ಪಾಕಿಸ್ತಾನದ ಮಸೀದಿಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ

ಪಾಕಿಸ್ತಾನದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಸೀದಿಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ನಡೆದಿದೆ. ಪ್ರಪಂಚದಾದ್ಯಂತ ಎಲ್ಲಾ ಮುಸ್ಲಿಮರು ರಂಜಾನ್ ತಿಂಗಳನ್ನು ಪವಿತ್ರ ತಿಂಗಳು ಎಂದು ಕರೆಯುತ್ತಾರೆ, ಅಪ್ಪಿ ತಪ್ಪಿಯೂ ಯಾವುದೇ ರೀತಿಯ ತಪ್ಪಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಈ ರಂಜಾರ್​ ತಿಂಗಳಿನಲ್ಲಿಯೇ ಕ್ಷಮಿಸಲಾಗದ ತಪ್ಪೊಂದು ನಡೆದಿದೆ ಅದೂ ಮಸೀದಿಯಲ್ಲಿ. ಈ ಘಟನೆಯು ಇಡೀ ಮುಸ್ಲಿಂ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಪಾಕಿಸ್ತಾನದ ಮಸೀದಿಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ
Image Credit source: OpIndia

Updated on: Apr 07, 2024 | 11:39 AM

ಪಾಕಿಸ್ತಾನದಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ. ಮಸೀದಿಯೊಂದರಲ್ಲಿ ಅಪ್ರಾಪ್ತ ಬಾಲಕನ ಮೇಲೆ ಅತ್ಯಾಚಾರ ನಡೆದಿದೆ. ಪ್ರಪಂಚದಾದ್ಯಂತ ಎಲ್ಲಾ ಮುಸ್ಲಿಮರು ರಂಜಾನ್ ತಿಂಗಳನ್ನು ಪವಿತ್ರ ತಿಂಗಳು ಎಂದು ಕರೆಯುತ್ತಾರೆ, ಅಪ್ಪಿ ತಪ್ಪಿಯೂ ಯಾವುದೇ ರೀತಿಯ ತಪ್ಪಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಈ ರಂಜಾರ್​ ತಿಂಗಳಿನಲ್ಲಿಯೇ ಕ್ಷಮಿಸಲಾಗದ ತಪ್ಪೊಂದು ನಡೆದಿದೆ ಅದೂ ಮಸೀದಿಯಲ್ಲಿ. ಈ ಘಟನೆಯು ಇಡೀ ಮುಸ್ಲಿಂ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದೆ.

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಬಾಲಕ ಇತಿಕಾಫ್ ಮಾಡುತ್ತಿದ್ದು, ಮಸೀದಿಯೊಳಗೆ ಕುರಾನ್ ಓದುತ್ತಿದ್ದ. ಮುಜಾಫರ್​ಗಢದ ಕೋಟ್​ ಅಡ್ಡಸ್ ಪಟ್ಟಣದ ಸನಾವನ್ ಭೂಖಿ ಚೌಕ್​ನಲ್ಲಿರುವ ಮಸೀದಿಯೊಳಗೆ ಈ ಘಟನೆ ನಡೆದಿದೆ.

ಇತಿಕಾಫ್ ಎಂದರೆ ಏಕಾಂತದಲ್ಲಿ ಅಲ್ಲಾಹನನ್ನು ಆರಾಧಿಸುವುದು. ರಂಜಾನ್​ನ ತಿಂಗಳ ಕೊನೆಯ 10 ದಿನಗಳಲ್ಲಿ ಮುಸ್ಲಿಮರು ಮಸೀದಿಯ ಒಂದೊಂದು ಬದಿ ಅಥವಾ ಮೂಲೆಯಲ್ಲಿ ಕೂತು ಅಲ್ಲಾನನ್ನು ಆರಾಧಿಸುತ್ತಾರೆ.

28 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗುತ್ತಿದ್ದಾಗ ಮಸೀದಿಯ ಮೌಲ್ವಿ ಆತನನ್ನು ಹಿಡಿದಿದ್ದಾರೆ. ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್, 16 ಜನರ ವಿರುದ್ಧ ಎಫ್​ಐಆರ್

ಮಸೀದಿಯ ಜನರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us