Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮನನ್ನು ಕೊಂದ ತಾಲಿಬಾನ್​ ಉಗ್ರರನ್ನೇ ಹೊಡೆದುರುಳಿಸಿದ ಈ ಪೋರಿ ಯಾರು ಗೊತ್ತಾ?

ಅಫ್ಘಾನಿಸ್ತಾನದ ಗಲ್ಲಿಗಲ್ಲಿ, ನಗರ-ಗ್ರಾಮದಲ್ಲಿ ಅಟ್ಟಹಾಸ ಮೆರೆದಿರುವ ತಾಲಿಬಾನ್​ ಉಗ್ರರ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬೆಳಗ್ಗೆ ಕೂಡ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 8 ಅಫ್ಘಾನ್​ ಸೈನಿಕರನ್ನ ಕೊಂದಿದ್ದಾರೆ ಈ ರಕ್ತಪಿಪಾಸುಗಳು. ಹೀಗಾಗಿ, ಇವರನ್ನ ಕಂಡು ಇಡೀ ದೇಶವೇ ಗಡಗಡ ಅಂತಾ ನಡುಗುತ್ತದೆ. ಆದರೆ, ಇಷ್ಟು ಭೀತಿಯ ನಡುವೆಯೂ 16 ವರ್ಷದ ಪೋರಿಯೊಬ್ಬಳು ಇಬ್ಬರು ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದ್ದಾಳೆ ಅಂತಾ ಹೇಳಿದ್ರೆ ನೀವು ನಂಬ್ತೀರಾ? ನೀವು ನಂಬಲೇ ಬೇಕು. ಅಂದ ಹಾಗೆ, ಕಳೆದ ವಾರ ಅಫ್ಘಾನಿಸ್ತಾನದ […]

ಅಪ್ಪ-ಅಮ್ಮನನ್ನು ಕೊಂದ ತಾಲಿಬಾನ್​ ಉಗ್ರರನ್ನೇ ಹೊಡೆದುರುಳಿಸಿದ ಈ ಪೋರಿ ಯಾರು ಗೊತ್ತಾ?
Follow us
KUSHAL V
| Updated By:

Updated on:Jul 22, 2020 | 8:36 PM

ಅಫ್ಘಾನಿಸ್ತಾನದ ಗಲ್ಲಿಗಲ್ಲಿ, ನಗರ-ಗ್ರಾಮದಲ್ಲಿ ಅಟ್ಟಹಾಸ ಮೆರೆದಿರುವ ತಾಲಿಬಾನ್​ ಉಗ್ರರ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬೆಳಗ್ಗೆ ಕೂಡ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 8 ಅಫ್ಘಾನ್​ ಸೈನಿಕರನ್ನ ಕೊಂದಿದ್ದಾರೆ ಈ ರಕ್ತಪಿಪಾಸುಗಳು. ಹೀಗಾಗಿ, ಇವರನ್ನ ಕಂಡು ಇಡೀ ದೇಶವೇ ಗಡಗಡ ಅಂತಾ ನಡುಗುತ್ತದೆ. ಆದರೆ, ಇಷ್ಟು ಭೀತಿಯ ನಡುವೆಯೂ 16 ವರ್ಷದ ಪೋರಿಯೊಬ್ಬಳು ಇಬ್ಬರು ತಾಲಿಬಾನ್​ ಉಗ್ರರನ್ನು ಹೊಡೆದುರುಳಿಸಿದ್ದಾಳೆ ಅಂತಾ ಹೇಳಿದ್ರೆ ನೀವು ನಂಬ್ತೀರಾ? ನೀವು ನಂಬಲೇ ಬೇಕು.

ಅಂದ ಹಾಗೆ, ಕಳೆದ ವಾರ ಅಫ್ಘಾನಿಸ್ತಾನದ ಘೋರ್​ ಪ್ರಾಂತ್ಯದಲ್ಲಿ ನಡೆದಿರೋ ಈ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು, ಇದೇ ಪ್ರಾಂತ್ಯದ ಗ್ರಾಮವೊಂದರ ನಿವಾಸಿಯಾಗಿರುವ 16 ವರ್ಷದ ಖಮರ್​ ಗುಲ್​ ತನ್ನ ಪುಟ್ಟ ಕುಟುಂಬದೊಂದಿಗೆ ಸಂತೋಷವಾಗಿ ವಾಸವಿದ್ದಳು. ಗ್ರಾಮದ ಮುಖ್ಯಸ್ಥನಾಗಿದ್ದ ಖಮರ್​ ತಂದೆ ಸರ್ಕಾರದ ಅಭಿವೃದ್ಧಿಪರ ಚಿಂತನೆಯ ಬೆಂಬಲಿಗರಾಗಿದ್ದರು. ಹೀಗಾಗಿ, ಸರ್ಕಾರದ ಯೋಜನೆಗಳಿಗೆ ಅವರ ಪ್ರೋತ್ಸಾಹವಿತ್ತು.

ಖಮರ್​ ಗುಂಡಿನ ದಾಳಿಗೆ ಇಬ್ಬರು ಉಗ್ರರು ಮಟ್ಯಾಷ್! ಖಮರ್ ತಂದೆಯ ಆ​ ನಿಲುವು ಅಲ್ಲಿನ ತಾಲಿಬಾನ್​ ಉಗ್ರರಿಗೆ ಅರಗಿಸಿಕೋಳ್ಳೋಕೆ ಆಗಲಿಲ್ಲ. ಹಾಗಾಗಿ, ಖಮರ್​ ತಂದೆಗೆ ತಕ್ಕ ಶಾಸ್ತಿ ಮಾಡಬೇಕು ಅಂತಾ ಗ್ರಾಮಕ್ಕೆ ಬಂದ ಉಗ್ರರು ಖಮರ್​ ತಂದೆ ಮತ್ತು ತಾಯಿಯನ್ನ ಗುಂಡಿಕ್ಕಿ ಕೊಂದೇಬಿಟ್ಟರು. ಈ ವೇಳೆ, ತಂದೆ ತಾಯಿಯ ಕಳೆದುಕೊಂಡರೂ ಧೃತಿಗೆಡದ ಬಾಲಕಿ ಕೂಡಲೇ ತನ್ನ ಮನೆಯೊಳಗಿದ್ದ AK-47 ಗನ್​ ತಂದು ಉಗ್ರರ ಮೇಲೆ ಗುಂಡಿನ ಸುರಿಮಳೆಯನ್ನೇ ಸುರಿಸಿದಳು. ಹುಡುಗಿಯ ಗುಂಡೇಟಿಗೆ ನಲುಗಿಹೋದ ಇಬ್ಬರು ಉಗ್ರರು ಅಲ್ಲೇ ಮಟ್ಯಾಷ್​. ಉಳಿದವರು ಹಣ್ಣುಗಾಯಿ ನೀರುಗಾಯಿಯಾಗಿ ಪ್ರಾಣ ಉಳಿದರೇ ಹೆಚ್ಚು ಅಂತಾ ಅಲ್ಲಿಂದ ಕಾಲ್ಕಿತ್ತರಂತೆ.

ಇನ್ನು ಈ ಪ್ರಕರಣ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ ಖಮರ್​ ಮತ್ತು ಅವಳ ತಮ್ಮನನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. ಜೊತೆಗೆ, ಪುಟ್ಟ ಪೋರಿಯ ಸಾಹಸಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಹೆಣ್ಣುಮಗಳೆಂದರೆ ಹೀಗಿರಬೇಕು ಅಂತಾ ಹಾಡಿಹೊಗಳಿದ್ದಾರೆ.

Published On - 6:45 pm, Tue, 21 July 20

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಮಟ ಮಟ ಮಧ್ಯಾಹ್ನ ಫುಲ್ ಟೈಟ್​ ಆಗಿ ಬಂದು ಬಸ್ ಕೆಳಗೆ ಮಲಗಿದ ಕುಡುಕ!
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಪ್ರದೀಪ್ ಮಾತುಗಳಿಗೆ ಸಭಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದದರು: ಮೋಹನ್
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
ಬದುಕುಳಿದು ಬಂದು ಅಪಘಾತದ ಭೀಕರತೆ ಬಿಚ್ಚಿಟ್ಟ ಪರಸಪ್ಪ
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
VIDEO: ರಾಕಿ ಭಾಯ್ ಸ್ಟೈಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಕನ್ನಡಿಗನ ಎಂಟ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಾರಿನ ಮೇಲೆ ಬಿದ್ದ ಲಾರಿ: ಭಯಾನಕ ಅಪಘಾತ ಡ್ರೋನ್ ಕ್ಯಾಮರಾದಲ್ಲಿ ಕಂಡಿದ್ದು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು
ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು