದ್: ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವ ತನ್ನ ಯುದ್ಧವನ್ನು ಮುಂದುವರಿಸಿದೆ. ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆಗೆ ವಿವಿಧ ರಾಷ್ಟ್ರಗಳಿಂದ ಬಂದ 1000 ಯಾತ್ರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ ಎಂದು ಸೌದಿ ಅರೇಬಿಯಾ ಪ್ರಕಟಿಸಿದೆ.
ಕಳೆದ ಬಾರಿ 25 ಲಕ್ಷ ಮಂದಿ, ಈ ಬಾರಿ ಸಾವಿರ ಮಂದಿಯಷ್ಟೇ! ಆಧುನಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾ ಹೊರಗಿನ ಯಾತ್ರಿಕರನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡಿರುವುದು. ಈ ನಿರ್ಧಾರದಿಂದ ವಿಶ್ವಾದ್ಯಂತ ನೆಲೆಸಿರುವ ಮುಸ್ಲಿಮರಲ್ಲಿ ನಿರಾಶೆಯನ್ನು ಹುಟ್ಟುಹಾಕಿದೆ. ಆರೋಗ್ಯದ ಅಪಾಯಗಳಿಂದಾಗಿ ಇದು ಅಗತ್ಯವೆಂದು ಹಲವರು ಒಪ್ಪಿಕೊಂಡಿದ್ದಾರೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ. ಕಳೆದ ವರ್ಷ ಐದು ದಿನಗಳ ಆಚರಣೆಯಲ್ಲಿ ಕಡಿಮೆಯೆಂದ್ರೂ 2.5 ಮಿಲಿಯನ್ ಜನರು ಭಾಗಿಯಾಗಿದ್ರು.
ಅಲ್ಲದೆ, ಜುಲೈ 31 ರಿಂದ ಪ್ರಾರಂಭವಾಗಲಿರುವ ಈ ವರ್ಷದ ಹಜ್‌ಗೆ ಆಯ್ಕೆ ಪ್ರಕ್ರಿಯೆ ಏನೆಂಬುದನ್ನು ಸೌದಿ ಅರೇಬಿಯಾ ಇನ್ನು ಪ್ರಕಟಿಸಿಲ್ಲ. ಈ ಬಾರಿ ಯಾತ್ರಿಕರ ಸಂಖ್ಯೆ ಸುಮಾರು 1,000 ಆಗಿರಬಹುದು ಅಥವಾ ಅದಕ್ಕಿಂತ ಕಡಿಮೆ ಆಗಿರಬಹುದು ಎಂದು ಹಜ್ ಸಚಿವ ಮೊಹಮ್ಮದ್ ಬೆಂಟನ್ ತಿಳಿಸಿದ್ದಾರೆ.
ನಿಯಮಗಳು ಕಠಿಣ.. ಈ ಬಾರಿ ತೀರ್ಥಯಾತ್ರೆಗೆ 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಸೀಮಿತವಾಗಿರುತ್ತದೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅವಕಾಶವಿರುವುದಿಲ್ಲ. ಇದಲ್ಲದೆ, ಪವಿತ್ರ ನಗರವಾದ ಮೆಕ್ಕಾಗೆ ಬರುವ ಮೊದಲು ಯಾತ್ರಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಆಚರಣೆಯ ನಂತರ ಮನೆಯಲ್ಲಿ ಕ್ಯಾರೆಂಟೈನ್ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.